Life Style

ನಿದ್ರೆ ಸ್ಪರ್ಧೆಯಲ್ಲಿ 5 ಲಕ್ಷ ರೂಪಾಯಿ ಬಹುಮಾನ ಗೆದ್ದ ಭಾರತೀಯ ಯುವತಿ- 4.5 ಲಕ್ಷ ಜನರಲ್ಲಿ ಇವಳಿಗೆ ಒಲಿಯಿತು ಅದೃಷ್ಟ

0

ಅತಿಯಾಗಿ ಹಾಗೂ ಕಡಿಮೆ ನಿದ್ರೆ ಮಾಡಬಾರದು ಅಂತ ವೈದ್ಯರು ಹೇಳುತ್ತಾರೆ. ಕಡಿಮೆ ನಿದ್ರೆ ಆರೋಗ್ಯದ ಮೇಲೆ ಎಷ್ಟು ಪರಿಣಾಮ ಬೀರುತ್ತೊ, ಹೆಚ್ಚು ನಿದ್ರೆ ಕೂಡ ಆರೋಗ್ಯದ ಮೇಲೆ ಅಷ್ಟೆ ಪರಿಣಾಮ ಬೀರುತ್ತದೆ.

ಆದರೆ ಇಲ್ಲೊಬ್ಬ ಯುವತಿ ದಿನಕ್ಕೆ ಸತತ 9 ಗಂಟೆಗಳ ಕಾಲ ನಿದ್ರೆ ಮಾಡಿ 5 ಲಕ್ಷ ರೂಪಾಯಿ ಬಹುಮಾನ ದೋಚಿಕೊಂಡಿದ್ದಾಳೆ. ಪಶ್ಚಿಮ ಬಂಗಾಳದ ಹೂಗ್ಲಿಯ ಶ್ರೀರಾಂಪುರದ ತ್ರಿಪರ್ಣ ಚಕ್ರವರ್ತಿ ಬಹುಮಾನ ಗೆದ್ದ ಯುವತಿ. ಈಕೆ ಅಮೇರಿಕಾ ಮೂಲದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಸದ್ಯ ವರ್ಕ್ ಫ್ರಂ ಹೋಮ್ ನಲ್ಲಿದ್ದಾಳೆ.

Wakefit ಎಂಬ ಸಂಸ್ಥೆ ನಿದ್ರೆ ಮಾಡುವ ಸ್ಪರ್ಧೆ ಆಯೋಜಿಸಿತ್ತು. ವೆಬ್ ಸೈಟ್ ಮೂಲಕ ಸ್ಪರ್ಧೆಯ ಬಗ್ಗೆ ತ್ರಿಪರ್ಣ ಮಾಹಿತಿ ಪಡೆದಳು.

ನಿದ್ರೆ ಮಾಡುವ ಸ್ಪರ್ಧೆಯಲ್ಲಿ ಇಡೀ ವಿಶ್ವದಲ್ಲೆ 4.5 ಲಕ್ಷ ಜನರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಇವರಲ್ಲಿ 15 ಸ್ಪರ್ಧಿಗಳು ಆಯ್ಕೆಯಾಗಿದ್ದರು. ಅಂತಿಮವಾಗಿ ನಾಲ್ವರು ಸ್ಪರ್ಧಿಗಳು ಫೈನಲ್ ಗೆ ತಲುಪಿದರು.

ಎಲ್ಲಾ ನಾಲ್ವರು ಸ್ಪರ್ಧಿಗಳಿಗೆ ಹಾಸಿಗೆ ಮತ್ತು ಸ್ಲೀಪ್ ಟ್ರ್ಯಾಕರ್ ಕೊಟ್ಟು ಮಲಗುವ ಕೌಶಲ್ಯ ಪ್ರದರ್ಶಿಸುವಂತೆ ಸೂಚಿಸಲಾಗಿತ್ತು. ನಾಲ್ವರು 100 ದಿನಗಳು ಸತತ 9 ಗಂಟೆಗಳ ಕಾಲ ಒಂದು ಕ್ಷಣವೂ ಬಿಡದೆ ನಿದ್ರೆ ಮಾಡಿರುವ ತ್ರಿಪರ್ಣ ಚಕ್ರವರ್ತಿ ನಿದ್ರೆ ಸ್ಪರ್ಧೆಯಲ್ಲಿ ವಿಜೇತಳಾಗಿದ್ದಾಳೆ. ಈ ಮೂಲಕ 5 ಲಕ್ಷ ರೂಪಾಯಿ ಬಹುಮಾನ ಗೆದ್ದಿದ್ದಾಳೆ.

siteadmin

ಕಂಠ ಪೂರ್ತಿ ಕುಡಿದು ಎಣ್ಣೆ ಏಟಿನಲ್ಲಿ ಪಾಠ ಮಾಡುತ್ತಿದ್ದ ಶಿಕ್ಷಕಿ- ಬಾಟಲ್ ಸಮೇತ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಳು

Previous article

ಪಾಕ್ ಹಾಗೂ ಆಪ್ಘಾನ್ ಆಟಗಾರರ ಗುದ್ದಾಟ- ಔಟ್ ಆಗಿ ರೊಚ್ಚಿಗೆದ್ದು ಬ್ಯಾಟ್ ಬೀಸಿದ ಪಾಕಿಸ್ತಾನದ ಆಸೀಫ್ ಅಲಿ

Next article

You may also like

Comments

Comments are closed.

More in Life Style