Karnataka

ಜಾತಿ ಗಣತಿ; ವರದಿ ನೋಡಿ ಅಂತಿಮ ನಿರ್ಧಾರ

0

*ಜಾತಿ ಗಣತಿ; ವರದಿ ನೋಡಿ ಅಂತಿಮ ನಿರ್ಧಾರ- ಎಂ ಬಿ ಪಾಟೀಲ*

ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗವು ಸರಕಾರಕ್ಕೆ ಜಾತಿ ಗಣತಿ ವರದಿಯನ್ನು ಸಲ್ಲಿಸಿದೆ. ಅದರಲ್ಲಿ ಏನಿದೆಯೋ ಗೊತ್ತಿಲ್ಲ. ಅದನ್ನು ಗಮನಿಸಿದ ಮೇಲೆ, ವರದಿಯನ್ನು ಒಪ್ಪಿಕೊಳ್ಳಬೇಕೋ, ಬಿಡಬೇಕೋ ಎನ್ನುವುದನ್ನು ಸರಕಾರವು ತೀರ್ಮಾನಿಸಲಿದೆ ಎಂದು ಸಚಿವ ಎಂ‌ ಬಿ ಪಾಟೀಲ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳು ಗುರುವಾರ ಇಲ್ಲಿ ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.

ಜಾತಿ ಗಣತಿ ವರದಿ ಬಗ್ಗೆ ವಿಶೇಷವಾಗಿ ವೀರಶೈವ ಲಿಂಗಾಯತ ಸಮುದಾಯದವರಿಗೆ ಆತಂಕ ಇರುವುದು ನಿಜ. ಏಕೆಂದರೆ ಇಲ್ಲಿ ಹೆಚ್ಚಿನವರು ಉಪಪಂಗಡಗಳ ಹೆಸರು ಬರೆಸಿದ್ದಾರೆ. ಇದರ ಬದಲು ಎಲ್ಲ ಉಪಪಂಗಡಗಳೂ ‘ವೀರಶೈವ ಲಿಂಗಾಯತ’ ಎಂದಾಗಬೇಕು ಎಂದು ನಾವು ದನಿ ಎತ್ತಿದ್ದು ನಿಜ ಎಂದು ಅವರು ವಿವರಿಸಿದರು.

ಇದೇ ರೀತಿಯ ಗೊಂದಲ, ಆತಂಕಗಳು ಒಕ್ಕಲಿಗರು ಸೇರಿದಂತೆ ಹಲವು ಸಮುದಾಯಗಳಿಗೆ ಇದೆ. ಇವೆಲ್ಲವನ್ನೂ ಸರಕಾರ ಪರಿಗಣನೆಗೆ ತೆಗೆದುಕೊಳ್ಳಲಿದೆ. ಅಂತಿಮ ತೀರ್ಮಾನ ಸರಕಾರದ ವಿವೇಚನೆಗೆ ಬಿಟ್ಟಿದ್ದು ಎಂದು ಅವರು ಪ್ರತಿಪಾದಿಸಿದರು.

siteadmin

ಬರ ಪರಿಹಾರಕ್ಕೆ 861 ಕೋಟಿ ಲಭ್ಯವಿದೆ

Previous article

ಹುಡುಗಿ ವಿಚಾರದಲ್ಲಿ ಗಲಾಟೆ- ಏಳು ವರ್ಷದ ಹಿಂದೆ ಅಣ್ಣನನ್ನು ಕೊಂದ ಆರೋಪಿಯನ್ನು ಕೊಲೆ ಮಾಡಿದ ತಮ್ಮ

Next article

You may also like

Comments

Leave a reply

Your email address will not be published. Required fields are marked *

More in Karnataka