Mysore Dasara

ಮೈಸೂರು ಅರಮನೆಯಲ್ಲಿ ಸೆಪ್ಟಂಬರ್ 20 ರಂದು ಸಿಂಹಾಸನ ಜೋಡಣೆ- ಅರಮನೆಗೆ ಯಾವ ಯಾವ ದಿನ ರಜಾ ಗೊತ್ತಾ…?

0
Simasana-New-5

ಮೈಸೂರು- ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಮೈಸೂರು ರಾಜವಂಶಸ್ಥರು ನಡೆಸುವ ಖಾಸಗಿ ದರ್ಬಾರ್ ಪ್ರಮುಖ ಆಕರ್ಷಣೆ ಆಗಿದ್ದು, ಸೆಪ್ಟೆಂಬರ್ 20 ರಂದು ವಜ್ರಖಚಿತ ಸಿಂಹಾಸನ ಜೋಡಣೆ ಮಾಡಲಾಗುತ್ತದೆ.

ಅಂದು ಬೆಳಗ್ಗೆ 10 ರಿಂದ 1 ಗಂಟೆ ತನಕ ಸಿಂಹಾಸನ ಜೋಡಣೆ ಕಾರ್ಯ ನಡೆಯಲಿದೆ. ಮೈಸೂರಿನ ಗೆಜ್ಜಗಳ್ಳಿ ಗ್ರಾಮದ ಸಿಂಹಾಸನ ಜೋಡಣೆ ಮಾಡುವ ನುರಿತವರು ಈ ಕಾರ್ಯ ನೆರವೇರಿಸಲಿದ್ದಾರೆ. ಈ ಹಿನ್ನೆಲೆ ಅಂದು ಬೆಳಗ್ಗೆ 10 ರಿಂದ ಮದ್ಯಾಹ 1.30 ಗಂಟೆವರೆಗೆ ಮೈಸೂರು ಅರಮನೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ.

ಇನ್ನು ದಸರಾ ಉದ್ಘಾಟನೆ ದಿನವಾದ ಸೆಪ್ಟೆಂಬರ್ 26 ರಂದು ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್ ನ ಪೂಜಾ ಕಾರ್ಯ ನಡೆಯುವ ಕಾರಣ ಅಂದು ಬೆಳಿಗ್ಗೆ 10 ರಿಂದ 1.30 ಗಂಟೆ ತನಕ ಮೈಸೂರು ಅರಮನೆಗೆ ಸಾರ್ವಜನಿಕರ ಪ್ರವೇಶ ಇರುವುದಿಲ್ಲ

ಮೈಸೂರು ಅರಮನೆಯಲ್ಲಿ ಅಕ್ಟೋಬರ್ 4 ರಂದು ರಾಜವಂಶಸ್ಥ ಯದುವೀರ್ ಅವರ ಆಯುಧ ಪೂಜೆ ಇರುವ ಹಿನ್ನೆಲೆ ಅಂದು ಬೆಳಿಗ್ಗೆ 10 ರಿಂದ 1.30 ಗಂಟೆ ಮೈಸೂರು ಅರಮನೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಗೊಳಿಸಲಾಗಿದೆ.

ಇನ್ನು ಅಕ್ಟೋಬರ್ 5 ರಂದು ಮೈಸೂರು ಅರಮನೆಯಲ್ಲಿ ಯದುವೀರ್ ಅವರ ವಿಜಯದಶಮಿಯ ಪೂಜಾ ಕೈಂಕರ್ಯ ನಡೆಯುವ ಕಾರಣ ಇಡೀ ದಿನ ಮೈಸೂರು ಅರಮನೆಗೆ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ

ಅಂತಿಮವಾಗಿ ಅಕ್ಟೋಬರ್ 20 ರಂದು ಸಿಂಹಾಸನ ವಿಸರ್ಜನೆ ನಡೆಯುವ ಕಾರಣ ಅಂದು ಕೂಡ ಮೈಸೂರು ಅರಮನೆಗೆ ‌ಬೆಳಿಗ್ಗೆ 10 ರಿಂದ 1.30 ಗಂಟೆ ತನಕ ಮೈಸೂರು ಅರಮನೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಗೊಳಿಸಿ ಮೈಸೂರು ಅರಮನೆ ಮಂಡಳಿ ಆದೇಶ ನೀಡಿದೆ.

siteadmin

ಕರ್ನಾಟಕಕ್ಕೆ ‘ಕೈ’ ಕೊಟ್ಟ ಮೋದಿ- ರಾಜ್ಯಕ್ಕೆ ಬರಬೇಕಿದ್ದ 1.59 ಲಕ್ಷ ಕೋಟಿಯ ‘ಸೆಮಿ ಕಂಡೆಕ್ಟರ್’ ಬೃಹತ್ ಕೈಗಾರಿಕೆ ಗುಜರಾತ್ ಪಾಲು

Previous article

ಲವ್ ಮಾಡಲು ನಿರಾಕರಿಸಿದ ಯುವತಿ- ಆಕೆಗೆ ಚಾಕು ಇರಿದು ತಾನೂ ಆತ್ಮಹತ್ಯೆಗೆ ಯತ್ನಿಸಿದ ಪಾಗಲ್ ಪ್ರೇಮಿ

Next article

You may also like

Comments

Comments are closed.