Business

ಕರ್ನಾಟಕಕ್ಕೆ ‘ಕೈ’ ಕೊಟ್ಟ ಮೋದಿ- ರಾಜ್ಯಕ್ಕೆ ಬರಬೇಕಿದ್ದ 1.59 ಲಕ್ಷ ಕೋಟಿಯ ‘ಸೆಮಿ ಕಂಡೆಕ್ಟರ್’ ಬೃಹತ್ ಕೈಗಾರಿಕೆ ಗುಜರಾತ್ ಪಾಲು

0
PTI04_29_2022_000032B

ಬೆಂಗಳೂರು- ಪ್ರತಿಷ್ಟಿತ ವೇದಾಂತ ಲಿಮಿಟೆಡ್ ನ ಸೆಮಿ ಕಂಡೆಕ್ಟರ್ ತಯಾರಿಕೆಯ ಬೃಹತ್ ಯೋಜನೆಯನ್ನು ಕರ್ನಾಟಕಕ್ಕೆ ನೀಡದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತವರು ರಾಜ್ಯ ಗುಜರಾತ್ ಗೆ ಕೊಟ್ಟಿದ್ದಾರೆ ಎನ್ನಲಾಗಿದೆ.

ಸೆಮಿ ಕಂಡಕ್ಟರ್ ಯೋಜನೆಯನ್ನು ಕರ್ನಾಟಕದಲ್ಲಿ ಅನುಷ್ಠಾನ ಮಾಡಲು ವೇದಾಂತ ಲಿಮಿಟೆಡ್ ಉತ್ಸುಕವಾಗಿತ್ತು.

ಸೆಮಿ ಕಂಡಕ್ಟರ್ ತಯಾರಿಸುವ ಬೃಹತ್ ಕೈಗಾರಿಕೆಯನ್ನು ತನ್ನದಾಗಿಸಿಕೊಳ್ಳಲು ಕರ್ನಾಟಕ, ಮಹಾರಾಷ್ಟ್ರ ಹಾಗೂ ತೆಲಂಗಾಣ ಸೇರಿದಂತೆ ಕೆಲವು ರಾಜ್ಯಗಳು ಲಾಬಿ ಮಾಡಿತ್ತು.

ಮೂಲತಃ ತೈವಾನ್ ದೇಶದ ಟೆಕ್ ದೈತ ಫಾಕ್ಸ್ ಕಾನ್ ನೊಂದಿಗೆ 20 ಬಿಲಿಯನ್ ಡಾಲರ್ ಅಂದರೆ ಇಂಡಿಯನ್ ಕರೆನ್ಸಿಯಲ್ಲಿ 1.59 ಲಕ್ಷ ಕೋಟಿಯ ಬೃಹತ್ ಕೈಗಾರಿಕೆ ಸ್ಥಾಪನೆ ಮಾಡಲು ವೇದಾಂತ್ ಯೋಜನೆ ರೂಪಿಸಿದೆ.

ಈ ಬೃಹತ್ ಕೈಗಾರಿಕಾಯಿಂದ ಸಾವಿರಾರು ಜನರಿಗೆ ಉದ್ಯೋಗ ದೊರೆಯಲಿದೆ.

ಈ ಹಿನ್ನೆಲೆ ಗುಜರಾತ್ ಈ ಯೋಜನೆಯನ್ನು ತನ್ನದಾಗಿಸಿಕೊಂಡಿದೆ.

ಇದಕ್ಕಾಗಿ ಒಂದು ಸಾವಿರ ಎಕರೆ ಭೂಮಿ, ವಿದ್ಯುತ್ ಹಾಗೂ ನೀರನ್ನು ರಿಯಾಯಿತಿ ದರದಲ್ಲಿ ನೀಡಲಿದ್ದು, ಸಬ್ಸಿಡಿಯಲ್ಲಿ ಕೆಲವು ಸೌಲಭ್ಯ ನೀಡಲಾಗುವುದು ಎಂದು ಗುಜರಾತ್ ಸರ್ಕಾರ ವೇದಾಂತ ಲಿಮಿಟೆಡ್ ಗೆ ಭರವಸೆ ನೀಡಿದೆ.

ಕರ್ನಾಟಕ ಕೂಡ ಈ ಎಲ್ಲಾ ಸೌಲಭ್ಯ ನೀಡಲಾಗುವುದು ಎಂದು ಹೇಳಿದ್ದರೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೆ ಕಟ್ಟು ನಿಟ್ಟಾಗಿ ಆದೇಶ ಮಾಡಿದ್ದರಿಂದ ಈ‌ ಬೃಹತ್ ಯೋಜನೆ ಕರ್ನಾಟಕಕ್ಕೆ ಕೈ ತಪ್ಪಿ ಗುಜರಾತ್ ಪಾಲಾಗಿದೆ.

ಬರುವ ಎಲ್ಲಾ ಕೈಗಾರಿಕೆಗಳನ್ನು ನರೇಂದ್ರ ಮೋದಿ ಅವರು ಗುಜರಾತ್ ಗೆ ನೀಡಿದ್ರೆ ಉಳಿದ ರಾಜ್ಯಗಳು ಏನು ಮಾಡಬೇಕು. ಮೋದಿ ಗುಜರಾತ್ ಗೆ ಪ್ರಧಾನಮಂತ್ರಿ ಅಲ್ಲ, ಇಡೀ ದೇಶಕ್ಕೆ ಪ್ರಧಾನಮಂತ್ರಿ ಎಂಬುವುದನ್ನು ಮರೆಯಬಾರದು ಎಂದು ದೇಶದ ಹಲವು ರಾಜ್ಯದ ಕೈಗಾರಿಕೋದ್ಯಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

siteadmin

ಕ್ವೀನ್ ಎಲಿಜಬೆತ್ ಸಿಕ್ರೇಟ್ ಲೆಟರ್ ಬರೆದಿಟ್ಟಿದ್ದಾರೆ- ಆದರೆ ಆ ಲೆಟರ್ ಓಪನ್ ಮಾಡಲು ಕಂಡಿಷನ್ ಹಾಕಿದ್ದಾರೆ

Previous article

ಮೈಸೂರು ಅರಮನೆಯಲ್ಲಿ ಸೆಪ್ಟಂಬರ್ 20 ರಂದು ಸಿಂಹಾಸನ ಜೋಡಣೆ- ಅರಮನೆಗೆ ಯಾವ ಯಾವ ದಿನ ರಜಾ ಗೊತ್ತಾ…?

Next article

You may also like

Comments

Comments are closed.

More in Business