Business

ಚಿನ್ನ ಮಾರಾಟಕ್ಕೆ ಡಬಲ್ ಸ್ಟ್ಯಾಂಡರ್ಡ್- ಹಾಲ್ ಮಾರ್ಕ್ ವಿಶಿಷ್ಟ ಆರು ಗುರುತಿನ ಸಂಖ್ಯೆ ಕಡ್ಡಾಯ

0

ನವದೆಹಲಿ- ಚಿನ್ನಾಭರಣ ಖರೀದಿಯಲ್ಲಿ ವಂಚನೆ ತಪ್ಪಿಸಿ, ವಿಶ್ವಾಸಾರ್ಹತೆ ಹೆಚ್ಚಿಸಲು ಭಾರತ ಸರ್ಕಾರ ಹಾಲ್ ಮಾರ್ಕ್‌ ‌ನಲ್ಲಿ ಆರು ವಿಶಿಷ್ಟ ಗುರುತಿನ ಸಂಖ್ಯೆಯನ್ನು ಕಡ್ಡಾಯಗೊಳಿಸಿದೆ.

ಆರು ಸಂಖ್ಯೆಯ ಆಲ್ಫಾ ನ್ಯೂಮರಿಕ್ ಹಾಲ್ ಮಾರ್ಕ್ ನ ಆರು ಸಂಖ್ಯೆಯ ವಿಶಿಷ್ಟ ಗುರುತಿನ ಸಂಖ್ಯೆಯನ್ನು ನಮೂದಿಸಬೇಕಿದೆ. ಇದು ಮಾರ್ಚ್ 1, 2023 ರಿಂದ ಜಾರಿಗೆ ಬರಲಿದೆ. ಚಿನ್ನವೆ ಆಗಲಿ ಅಥವಾ ಚಿನ್ನದ ಕಲಾಕೃತಿ ಆಗಲಿ ವಿಶಿಷ್ಟ ಗುರುತಿನ ಸಂಖ್ಯೆ ಇಲ್ಲದೆ ಮಾರಾಟ ಮಾಡುವುದನ್ನು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ ನಿಷೇಧಿಸಿದೆ.

ಚಿನ್ನದ ಶುದ್ಧತೆ ಹಾಗೂ ಗುಣಮಟ್ಟವನ್ನು ಈ‌ ಗುರುತಿನ ಸಂಖ್ಯೆ ಖಾತ್ರಿಪಡಿಸುತ್ತದೆ. ಆದರೆ ಈ ತನಕ ಮಾರಾಟವಾಗಿರುವ ಹಾಲ್ ಮಾರ್ಕ್ ಚಿನ್ನಾಭರಣಗಳು ಮಾನ್ಯವಾಗುತ್ತದೆ ಎಂದು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ ಸ್ಪಷ್ಟಪಡಿಸಿದೆ.

siteadmin

ಬೆಂಗಳೂರು ಸುರಕ್ಷಿತ ನಗರ ಯೋಜನೆಯ ಉದ್ಘಾಟನೆ- ಮಹಿಳೆಯರ ರಕ್ಷಣೆ ನಮ್ಮ ಮೊದಲ ಆದ್ಯತೆ- ಸಿಎಂ ಬೊಮ್ಮಾಯಿ

Previous article

ಸ್ವತಃ ನನ್ನ ತಂದೆಯೇ ನನಗೆ ಲೈಂಗಿಕ‌ ಕಿರುಕುಳ ನೀಡಿದ್ದ- ನೋವಿನ ಸಂಗತಿ‌ ಬಿಚ್ಚಿಟ್ಟ ಚಿತ್ರನಟಿ ಖಷ್ಬೂ

Next article

You may also like

Comments

Leave a reply

Your email address will not be published. Required fields are marked *

More in Business