InternationalTop News

ಬಿಲ್ ಗೇಟ್ಸ್ ಸೌಂಧರ್ಯಕ್ಕೆ ಕ್ಲೀನ್ ಬೋಲ್ಡ್ ಆದ ಸುಂದರಿ- ಮದುವೆ ಪ್ರಪೋಸಲ್ ಕೂಡ ಇಟ್ಟಿರುವ ನಟಿ

0

ಡಿಜಿಟಲ್ ಡೆಸ್ಕ್- ಮೈಕ್ರೋ ಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಪತ್ನಿ ಮೆಲಿಂದಾ ಗೇಟ್ಸ್ ರಿಂದ ಡೈವೋರ್ಸ್ ಪಡೆದಿದ್ದಾರೆ. ಈಗ ಒಬ್ಬಂಟಿಯಾಗಿರುವ ಬಿಲ್ ಗೇಟ್ಸ್ ಮತ್ತೊಂದು ಮದುವೆ ಆಗುತ್ತಾರೋ ಅಥವಾ ಇಲ್ಲೆವೊ ತಿಳಿಯದು. ಆದರೆ ಕುವೈತ್ ನ ಸುಂದರಿಯೊಬ್ಬಳು ಬಿಲ್ ಗೇಟ್ಸ್ ಸೌಂಧರ್ಯಕ್ಕೆ ಕ್ಲೀನ್ ಬೌಲ್ಡ್ ಆಗಿದ್ದಾಳೆ.

ಕುವೈತ್ ನ ನಟಿ ಶಾಮ್ಸ್ ಬಂದರ್ ಅಲ್- ಅಸ್ಲಾಮಿ ಎಂಬಾಕೆಯೇ ಬಿಲ್ ಗೇಟ್ಸ್ ಹಿಂದೆ ಬಿದ್ದಿರುವ ಸುಂದರಿಯಾಗಿದ್ದಾಳೆ. ಈಕೆ ನಟಿ ಅಷ್ಟೆ ಅಲ್ಲದೆ ಗಾಯಕಿ ಕೂಡ.

ಭವಿಷ್ಯತ್ತಿನಲ್ಲಿ ಕಾಡುವ ಸಾಂಕ್ರಾಮಿಕ ರೋಗದ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಸಿಡುಬಿನಂತಹ ಸಾಂಕ್ರಾಮಿಕ ವೈರಸ್ ಗಳ ಮೂಲಕ ಭಯೋತ್ಪಾದಕರು ದಾಳಿ ಮಾಡುವ ಸಾಧ್ಯತೆ ಇದೆ. ಇಂತಹ ದಾಳಿಗಳನ್ನು ತಡೆಗಟ್ಟಲು ವೈಜ್ಞಾನಿಕ ಸಂಶೋಧನೆ ಅಗತ್ಯವಿದೆ. ಆದ ಕಾರಣ ಇದಕ್ಕೆ ಹಣ ಮೀಸಲಿಡಬೇಕು. ಈ ಕುರಿತಂತೆ ಪುಸ್ತಕವೊಂದನ್ನು ಬಿಡುಗಡೆ ಮಾಡಲಾಗುವುದು ಎಂದು ಬಿಲ್ ಗೇಟ್ಸ್ ಮಾಧ್ಯಮ ಸಂದರ್ಶನವೊಂದರಲ್ಲಿ ಹೇಳಿದ್ದರು.

ಇದನ್ನು ಟ್ವಿಟರ್ ಬಳಕೆದಾರರೊಬ್ಬರು ಬಿಲ್ ಗೇಟ್ಸ್ ರವರ ಈ ಮಾತನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದರು. ಈ ಟ್ವೀಟ್ ನ್ನು ಶಾಮ್ಸ್ ಬಂದರ್ ರೀ ಟ್ವೀಟ್ ಮಾಡಿದ್ದಾರೆ. ಅಷ್ಟೆ ಅಲ್ಲದೆ ಬಿಲ್ ಗೇಟ್ಸ್ ಈ ಮಾತುಗಳಿಗೆ ಶಾಮ್ಸ್ ಬಂದರ್ ಕ್ಲೀನ್ ಬೋಲ್ಡ್ ಆಗಿದ್ದಾರೆ. ಬಿಲ್ ಗೇಟ್ಸ್ ನೀಡಿರುವ ಇಂತಹ ಮಾತುಗಳಿಗೆ ಮನಸೋತಿದ್ದಾರೆ..

ಶಾಮ್ಸ್ ಬಂದರ್ ರೀಟ್ಟೀಟ್ ನ್ನು ಅರೇಬಿಕ್ ಭಾಷೆಯಲ್ಲಿ ಮಾಡಿದ್ದಾರೆ. “ಬಿಲ್ ಗೇಟ್ಸ್ ತುಂಬ ಸುಂದರವಾಗಿದ್ದಾರೆ. ಅಷ್ಟೆ ಅಲ್ಲದೆ ಎಲೆಕ್ಟ್ರಾನಿಕ್ ಯುಗದ ಪ್ರವಾದಿಯಾಗಿದ್ದಾರೆ. ಅವರ ಭವಿಷ್ಯವಾಣಿ ನನಗೆ ತುಂಬ ಇಷ್ಟವಾಯಿತು. ನಾನು ಬಿಲ್ ಗೇಟ್ಸ್ ಅವರನ್ನು ಮದುವೆಯಾಗಲು ಸಿದ್ದನಿದ್ದೇನೆ. ನನ್ನ ಪ್ರಪೋಸಲ್ ನ್ನು ಬಿಲ್ ಗೇಟ್ಸ್ ಅವರು ಒಪ್ಪಿಕೊಳ್ಳುವ ಬಗ್ಗೆ ನಿಮಗೇನನ್ನಿಸುತ್ತೆ” ಅಂತ ನೆಟ್ಟಿಗರನ್ನು ಕೇಳಿದ್ದಾರೆ.

ಬಿಲ್ ಗೇಟ್ಸ್ ಅವರಿಗೆ ಈಗ 66 ವರ್ಷ ವಯಸ್ಸು. ಆದರೆ ಶಾಮ್ ಬಂದರ್ ಗೆ 41 ವರ್ಷ ವಯಸ್ಸು. ಇಬ್ಬರಿಗೂ ವಯಸ್ಸಿನ ಅಂತರವಿದೆ. ಆದರೂ ಶಾಮ್ ಬಂದರ್ ಬಿಲ್ ಗೇಟ್ಸ್ ಅವರನ್ನು ಇಷ್ಟಪಟ್ಟಿದ್ದಾರೆ.
ಇದಕ್ಕೆ ಬಿಲ್ ಗೇಟ್ಸ್ ಯಾವ ರೀತಿಯ ಉತ್ತರ ನೀಡುತ್ತಾರೋ ಎಂಬ ಕುತೂಹಲವಿದೆ.

siteadmin

“ಫಸ್ಟ್ ನೈಟ್ ನಲ್ಲಿ ಎಲ್ಲರೂ ಏನ್ ಮಾಡ್ತಾರೋ ಅದನ್ನೆ ನಾವು ಮಾಡಿದ್ದು”- ರಚಿತಾ ರಾಮ್ ಅವರ ಬೋಲ್ಟ್ ಆ್ಯನ್ಸರ್

Previous article

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಲಾಲ- ತಾಲಿಬಾನ್ ವಿರುದ್ಧ ಹೋರಾಡಿದ ಮಲಾಲಗೆ ಮದುವೆಯ ಬಂಧ

Next article

You may also like

Comments

Comments are closed.