Business

ಮೈಸೂರಿನ ಪ್ರತಿಷ್ಠಿತ ಶ್ರೀ ರಾಯಲ್ ವಾರಿಯರ್ ಬೇಕರಿಗೆ ಟೈಮ್ಸ್ ಗ್ರೂಪ್ ಅವಾರ್ಡ್- ಪ್ರಶಸ್ತಿ ಸ್ವೀಕರಿಸಿದ ಬೇಕರಿ ಮಾಲೀಕ ನಾರಾಯಣ್

0

ಮೈಸೂರು- ಸಾಂಸ್ಕೃತಿಕ ನಗರಿ ಮೈಸೂರಿನ ಶ್ರೀ ರಾಯಲ್ ವಾರಿಯರ್ ಬೇಕರಿ ಗ್ರೂಪ್ ಗೆ ಪ್ರತಿಷ್ಠಿತ ಟೈಮ್ಸ್ ಗ್ರೂಪ್ ನ ಸ್ಪೆಷಲೈಜ್ಡ್ ಕುಕ್ ಹಾಗೂ ಎಕ್ಸಿಲೆಂಟ್ ಅವಾರ್ಡ್ ದೊರೆತಿದೆ.

ಮೈಸೂರಿನ ಖಾಸಗಿ ರೆಸಾರ್ಟ್ ನಲ್ಲಿ ನಡೆದ ಸುಂದರ ಸಮಾರಂಭದಲ್ಲಿ ಖ್ಯಾತ ಬಾಲಿವುಡ್ ನಟಿ ರಾಖಿ ಖನ್ನಾ ಅವರು ಶ್ರೀ ರಾಯಲ್ ವಾರಿಯರ್ ಬೇಕರಿಯ ಮಾಲೀಕರಾದ ನಾರಾಯಣ್ ಎಂ.ಎಸ್. ಹಾಗೂ ಅವರ ಪತ್ನಿ ಶೈಲಜಾ ಅವರಿಗೆ ಅವಾರ್ಡ್ ನೀಡಿದರು.

ಮೈಸೂರಿನ ಶ್ರೀ ರಾಯಲ್ ವಾರಿಯರ್ ಬೇಕರಿಯು ಮೈಸೂರು ಹಾಗೂ ಕೊಡಗು ಜಿಲ್ಲೆಯಲ್ಲಿ ಒಟ್ಟು 10 ಬ್ರ್ಯಾಂಚ್ ಗಳನ್ನು ಹೊಂದಿದೆ.

2019, ಆಗಸ್ಟ್ 19 ರಂದು ಮೈಸೂರಿನ ಕುವೆಂಪು ನಗರದಲ್ಲಿ ಶ್ರೀ ರಾಯಲ್ ವಾರಿಯರ್ ಬೇಕರಿಯ ಮೊದಲ ಶಾಖೆ ಆರಂಭಿಸಿದ ನಾರಾಯಣ್ ಅವರು ಈಗ ಮೈಸೂರು ಮತ್ತು ಕೊಡಗು ಜಿಲ್ಲೆಯಲ್ಲಿ ಹತ್ತು ಕಡೆ ಶಾಖೆಗಳನ್ನು ತೆರೆದಿದ್ದಾರೆ.

ಶ್ರೀ ವಾರಿಯರ್ ಬೇಕರಿಯಲ್ಲಿ 125 ವಿಶಿಷ್ಟ ಬಗೆಯ ವೆರೈಟಿ ಸಿಹಿ ಹಾಗೂ ಖಾರ ತಿಂಡಿಗಳನ್ನು ತಯಾರಿಸಲಿದ್ದು, ಗುಣಮಟ್ಟದ ಶ್ರೇಷ್ಠತೆ ಹಾಗೂ ರುಚಿಗೆ ಪ್ರಖ್ಯಾತಿಯಾಗಿದೆ. ಗ್ರಾಹಕರಿಂದ ಉತ್ತಮ ಸ್ಪಂದನೆ ದೊರೆತಿರುವ ಈ ಕಾರಣದಿಂದಲೆ ಈ ತನಕ ಹತ್ತು ಶಾಖೆಗಳನ್ನು ತೆರೆಯಲು ನಾರಾಯಣ್ ಅವರಿಗೆ ಸಾಧ್ಯವಾಗಿದೆ.

ಗುಣಮಟ್ಟ, ರುಚಿ ಹಾಗೂ ಹೈಜನಿಕ್ ಇರುವ ಕಾರಣ ಶ್ರೀ ರಾಯಲ್ ವಾರಿಯರ್ ಬೇಕರಿಗೆ ಟೈಮ್ಸ್ ಗ್ರೂಪ್ ಈ ಅವಾರ್ಡ್ ನೀಡಿದೆ. ಬೇಕರಿ ಆರಂಭವಾಗಿ ಕೇವಲ ಮೂರು ವರ್ಷದ ಅವಧಿಯಲ್ಲಿ ಶ್ರೀ ರಾಯಲ್ ವಾರಿಯರ್ ಬೇಕರಿ ಪ್ರತಿಷ್ಠಿತ ಅವಾರ್ಡ್ ಪಡೆಯುವ ಮೂಲಕ ಪ್ರಖ್ಯಾತಿಯನ್ನು ಇಮ್ಮಡಿಗೊಳಿಸಿಕೊಂಡಿದೆ. ಈ ಹೆಗ್ಗಳಿಕೆ ಪಡೆಯಲು ಬೇಕರಿಯಲ್ಲಿ ಕೆಲಸ ಮಾಡುವ ನೂರಾರು ನುರಿತ ನೌಕರರ ಪರಿಶ್ರಮ ಕೂಡ ಇದಕ್ಕೆ ಕಾರಣವಾಗಿದೆ. ಇದೇ ಗುಣಮಟ್ಟ ಕಾಪಾಡಿಕೊಳ್ಳಲು ನಾರಾಯಣ್ ಅವರ ಯೋಜನಾ ಬದ್ದ ಕಾರ್ಯ ಮೂಲ‌ ಕಾರಣವಾಗಿದೆ.

ಶ್ರೀ ರಾಯಲ್ ವಾರಿಯರ್ ಬೇಕರಿಯ ಮತ್ತಷ್ಟು ಶಾಖೆಗಳನ್ನು ಮೈಸೂರು, ಕೊಡಗು ಅಲ್ಲದೆ ಕರ್ನಾಟಕದ ಇತರೆ ಜಿಲ್ಲೆಯಲ್ಲೂ ತೆರೆಯಲು ಬೇಕರಿಯ ಮಾಲೀಕ ನಾರಾಯಣ್ ಅವರು ಉತ್ಸುಕರಾಗಿದ್ದಾರೆ.

siteadmin

ಮೈಸೂರು ಬೆಂಗಳೂರು ಬೈಪಾಸ್ ರಸ್ತೆಯಲ್ಲಿ ದರೋಡೆ- ಹಣ, ಚಿನ್ನಾಭರಣ ದೋಚಿ ಪರಾರಿ

Previous article

ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್‌ ಹೈವೆನಲ್ಲಿ ‘ಸ್ಪೀಡ್’ ಆಗಿ ಹೋದ್ರೆ ‘ದಂಡ’ ಗ್ಯಾರಂಟಿ

Next article

You may also like

Comments

Leave a reply

Your email address will not be published. Required fields are marked *

More in Business