Mysore Story

ನಂಜನಗೂಡು ಶ್ರೀಕಂಠೇಶ್ವರ ಪಂಚ ಮಹಾ ರಥೋತ್ಸವ ವಿಜೃಂಭಣೆಯಿಂದ ಆಗಲಿ

0

ನಂಜನಗೂಡು-ದಕ್ಷಿಣಕಾಶಿ ಪ್ರಖ್ಯಾತಿಯ ನಂಜನಗೂಡು ಶ್ರೀ ನಂಜುಂಡೇಶ್ವರನ ಜಾತ್ರಾ ಮಹೋತ್ಸಮಮಾರ್ಚ್ 22 ರಂದು ಜರುಗಲಿದ್ದು ಜಾತ್ರೆ ಯಶಸ್ಸಿಗೆ ಸುತ್ತಲಿನ ಏಳು ಹಳ್ಳಿ ಗ್ರಾಮಸ್ಥರು, ವಿವಿಧ ಇಲಾಖೆಗಳ ಅಧಿಕಾರಿಗಳು ಸಹಕರಿಸಬೇಕೆಂದು ನಂಜನಗೂಡು ಶಾಸಕರಾದ ದರ್ಶನ್ ಧೃವನಾರಾಯಣ್ ಹೇಳಿದರು.

ನಂಜನಗೂಡು ಸುಕ್ಷೇತ್ರದ ದಾಸೋಹ ಭವನದಲ್ಲಿ ಮಂಗಳವಾರ ನಡೆದ ಪೂರ್ವ ಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿವರ್ಷ ನಡೆಯುವ ವೈಭವದ ಜಾತ್ರೆಗೆ ಹೊರರಾಜ್ಯ ಹಾಗೂ ಹೊರದೇಶಗಳಿಂದ ಲಕ್ಷಾಂತರ ಭಕ್ತಾಧಿಗಳು ಆಗಮಿಸುತಿದ್ದು ಅವರುಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದರೊಂದಿಗೆ ರಕ್ಷಣೆಯ ಜವಾಬ್ದಾರಿಯು ನಮ್ಮ ಮೇಲಿದೆ.

ನಗರದ ರಸ್ತೆಗಳು, ವಿದ್ಯುತ್ ದೀಪಗಳು, ಜನಸಂದಣಿ ನಿಯಂತ್ರಿಸುವಲ್ಲಿ ಪೊಲೀಸರ ಪಾತ್ರ ಪ್ರಮುಖವಾಗಿದ್ದು, ಜನ ಸ್ನಾನಕ್ಕೆ ಇಳಿಯುವಲ್ಲಿ ಜಾಗ್ರತೆ ವಹಿಸುವುದು, ಮಕ್ಕಳು ಪೋಷಕರಿಂದ ತಪ್ಪಿಸಿಕೊಳ್ಳದಂತೆ ಮುಂಜಾಗ್ರತೆ ವಹಿಸಬೇಕೆಂದರು.

ಜಿಲ್ಲಾಧಿಕಾರಿ ಡಾ.ರಾಜೇಂದ್ರ ಅವರು ಮಾತನಾಡಿ ಬಹಳ ಜನಸಂದಣಿ ಸೇರುವ ಜಾತ್ರಾ ಮಹೋತ್ಸವ ಇದಾಗಿದ್ದು, ಅನಧಿಕೃತ ವ್ಯಕ್ತಿಗಳ ಬಗೆಗೆ ಎಚ್ಚರಿಕೆಯಿಂದಿರಬೇಕು, ದೊಡ್ಡ ತೇರು ಎಳೆಯುವಾಗ ಜಾಗ್ರತೆ ಬಹಳ ಮುಖ್ಯ. ಏಳು ಗ್ರಾಮದ ಗ್ರಾಮಸ್ಥರ ಸಹಕಾರವು ಮುಖ್ಯವಾಗಿದ್ದು, ಆ ಸಂದರ್ಭದಲ್ಲಿ ಜಾಗರೂಕತೆ ಬಹಳ ಮುಖ್ಯ. ಮಹಿಳೆಯರು,ಮಕ್ಕಳು ಹಾಗೂ ಅವರ ಆಭರಣಗಳ ಬಗೆಗೆ ಎಚ್ಚರ ವಹಿಸಿ ಎಂದರು.

