Mysore Story

ಮೈಸೂರಿನ ಚೆಸ್ಕಾಂ ಎಂ.ಡಿ.ಶ್ರೀಧರ್ ಅಮಾನತು- ಏಕೆ ಗೊತ್ತಾ…?

0

ಮೈಸೂರು- ಮೈಸೂರಿನಲ್ಲಿರುವ ಚೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್.ಶ್ರೀಧರ್ ಅಮಾನತು ಮಾಡಿ ರಾಜ್ ಸರ್ಕಾರ ಆದೇಶ ಹೊರಡಿಸಿದೆ.

ಮೈಸೂರಿನ ಪಿರಿಯಾಪಟ್ಟಣ ತಾಲೂಕಿನ ಮುತ್ತಿನಮುಳಸೋಗೆಯಲ್ಲಿ ಕಾವೇರಿ ನದಿಯಿಂದ 79 ಗ್ರಾಮ ಹಾಗೂ  150 ಕೆರೆಗಳಿಗೆ ನೀರು ಸರಬರಾಜು ಮಾಡುವ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಟನ್ ಒತ್ತುವ ಮೂಲಕ ಚಾಲನೆ ನೀಡಬೇಕಿತ್ತು.

ಆದರೆ ಸಿದ್ದರಾಮಯ್ಯ ಎಷ್ಟೆ ಬಾರಿ ಬಟನ್ ಒತ್ತಿದರೂ ಅದು ಆನ್ ಆಗಲಿಲ್ಲ. ಇದರಿಂದ ಸಿದ್ದರಾಮಯ್ಯ ತೀವ್ರ ಮುಜುಗರ ಅನುಭವಿಸಿದರು.

ಈ ಬಗ್ಗೆ ವಿವರಣೆ ಪಡೆಯಲು ಶ್ರೀಧರ್ ಸ್ಥಳದಲ್ಲಿ ಇರದೆ ಗೈರು ಹಾಜರಾಗಿದ್ದರು.

ಇದನ್ನು ಸಿದ್ದರಾಮಯ್ಯ ಗಂಭೀರವಾಗಿ ಪರಿಗಣಿಸಿದರು. ಬೆಳಿಗ್ಗೆ ಕರ್ತವ್ಯ ಲೋಪ ಕಂಡು ಬಂದ ನಂತರ ಸಂಜೆ ವೇಳೆಗೆ ಸರ್ಕಾರ ಶ್ರೀಧರ್ ಅವರನ್ನು ಅಮಾನತು ಮಾಡಿದೆ.

siteadmin

ಅನ್ಯ ಕೋಮಿನ ಯುವಕನ ಜೊತೆ ಯುವತಿ ಪ್ರೀತಿ- ತಂಗಿ, ತಾಯಿ ಕೊಲೆ ಮಾಡಿದ ಪಾತಕಿ

Previous article

ರಾಮ ಮಂದಿರ ಉದ್ಘಾಟನೆಯಿಂದ ಬಿಜೆಪಿಗೆ ರಾಜಕೀಯ ಲಾಭ ಆಗಲ್ಲ- ಮುಖ್ಯಮಂತ್ರಿ‌ ಸಿದ್ದರಾಮಯ್ಯ

Next article

You may also like

Comments

Leave a reply

Your email address will not be published. Required fields are marked *

More in Mysore Story