Uncategorized

ಮೈಸೂರಿನಲ್ಲಿ ನಾಳೆಯಿಂದ ‘ಗೋವಾ 60 ಸಂಭ್ರಮ’- ಗೋವಾದ ಅದ್ಭುತ ಪ್ರವಾಸಿತಾಣಗಳ ಬಗ್ಗೆ ಪರಿಚಯ

0
IMG-20221013-WA0041-800x400

ಮೈಸೂರು- ಪ್ರವಾಸಿಗರ ಸ್ವರ್ಗ ಗೋವಾದ ಮತ್ತಷ್ಟು ಪ್ರವಾಸಿತಾಣಗಳ ಬಗ್ಗೆ ಪರಿಚಯ ಮಾಡುವ ಗೋವಾ 60 ರ ಸಂಭ್ರಮ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯಲಿದೆ.

ಮೈಸೂರಿನ ಫೋರಂ ಮಾಲ್ ನ ಫ್ಲೋರ್ ನಲ್ಲಿ ನಾಳೆಯಿಂದ ಮೂರು ದಿನಗಳ ಕಾಲ ಈ ಕಾರ್ಯಕ್ರಮ ನಡೆಯಲಿದೆ.

ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಗೋವಾ ಪ್ರವಾಸೋದ್ಯಮ ಇಲಾಖೆಯ ವ್ಯವಸ್ಥಾಪಕ ಅನಿಲ್ ದಲಾಲ್ ಈ ಬಗ್ಗೆ ವಿವರ ನೀಡಿದರು.

ಗೋವಾದ ಬೀಚ್ ಗಳು, ದೇವಸ್ಥಾನ, ಚರ್ಚ್, ಕೋಟೆಗಳು, ಅರಣ್ಯದಲ್ಲಿ ಸಫಾರಿ, ಬರ್ಡ್ ಸೆಂಚ್ಯುರಿ, ದೂದ್ ಸಾಗರ್ ಸೇರಿದಂತೆ ಇತರೆ ಫಾಲ್ಸ್ ಗಳು ಹಾಗೂ ಗೋವಾ ಅದ್ಭುತ ಪ್ರವಾಸಿತಾಣಗಳ ಬಗ್ಗೆ ಪರಿಚಯ ಮಾಡಿಕೊಡಲಾಗುವುದು ಎಂದರು.

ಗೋವಾ ಪ್ರವಾಸಿ ತಾಣಗಳ ಬಗ್ಗೆ ಇಡೀ ಭಾರತದ ಎಲ್ಲಾ ರಾಜ್ಯಗಳಲ್ಲಿ ಪ್ರಚಾರ ಮಾಡಲಾಗುತ್ತಿದೆ. ಈಗಾಗಲೇ ಅಹಮದಾಬಾದ್, ವಾರಣಾಸಿ, ಮಧುರೈ ಸೇರಿದಂತೆ ಇತರೆಡೆ ಪ್ರಚಾರ ಮಾಡಲಾಗಿದೆ ಎಂದು ಅನಿಲ್ ತಿಳಿಸಿದರು.

siteadmin

ನಂಜನಗೂಡಿನಲ್ಲಿ ಘೋರ ದುರಂತ- ಬೈಕ್ ಕಂಟ್ರೋಲ್ ತಪ್ಪಿ ಕೆರೆಗೆ ಬಿದ್ದ ದಂಪತಿ- ಗರ್ಭಿಣಿ ಸಾವು- ಪತಿ ಸ್ಥಿತಿ ಗಂಭೀರ

Previous article

ಮೈಸೂರಿನಲ್ಲಿ ಮುರುಘಾ ಶ್ರೀ ವಿರುದ್ಧ ಮತ್ತೆ ಎಫ್ಐಆರ್- ಲೈಂಗಿಕ ದೌರ್ಜನ್ಯದ ಆರೋಪ- ನಾಲ್ವರು ಮಕ್ಕಳಿಂದ ದೂರು

Next article

You may also like

Comments

Comments are closed.