Mysore Story

ಮೈಸೂರಿನಲ್ಲಿ ಅಪ್ಪು V/s ಡಿ ಬಾಸ್ ಅಭಿಮಾನಿಗಳ ನಡುವೆ ಮಾರಾಮಾರಿ- ದರ್ಶನ್ ಎದುರಲ್ಲೆ ಅಪ್ಪು ಫ್ಯಾನ್ ಮೇಲೆ ಹಲ್ಲೆ

0

ಮೈಸೂರು- ಅಪ್ಪು ಚಿತ್ರದ ಹಾಡು ಹಾಡ ಬೇಕೆಂದು ಕೇಳಿದ ಪುನೀತ್ ರಾಜ್ ಕುಮಾರ್ ಅಭಿಮಾನಿ‌‌‌ ಮೇಲೆ ಡಿ ಬಾಸ್ ಸಂಗಡಿಗರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಎದುರೆ ಹಲ್ಲೆ ನಡೆಸಿರುವ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿದೆ. ಡಿ ಬಾಸ್ ಎದುರಿನಲ್ಲೆ ಅಪ್ಪು ಅಭಿಮಾನಿಯನ್ನು ಎಳೆದಾಡಿ ಹಲ್ಲೆ ಮಾಡಿದ್ದಾರೆ.

ಮೈಸೂರಿನ‌ ಹೆಬ್ಬಾಳದಲ್ಲಿರುವ ಮೈಸೂರು ಸೋಷಿಯಲ್ಸ್ ರೆಸಾರ್ಟ್ ನಲ್ಲಿ ಈ ಘಟನೆ ನಡೆದಿದೆ. ಶನಿವಾರ ರಾತ್ರಿ ಪತ್ನಿಯ ಬರ್ತ್ ಡೇ ಪಾರ್ಟಿ ಆಚರಣೆಗೆ ತೆರಳಿದ್ದ ಉದ್ಯಮಿಯನ್ನು ಡಿ ಬಾಸ್ ಬೆಂಬಲಿಗರು ಅಟ್ಟಾಡಿಸಿ ಹೊಡೆದಿದ್ದಾರೆ. ಹಲ್ಲೆ ನೋಡಿಯೂ ಬೆಂಬಲಿಗರನ್ನು ಸುಮ್ಮನಿರು ವಂತೆ ಡಿ ಬಾಸ್ ಹೇಳಲಿಲ್ಲ. ನಟ ದರ್ಶನ್ ಸ್ನೇಹಿತ ಹರ್ಷಾ ಮೆಲಂಟ ಮಾಲೀಕತ್ವದ ಮೈಸೂರು ಸೋಷಿಯಲ್ಸ್ ರೆಸಾರ್ಟ್ ಇದಾಗಿದೆ.

ಬೋಗಾದಿ ನಿವಾಸಿ ಉದ್ಯಮಿ ಯಶವಂತ್ ಕುಮಾರ್ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾರೆ. ದರ್ಶನ್ ಸಂಗಡಿನ ವಿರುದ್ದ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಯಶವಂತ್ ದೂರು ನೀಡಿದ್ದಾರೆ. ದರ್ಶನ್ ಬೆಂಬಲಿಗರ ಮೇಲೆ ಈ ಸಂಬಂಧ ಎಫ್.ಐ.ಆರ್ ದಾಖಲಾಗಿದೆ.

