College Beats

ನರ್ಸ್ ಟಾರ್ಗೆಟ್ ಮಾಡಿ ರೀಲ್ಸ್- 11 ಎಂಬಿಬಿಎಸ್​ ವಿದ್ಯಾರ್ಥಿಗಳ ಸಸ್ಪೆಂಡ್

0

ನರ್ಸ್​​ಗಳನ್ನು ಗುರಿಯಾಗಿಸಿಕೊಂಡು ರೀಲ್ಸ್​ಹುಬ್ಬಳ್ಳಿಯ ಕಿಮ್ಸ್​ನ 11 ಎಂಬಿಬಿಎಸ್​ ವಿದ್ಯಾರ್ಥಿಗಳು ಅಮಾನತು
ನರ್ಸ್​ಗಳ ಬಗ್ಗೆ ಅವಹೇನಕಾರಿಯಾಗಿ ರೀಲ್ಸ್ ಮಾಡಿದ್ದ ಹುಬ್ಬಳ್ಳಿಯ ಕಿಮ್ಸ್​​ನ 11 ವೈದ್ಯಕೀಯ ವಿದ್ಯಾರ್ಥಿಗಳನ್ನು ಒಂದು ವಾರದ ಮಟ್ಟಿಗೆ ಅಮಾನತು ಮಾಡಿ ಪ್ರಾಂಶುಪಾಲ ಡಾ.ಈಶ್ವರ ಹೊಸಮನಿ ಆದೇಶ ಹೊರಡಿಸಿದ್ದಾರೆ.

ಹುಬ್ಬಳ್ಳಿ- ನರ್ಸ್​ಗಳ ಬಗ್ಗೆ ಅವಹೇನಕಾರಿಯಾಗಿ ರೀಲ್ಸ್ ಮಾಡಿದ್ದ ಹುಬ್ಬಳ್ಳಿಯ (Hubballi) ಕಿಮ್ಸ್​​ನ (KIMS) 11 ಜನ ವೈದ್ಯಕೀಯ ವಿದ್ಯಾರ್ಥಿಗಳನ್ನು (Medical Students) ಒಂದು ವಾರದ ಮಟ್ಟಿಗೆ ಅಮಾನತು ಮಾಡಿ ಪ್ರಾಂಶುಪಾಲ ಡಾ.ಈಶ್ವರ ಹೊಸಮನಿ ಆದೇಶ ಹೊರಡಿಸಿದ್ದಾರೆ.

ವಿದ್ಯಾರ್ಥಿಗಳ ರೀಲ್ಸ್​ ವೈರಲ್​ ಆಗುತ್ತುದ್ದಂತೆ ಆಕ್ರೋಶಗೊಂಡಿದ್ದ ಕಿಮ್ಸ್​​ ನರ್ಸ್​​ಗಳು ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.

ಹೀಗಾಗಿ ಒಂದು ವಾರಗಳ ಕಾಲ ಅಮಾನತು ಮಾಡಲಾಗಿದೆ. ರೀಲ್ಸ್ ಮಾಡಿದ್ದು ಮನರಂಜನೆಗೆ. ಆದರೂ ನಾವು ನರ್ಸ್​ಗಳ ಬಳಿ ಕ್ಷಮೆ ಕೇಳುತ್ತೇವೆ ಎಂದು ವಿದ್ಯಾರ್ಥಿಗಳು ವಿಡಿಯೋ ಮೂಲಕ ಕ್ಷಮೆ ಕೇಳಿದ್ದಾರೆ.

ಇನ್ನು ವಿದ್ಯಾರ್ಥಿಗಳು ನರ್ಸ್​ಗಳ ಬಗ್ಗೆ ಅವಹೇಳನಕಾರಿಯಾಗಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟ ಹಿನ್ನಲೆಯಲ್ಲಿ ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಆಗ್ರಹಿಸಿ ಕೋಲಾರ ಜಿಲ್ಲಾಸ್ಪತ್ರೆ ಎದುರು ನರ್ಸ್​​ಗಳು ಪ್ರತಿಭಟನೆ ಮಾಡಿ ಕ್ರಮಕ್ಕೆ ಆಗ್ರಹಿಸಿದ್ದರು.

siteadmin

ಕಾವೇರಿ ಗ್ರಾಮೀಣ ಬ್ಯಾಂಕ್ ಮ್ಯಾನೇಜರ್ ಆತ್ಮಹತ್ಯೆಗೆ ಶರಣು

Previous article

ಮೈಸೂರಿನ ಹೆಚ್.ಡಿ.ಕೋಟೆ ಬಳಿ ರಾಜಾರೋಷವಾಗಿ ಡ್ರಗ್ಸ್ ಮಾರಾಟ- ನಶೆಯಲ್ಲಿ ಯುವಕ, ಯುವತಿಯರ ಅಸಭ್ಯ ವರ್ತನೆ

Next article

You may also like

Comments

Leave a reply

Your email address will not be published. Required fields are marked *