filmy breaking

ಸಿದ್ದರಾಮಯ್ಯ ಜೀವನ ಕುರಿತ ಸಿನಿಮಾ ಮುಹೂರ್ತಕ್ಕೆ ಕೌಂಟ್ ಡೌನ್- ಸಿದ್ದರಾಮಯ್ಯ ಪಾತ್ರ ಮಾಡುವ ಹೀರೊಗಳು ಇವರೆ

0

ಫಿಲ್ಮಿ ಡೆಸ್ಕ್- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೀವನಾಧಾರಿತ ಬಯೋಪಿಕ್ ತೆರೆ ಮೇಲೆ ತರಲು ಸಿದ್ದತಾ ಕಾರ್ಯ ಭರದಿಂದ ಸಾಗುತ್ತಿದೆ.

ಕೊಪ್ಪಳದ ಗಂಗಾವತಿ ಮೂಲದ ಹಯಾದ್ ಪಿರ್ ಸಾಬ್ ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಎಸ್ ಎಂ ಬ್ಯಾನರ್ ಅಡಿ ಸಿದ್ದರಾಮಯ್ಯ ಬಯೋಪಿಕ್ ನಿರ್ನಾಣವಾಗುತ್ತಿದೆ.

ಈ ಸಿನಿಮಾ ಮಾಡಲು ಸಿದ್ದರಾಮಯ್ಯ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಸಂಬಂಧ ಸಚಿವ ಶಿವರಾಜ್ ತಂಗಡಗಿ ಹಾಗೂ ಜಮೀರ್ ಅಹಮದ್ ಜೊತೆ ಸಿದ್ದರಾಮಯ್ಯ ಮಾತುಕತೆ ನಡೆಸಿ ತಮ್ಮ ಸಮ್ಮತಿ ಸೂಚಿಸಿದ್ದಾರೆ.

ಸಿದ್ದರಾಮಯ್ಯ ಅವರ ಬಾಲ್ಯ, ಶಿಕ್ಷಣ, ವೃತ್ತಿ, ರಾಜಕೀಯ ಸೇರಿದಂತೆ ಅವರ ಜೀವನದ ಹಲವು ಸಂಗತಿಗಳು ಸಿನಿಮಾದಲ್ಲಿ ಅನಾವರಣಗೊಳ್ಳಲಿದೆ. ಈಗಾಗಲೇ ಸ್ಕ್ರಿಪ್ಟ್ ರೆಡಿ ಆಗಿದ್ದು, ಶೀಘ್ರದಲ್ಲೇ ಮುಹೂರ್ತ ಕೂಡ ನಡೆಯಲಿದೆ.

ಸಿದ್ದರಾಮಯ್ಯ ಅವರ ಯೌವನದ ಮೊದಲ ಭಾಗದಲ್ಲಿ ನಿರೂಪ್ ಭಂಡಾರಿ ಆ್ಯಕ್ಟ್ ಮಾಡಿದ್ರೆ, ಎರಡನೆ ಭಾಗದಲ್ಲಿ ತಮಿಳು ನಟ ವಿಜಯ್ ಸೇತುಪತಿ ಪಾತ್ರ ಮಾಡಲಿದ್ದಾರೆ.

siteadmin

ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ಕೊಲೆ ಕೇಸ್- ಡಾ.ವೀರೇಂದ್ರ ಹೆಗಡೆ ಹೀಗೆ ಹೇಳಿದ್ದಾರೆ

Previous article

ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನ ನಿಧನ- ಬ್ಯಾಂಕಾಕ್ ಗೆ ಪ್ರವಾಸಕ್ಕೆ ತೆರಳಿದ್ದ ವೇಳೆ ತೀವ್ರ ಹೃದಯಾಘಾತ

Next article

You may also like

Comments

Leave a reply

Your email address will not be published. Required fields are marked *