ಬರ್ತ್ ಡೇ ಪಾರ್ಟಿ ವೇಳೆ ಡಿಜೆ ಮ್ಯೂಸಿಕ್ ನಲ್ಲಿ ಅಪ್ಪು ಅಭಿನಯದ ರಾಜಕುಮಾರ ಹಾಡು ಹಾಕುವಂತೆ ಯಶವಂತ್ ಕುಮಾರ್ ಕೇಳಿದ್ದಾರೆ. ಎರಡು ಹಾಡುಗಳ ನಂತರ ಅಪ್ಪು ಹಾಡು ಹಾಕ್ತೇವೆಂದು ಡಿಜೆ ಮ್ಯೂಸಿಕ್ ಸಂಘಟಕರು ಹೇಳಿದರು. ಇದನ್ನು ಕೇಳಿಸಿಕೊಂಡ ಡಿ ಬಾಸ್ ಸಂಗಡಿನಿಂದ ಯಶವಂತ ಕುಮಾರ್ ಏಕಾಏಕಿ ಹಲ್ಲೆಯಾಗಿದೆ. ಮನಬಂದಂತೆ ಎಳೆದಾಡಿ, ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ‌. ಫ್ಯಾಮಿಲಿಯವರ ಎದುರಿನಲ್ಲೇ ಡಿ ಬಾಸ್ ಬೆಂಬಲಿಗರು ಅಟ್ಟಹಾಸ ಮೆರೆದಿದ್ದಾನೆ.

ದೂರದಲ್ಲೇ ಕುಳಿತು ಡಿ ಬಾಸ್ ಮತ್ತು ರೆಸಾರ್ಟ್ ಮಾಲೀಕ‌ ಹರ್ಷಾ ಮೆಲಂಟಾ ವೀಕ್ಷಿಸಿದರು‌. ಅಪ್ಪು ಹಾಡು ಹಾಕಿ ಎಂದು ಕೇಳಿದ್ದಕ್ಕೆ ಇವರಿಗ್ಯಾಕೆ ಇಷ್ಟೊಂದು ಸಿಟ್ಟು. ರಾಜ್ ಕುಮಾರ್ ರಂತೆ ಅಪ್ಪು ವನ್ನು ಕನ್ನಡಿಗರು ಮನೆ ಮಗನಂತೆ ನೋಡುತ್ತಾರೆ. ಅವರು ಹಾಡು‌‌ ಕೇಳಬಾರದು, ಇಲ್ಲಿ ಡಿ ಬಾಸ್ ಹಾಡುಗಳನ್ನು ಮಾತ್ರ ಕೇಳಬೇಕು ಎಂದೇಳಿದರೆ ಹೇಗೆ ಎಂಬ ಯಶವಂತ ಪ್ರಶ್ನಿಸಿದ್ದಾರೆ.

ಇನ್ನೂ ಇಲ್ಲಿಯೇ ಇದ್ದರೆ ನಿನ್ನನ್ನ ಮುಗಿಸ್ತೀವಿ ಅಂತಾ ಜೀವ ಬೆದರಿಕೆ ಕೂಡ ಹಾಕಿದ್ದಾರೆ.
ಡಿ‌ ಬಾಸ್ ಹಾಗೂ ಸಂಗಡಿಗರ ವರ್ತನೆಗೆ ಯಶವಂತ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.
ಇಷ್ಟೊಂದು ದಬ್ಬಾಳಿಕೆ ಒಳ್ಳೆಯದಲ್ಲವೆಂದು ಯಶವಂತ್ ಹೇಳಿದ್ದಾರೆ.

siteadmin

ಕೊಡಗಿನಲ್ಲಿ ಎಸ್ಟೇಟ್ ಮಾಲೀಕಳ ಮೇಲೆ ಅತ್ಯಾಚಾರಕ್ಕೆ ಯತ್ನ- ಮಾರಣಾಂತಿಕ ಹಲ್ಲೆ

Previous article

ಶಾಸಕ ತನ್ವೀರ್ ಸೇಠ್ ರಾಜಕೀಯ ನಿವೃತ್ತಿ- ಬೆಂಬಲಿಗರಿಂದ ಆತ್ಮಹತ್ಯೆಗೆ ಯತ್ನ- ತನ್ವೀರ್ ಮನೆ ಮುುಂದೆ “ಹೈಡ್ರಾಮಾ”

Next article

You may also like

Comments

Leave a reply

Your email address will not be published. Required fields are marked *

More in Mysore Story