ಚೆಸ್ಕಾಂ ನವರು ಅನಿಯಂತ್ರಿತ ವಿದ್ಯುತ್ ಸರಬರಾಜಿನೊಂದಿಗೆ ವರಣರಂಜಿತ ದೀಪಾಲಂಕಾರ ಮಾಡುವುದು ಮತ್ತು ವಿವಿಧ ಇಲಾಖೆಗಳವರು ತಮ್ಮ ಕಟ್ಟಡಗಳ ಮೇಲೆ ದೀಪಾಲಂಕಾರ ಮಾಡುವುದರೊಂದಿಗೆ ಜಾತ್ರಾ ರಂಗನ್ನು ಹೆಚ್ಚುವಂತೆ ನೋಡಿಕೊಳ್ಳಿ ಎಂದರು.

ದೇವಸ್ಥಾನದ ಸುತ್ತಮುತ್ತ ಸಿಸಿಟಿವಿ ಕ್ಯಾಮರಾ ಅಳವಡಿಸುವುದರೊಂದಿಗೆ ಸ್ವಚ್ಚತೆ,ಭದ್ರತಾ ಸಿಬ್ಬಂದಿ ಎಲ್ಲಾ ವ್ಯವಸ್ಥೆಗಳನ್ನು ಮಾಡುವುದು.

ಶಕ್ತಿ ಯೋಜನೆ ಹಿನ್ನೆಲೆ ಮಹಿಳಾ ಭಕ್ತರ ಸಂಖ್ಯೆ ಹೆಚ್ಚಾಗುವ ಕಾರಣ ಕೆ.ಎಸ್.ಆರ್.ಟಿ.ಸಿ ವತಿಯಿಂದ ಹೆಚ್ಚಿನ ಬಸ್ಗಳ ವ್ಯವಸ್ಥೆ ಮಾಡಿ, ನಂಜನಗೂಡು ಡಿಪೋ ಅಷ್ಟನ್ನೆ ನೆಚ್ಚಿಕೊಳ್ಳದೆ ಅಕ್ಕಪಕ್ಕದ ಡಿಪೋಗಳಿಂದ ಬಸ್ ತರಿಸಿ ಎಂದರು.

ವಾಹನ ಪಾರ್ಕಿಂಗ್, ಸೂಚನಾ ಫಲಕಗಳು ವ್ಯವಸ್ಥಿತವಾಗಿರಲಿ ಎಂದರು.

ಸಭೆಯಲ್ಲಿ ಜಿ.ಪಂ ಉಪಕಾರ್ಯದರ್ಶಿ ಕೃಷ್ಣಂ ರಾಜು, ಅಡಿಷನಲ್ ಎಸ್ಪಿ ಬಾಬು, ಏಳು ಹಳ್ಳಿಗಳ ಯಜಮಾನರು,ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

siteadmin

ಬೆಂಗಳೂರಿನ ವಿಂಡ್ಸರ್ ಮ್ಯಾನರ್ ಬ್ರಿಡ್ಜ್ ನಿಂದ ಬಿದ್ದ ವ್ಯಕ್ತಿ

Previous article

ಲೋಕಸಭೆ ಚುನಾವಣೆ- ಮಂಡ್ಯ ನಾಯಕರ ಜೊತೆ ಹೆಚ್.ಡಿ.ಕುಮಾರಸ್ವಾಮಿ ಸಮಾಲೋಚನೆ

Next article

You may also like

Comments

Leave a reply

Your email address will not be published. Required fields are marked *

More in Mysore Story