Mysore Story

ಮೈಸೂರು ಅರಮನೆಯ ಮಾಗಿ ಉತ್ಸವದಲ್ಲಿ “ಅರ್ಜುನ”ನ ಅಪರೂಪದ ಛಾಯಾಚಿತ್ರ ಪ್ರದರ್ಶನ

0

ವನ್ಯಜೀವಿ ಛಾಯಾಗ್ರಾಹಕರಾದ ಜಿ.ಎಸ್.ರವಿಶಂಕರ್ ಮತ್ತು ಹಿರಿಯ ಪತ್ರಕರ್ತರಾದ ಕೆ.ಶಶಿಕುಮಾರ್ ಅವರು ತೆಗೆದಿರುವ “ಅರ್ಜುನ”ನ ಅಪರೂಪದ ಛಾಯಾಚಿತ್ರಗಳನ್ನು ಮುಖ್ಯಮಂತ್ರಿ ಸಿದ್ಸರಾಮಯ್ಯ ಅವರು ವೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸಿದರು.

ಕ್ರಿಸ್ಮಸ್ ಹಾಗೂ ನೂತನ ವರ್ಷಾಚರಣೆಯ ಅಂಗವಾಗಿ ಮೈಸೂರು ಅರಮನೆಯ ಆವರಣದಲ್ಲಿ ಏರ್ಪಡಿಸಿರುವ “ಮಾಗಿ ಉತ್ಸವ”ದಲ್ಲಿ ಅಂಬಾರಿ ಆನೆ “ಅರ್ಜುನ” ನ ಸ್ಮರಣಾರ್ಥ “ಅರ್ಜುನ ಸವಿನೆನಪು” ಎಂಬ ಅರ್ಜುನನ ವಿಶೇಷ ಛಾಯಾಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿದರು. ಜೊತೆಗೆ ಅರ್ಜುನನ ವಿಭಿನ್ನ ಭಂಗಿಗಳ ಚಿತ್ರಗಳನ್ನು ಆಸಕ್ತಿಯಿಂದ ವೀಕ್ಷಿಸಿದರು.

ಸಚಿವರಾದ ಡಾ.ಹೆಚ್.ಸಿ.ಮಹಾದೇವಪ್ಪ, ಶಾಸಕ ಟಿ.ಎಸ್.ಶ್ರೀವತ್ಸ, ವಿಧಾನ ಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ, ಲೇಖಕಿ ಎ. ಸುಲೇಖ ಮಾಳಿಯಕ್ಕಲ್, ಕರ್ನಾಟಕ ಕಾವಲು ಪಡೆಯ ರಾಜ್ಯಾಧ್ಯಕ್ಷ ಎಂ ಮೋಹನ್ ಕುಮಾರ್ ಗೌಡ ಹಾಗೂ ಇತರ ಗಣ್ಯರು ಸಹ ಚಿತ್ರಗಳನ್ನು ವೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸಿದರಲ್ಲದೆ “ಅರ್ಜುನ”ನನ್ನು ಸ್ಮರಿಸಿದರು.

siteadmin

ಮೈಸೂರಿನ ಕೈಗಾರಿಕೆಗಳಲ್ಲಿ ಕಡ್ಡಾಯವಾಗಿ ಸ್ಥಳಿಯರಿಗೆ ಉದ್ಯೋಗ ನೀಡಿ- ಸಿದ್ದರಾಮಯ್ಯ ಆದೇಶ

Previous article

“ನಾನು ಹೀರೋ ಅಲ್ಲ; ಯಾವತ್ತಿದ್ರೂ ವಿಲನ್”- ಫೈರ್ ಬ್ರ್ಯಾಂಡ್ ಫೈರ್

Next article

You may also like

Comments

Leave a reply

Your email address will not be published. Required fields are marked *

More in Mysore Story