Karnataka

ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್‌ ಹೈವೆನಲ್ಲಿ ‘ಸ್ಪೀಡ್’ ಆಗಿ ಹೋದ್ರೆ ‘ದಂಡ’ ಗ್ಯಾರಂಟಿ

0

ಬೆಂಗಳೂರು- ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್‌ ಹೈವೆ ತುಂಬಾ ನೈಸ್ ಆಗಿದೆ. ರೋಡ್ ಹಂಪ್ ಗಳಂತೂ‌ ಇಲ್ಲವೆ ಇಲ್ಲ, ಟ್ರಾಫಿಕ್ ಜಾಮ್ ಗೋಜಲು ಇಲ್ಲ. ಹೀಗಿರುವಾಗ ಬಹಳಷ್ಟು ಜನರು ಸ್ಪೀಡ್ ಗೆ ಕಂಟ್ರೋಲ್‌ ಇಲ್ಲದೆ ಬಹಳ ವೇಗವಾಗಿ ವಾಹನ ಚಾಲನೆ ಮಾಡುತ್ತಾರೆ. ಇದರಿಂದ ಅಪಘಾತವಾಗುತ್ತದೆ. ಈ ಕಾರಣದಿಂದ ಹೈವೆ ಅಥಾರಿಟಿ ಆಫ್ ಇಂಡಿಯಾ ಸ್ಪೀಡ್ ಬ್ರೇಕ್ ಹಾಕುತ್ತಿದೆ.

ಹೊಸ ಹೆದ್ದಾರಿ ಆದ ಮೇಲೆ ‌ಈ ತನಕ 335 ಅಪಘಾತ ಸಂಭವಿಸಿದ್ದು, 85 ಜನರು ಮೃತಪಟ್ಟಿದ್ದಾರೆ. ಈ ಕಾರಣದಿಂದ ಹೈವೆ ಅಥಾರಿಟಿ ಆಫ್ ಇಂಡಿಯಾ ಮೈಸೂರಿನಿಂದ ಬೆಂಗಳೂರು ತನಕ ಹೆದ್ದಾರಿ ಉದ್ದಕ್ಕೂ ಅತ್ಯಾಧುನಿಕ ಕ್ಯಾಮರಾ ಅಳವಡಿಸುತ್ತಿದೆ.

ಪ್ರತಿ 800 ಮೀಟರ್ ಗೊಂದು ಎಎನ್ ಪಿಆರ್ ಅಳವಡಿಸಲಾಗುತ್ತಿದೆ. ಇದಕ್ಕೆ ಆರ್ಟಿಫಿಷಿಯಲ್ ಪ್ರೊಗ್ರಾಮಿಂಗ್ ತಂತ್ರಜ್ಞಾನ ಇರುತ್ತದೆ. ವೇಗವಾಗಿ ವಾಹನ ಚಾಲನೆ ಮಾಡಿದ್ರೆ ಆ ವಾಹನಗಳಿಗೆ ದಂಡ ವಿಧಿಸಿ ಸೀದಾ ಅವರ ಮನೆಗೆ ನೋಟಿಸ್ ಕಳುಹಿಸಲಾಗುತ್ತದೆ.

ಇದಲ್ಲದೆ ಹೆದ್ದಾರಿಯಲ್ಲಿ ‌ಕಳ್ಳತನ, ದರೋಡೆಯಂತಹ ಕ್ರಿಮಿನಲ್ ಆಕ್ಟಿವಿಟಿ ತಪ್ಪುತ್ತದೆ. ಜೊತೆಗೆ ಅಪಘಾತವಾದರೆ ಕ್ಯಾಮರಾ ಮೂಲಕ ಆಂಬ್ಯುಲೆನ್ಸ್, ಹೆದ್ದಾರಿ ಪಡೆ ಹಾಗೂ ಪೋಲೀಸರಿಗೆ ಮಾಹಿತಿ ರವಾನೆ ಆಗುದೆ.

ಕ್ಯಾಮರಾ ಅಳವಡಿಸಲು ಡಿಪಿಆರ್ ಸಿದ್ದವಾಗುತ್ತಿದೆ. ಎಲ್ಲಾ ಅಂದು ಕೊಂಡಂತೆ ಆದರೆ ಇನ್ನೂ ಆರು ತಿಂಗಳಲ್ಲಿ‌ ಕ್ಯಾಮರಾ ಅಳವಡಿಸ ಲಾಗುತ್ತದೆ.

siteadmin

ಮೈಸೂರಿನ ಪ್ರತಿಷ್ಠಿತ ಶ್ರೀ ರಾಯಲ್ ವಾರಿಯರ್ ಬೇಕರಿಗೆ ಟೈಮ್ಸ್ ಗ್ರೂಪ್ ಅವಾರ್ಡ್- ಪ್ರಶಸ್ತಿ ಸ್ವೀಕರಿಸಿದ ಬೇಕರಿ ಮಾಲೀಕ ನಾರಾಯಣ್

Previous article

“ಏ ಮೋದಿ ಏನಪ್ಪಾ ನಿಂದು ಅಂಧಾ ದರ್ಬಾರ್”- ನಮೋಗೆ ಕುಟುಕಿದ ಹಳ್ಳಿಹಕ್ಕಿ

Next article

You may also like

Comments

Leave a reply

Your email address will not be published. Required fields are marked *

More in Karnataka