filmy breaking

ಸ್ವತಃ ನನ್ನ ತಂದೆಯೇ ನನಗೆ ಲೈಂಗಿಕ‌ ಕಿರುಕುಳ ನೀಡಿದ್ದ- ನೋವಿನ ಸಂಗತಿ‌ ಬಿಚ್ಚಿಟ್ಟ ಚಿತ್ರನಟಿ ಖಷ್ಬೂ

0

ಚೆನ್ನೈ- ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆಯಾಗಿ ಕೇಂದ್ರ ಸರ್ಕಾರದಿಂದ ನೇಮಕವಾಗಿರುವ ಚಿತ್ರನಟಿ ಖಷ್ಬೂ ತಾನು ಕೂಡ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದೆ ಎಂಬ ನೋವಿನ ಸ್ಟೋರಿಯನ್ನು ಮನ‌ಬಿಚ್ಚಿ ಹೇಳಿಕೊಂಡಿದ್ದಾರೆ.

ಲೈಂಗಿಕ ಕಿರುಕುಳ ಅನುಭವಿಸಿದ್ದು, ಬೇರೆ ಯಾರಿಂದಲೂ ಅಲ್ಲ. ಸ್ವತಃ ಜನ್ಮ ಕೊಟ್ಟ ತಂದೆಯಿಂದ. ನನಗೆ ಆಗ ಕೇವಲ 8 ವರ್ಷ ವಯಸ್ಸು. ನನ್ನ ತಂದೆಯೇ ನನಗೆ ಲೈಂಗಿಕ ದೌರ್ಜನ್ಯ ಎಸಗಿದ್ದನು. ತನ್ನ ಏಕೈಕ ಮಗಳಿಗೆ ಲೈಂಗಿಕ ಕಿರುಕುಳ ನೀಡುವುದು ಹಾಗೂ ಹೆಂಡತಿಗೆ ಹೊಡೆದು ಬಡಿಯುವುದು ತನ್ನ ಜ‌ನ್ಮ ಸಿದ್ದ ಹಕ್ಕು ಎಂದು ಆತ ಭಾವಿಸಿದ್ದನು. ಅಂದು ಆದ ಮಾನಸಿಕ ಹಿಂಸೆ ಎಂದೂ ಮರೆಯುವುದಿಲ್ಲ ಎಂದು ಖಷ್ಬೂ ಹೇಳಿದ್ದಾರೆ.

ಆದರೆ 15 ವರ್ಷದ ಬಳಿಕ ನನ್ನ ತಂದೆ ವಿರುದ್ಧ ಮಾತನಾಡುವುದನ್ನು ನಾನು‌ ಕಲಿತೆ. ತಿರುಗಿ ಬಿದ್ದ. ಆದರೆ ತಂದೆಯಿಂದ ಆಗುತ್ತಿದ್ದ ಆಘಾತವನ್ನು ಯಾರಿಗೂ ತಿಳಿಸಲಿಲ್ಲ. ಪತಿ ದೈವ ಸಮಾನ ಎಂದು ತಿಳಿದಿದ್ದ ತಾಯಿ ಇದನ್ನು ನಂಬುವ ಸ್ಥಿತಿಯಲ್ಲಿ ‌ಇರಲಿಲ್ಲ. ಆದರೆ ನಾನು ಧೈರ್ಯ ತೆಗೆದುಕೊಂಡು ತಂದೆ ವಿರುದ್ಧ ತಿರುಗಿ ಬಿದ್ದೆ. ಅದೇ ರೀತಿ ಹೆಣ್ಣು ಮಕ್ಕಳು ಇಂತಹ ಕೃತ್ಯವನ್ನು ಧೈರ್ಯದಿಂದ ಎದುರಿಸಬೇಕು ಎಂದು ಈಗನ ಹೆಣ್ಣು ಮಕ್ಕಳಿಗೆ ಖಷ್ಬೂ ಟಿಪ್ಸ್ ಕೊಟ್ಟಿದ್ದಾರೆ.

siteadmin

ಚಿನ್ನ ಮಾರಾಟಕ್ಕೆ ಡಬಲ್ ಸ್ಟ್ಯಾಂಡರ್ಡ್- ಹಾಲ್ ಮಾರ್ಕ್ ವಿಶಿಷ್ಟ ಆರು ಗುರುತಿನ ಸಂಖ್ಯೆ ಕಡ್ಡಾಯ

Previous article

ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್‌ ಹೈವೆ “ಕ್ರೆಡಿಟ್ ವಾರ್”- ಮಾರ್ಚ್ 9 ರಂದು ಸಿದ್ದರಾಮಯ್ಯ ಹೈವೆ ಪರಿಶೀಲನೆ

Next article

You may also like

Comments

Leave a reply

Your email address will not be published. Required fields are marked *