BusinessMarket

ಇದು ಗಿನ್ನಿಸ್ ರೆಕಾರ್ಡ್ ಮಾಡಿರುವ ಭಾರತದ ಅಣಬೆಯಾಕಾರದ ವಜ್ರದ ಉಂಗುರ- ಇದರ ಬೆಲೆ ಕೇಳಿದ್ರೆ ‘ಶಾಕ್’ ಆಗ್ತೀರಾ…!

0

ಅಣಬೆಯಾಕಾರದ ಈ ವಜ್ರದ ಉಂಗುರ ಅಂತಿತದ್ದಲ್ಲ. ನೋಡಲು ಅತ್ಯಾಕರ್ಷಕವಾಗಿರುವ ಈ ಉಂಗುರ ಈಗ ಗಿನ್ನೆಸ್ ದಾಖಲೆ ಮಾಡಿದೆ. ಇದು ವಿದೇಶದಲ್ಲಿ ಮಾಡಿದ ಉಂಗುರವಲ್ಲ. ಬದಲಾಗಿ ಭಾರತದಲ್ಲಿ ಅದೂ ನಮ್ಮ ನೆರೆಯ ರಾಜ್ಯ ಕೇರಳದ ವಜ್ರದ ವ್ಯಾಪಾರಿಯೊಬ್ಬರು ಮಾಡಿಸಿರುವ ವಜ್ರದ ಉಂಗುರು.

ಈ ಉಂಗುರವೇ ಇಷ್ಟೊಂದು ಅತ್ಯಾಕರ್ಷಕವಾಗಿರಬೇಕಾದ್ರೆ, ಅದರ ಬೆಲೆ ಎಷ್ಟಿರಬಹುದು ಎಂಬ ಸಹಜ ಕುತೂಹಲ ನಿಮ್ಮನ್ನು ಕಾಡದೆ ಇರದು. ಇದರ ಬೆಲೆ ಎಷ್ಟೆಂದು ಆಮೇಲೆ ಹೇಳುತ್ತೇವೆ. ಈಗ ಇದನ್ನು ಮಾಡಿರುವ ಕುಸುರಿ ಕಲೆಯನ್ನು ವಿವರಿಸುತ್ತೇವೆ ಕೇಳಿ.

ಇದು ಅಮಿ ಎಂಬ ಅಣಬೆ ಆಕಾರದ ಉಂಗುರ. ಅಮಿ ಎಂದರೆ ಅಮರತ್ವ ಹಾಗೂ ದೀರ್ಘಾಯುಷ್ಯ. ಈ ಹಿನ್ನೆಲೆಯಲ್ಲಿ ಈ ಉಂಗುರಕ್ಕೆ ಅಮಿ ಎಂಬ ಯೂನಿಕ್ ನೇಮ್ ಇಡಲಾಗಿದೆ.

ಕೇರಳದ ಎಸ್ಡಬ್ಲ್ಯೂಎ ಡೈಮಂಡ್ಸ್ ಕಂಪನಿ ಇದನ್ನು ತಯಾರು ಮಾಡಿದೆ. 41 ವಿಶಿಷ್ಟವಾದ ಅಣಬೆ ದಳಗಳನ್ನು ಹೊಂದಿರುವ ಉಂಗುರದ ಮೂಲ ಮಾದರಿಯನ್ನು ಪ್ಲಾಸ್ಟಿಕ್ ಅಚ್ಚು ಬಳಸಿ ವಿಶಿಷ್ಟವಾಗಿ ಡಿಸೈನ್ ಮಾಡಲಾಗಿದೆ. ತರುವಾಯ 3D ಪ್ರಿಂಟ್ ನಿಂದ ಮರು ಸೃಷ್ಠಿ ಮಾಡಲಾಗಿದೆ.

ಅಚ್ಚ ದ್ರವ ಚಿನ್ನದಿಂದ ಕೂಡಿದ್ದು, ಅದರ ದಳಗಳ ಬದಿಗೆ ವಜ್ರಗಳನ್ನು ಪ್ರತ್ಯೇಕವಾಗಿ ಕೈಯಿಂದ ಕೂರಿಸಲಾಗಿದೆ. ಇದು 340 ಗ್ರಾಂ ತೂಕ ಹೊಂದಿದೆ.

ಇದರ ಬೆಲೆ 95,243 ಅಮೇರಿಕನ್ ಡಾಲರ್. ಅಂದರೆ ಭಾರತದ ಕರೆನ್ಸಿಯಲ್ಲಿ 75,92,838,63 ರೂಪಾಯಿಯಾಗಿದೆ.

siteadmin

ಕಪ್ಪು ಬಣ್ಣದ ಗೌನ್ ನಲ್ಲಿ ಮಿಂಚಿದ ಬಾಲಿವುಡ್ ನಟಿ ಕೃತಿ ಸನೋನ್- ಇದರ ದುಬಾರಿ ಬೆಲೆ ಎಷ್ಟೆಂದು ತಿಳಿದ್ರೆ ದಂಗಾಗುತ್ತೀರಾ…!

Previous article

ಎಡಿಜಿಪಿ ಅಮೃತ್ ಪೌಲ್ ಗೆ ಕೋಟಿ ಕೋಟಿ ಆಸ್ತಿ- ಸಿಕ್ಕಿ ಬೀಳುತ್ತೇನೆಂದು ಇವರ ಹೆಸರಿನಲ್ಲಿ ಆಸ್ತಿ ಖರೀದಿ- ಇಲ್ಲಿದೆ ಪ್ರಾಪರ್ಟಿ ಡಿಟೈಲ್ಸ್

Next article

You may also like

Comments

Comments are closed.

More in Business