Business

ಕನ್ನಡದಲ್ಲಿ ಬರೆದ ಚೆಕ್ ರಿಜೆಕ್ಟ್ ಮಾಡಿದ ಬ್ಯಾಂಕ್- ಇಂಗ್ಲಿಷ್ ನಲ್ಲಿ ಚೆಕ್ ನೀಡುವಂತೆ ಕಟ್ಟಾಜ್ಞೆ- ಎಸ್ ಬಿಐಗೆ ಬಿತ್ತು 85,177 ದಂಡ

0
cheque

ಕನ್ನಡ ಭಾಷೆ ಅಂದ್ರೆ ಕೆಲವರು ಮೂಗು ಮುರಿಯುತ್ತಾರೆ. ಅದೇ ಬ್ರಿಟಿಷರ ಮಾತೃ ಭಾಷೆಯನ್ನು ಅಪ್ಪುಕೊಳ್ಳುತ್ತಾರೆ. ಹೀಗೆ ಕನ್ನಡ ಭಾಷೆ ಒಪ್ಪಿಕೊಳ್ಳದೆ ಇಂಗ್ಲಿಷ್ ಭಾಷೆ ಪ್ರೇಮ ಮರೆದು ಇಂಗ್ಲಿಷ್ ನಲ್ಲಿ ಚೆಕ್ ನೀಡುವಂತೆ ಗ್ರಾಹಕರಿಗೆ ಒತ್ತಡ ಹೇರಿದ ಬ್ಯಾಂಕ್ ಗೆ ದಂಡ ಬಿದ್ದಿದೆ.

ಇಂಗ್ಲಿಷ್ ಪ್ರೊಫೆಸರ್ ವಾದಿರಾಜಾಚಾರ್ಯ ಇನಾಮದಾರ ಹಣ ಪಡೆಯಲು ಧಾರವಾಡದ ಹಳಿಯಾಳದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಕನ್ನಡದಲ್ಲಿ ಚೆಕ್ ಬರೆದು ಕೊಟ್ಟರು. ಉಳಿತಾಯ ಖಾತೆಯಲ್ಲಿರುವ 9 ಲಕ್ಷದಲ್ಲಿ 6 ಸಾವಿರ ರೂಪಾಯಿಗೆ ಹಣ ನೀಡುವಂತೆ ಚೆಕ್ ನ್ನು ಕನ್ನಡದಲ್ಲಿ ಬರೆದಿದ್ದರು.

ಆದರೆ ಇಂಗ್ಲಿಷ್ ನಲ್ಲಿ ಚೆಕ್ ಬರೆದಿಲ್ಲವೆಂಬ ಕಾರಣ ನೀಡಿದ ಬ್ಯಾಂಕ್ ನವರು ಚೆಕ್ ನ್ನು ರಿಜೆಕ್ಟ್ ಮಾಡಿದ್ರು. ಕನ್ನಡದಲ್ಲಿ ಬರೆದ ಚೆಕ್ ಅಮಾನ್ಯಗೊಳಿಸಿದ ಬ್ಯಾಂಕ್ ವಿರುದ್ಧ ವಾದಿರಾಜಚಾರ್ಯ ಇನಾಮದಾರ ಅವರು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದರು.

ಈ ಬಗ್ಗೆ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರಾದ ಪಿ.ಸಿ.ಹಿರೇಮಠ ಹಾಗೂ ವಿ.ಅ.ಬೋಳಶೆಟ್ಟಿ ಕನ್ನಡದ ಚೆಕ್ ಅಮಾನ್ಯಗೊಳಿಸಿದ ಎಸ್ ಬಿಐ ಗೆ 85,177 ರೂಪಾಯಿ ದಂಡ ವಿಧಿಸಿದೆ.

ಇದು ಕನ್ನಡದ ಬಗ್ಗೆ ಕೀಳರಿಮೆ ಹೊಂದಿವರಿಗೆ ತಕ್ಕ ಪಾಠವಾಗಿದೆ.

siteadmin

ಹಾಟ್ ಬ್ಯೂಟಿ ಸಮಂತಾಗೆ ಸಖತ್ ಕ್ಲಾಸ್- ಕ್ಯೂಟ್ ಮಾಡ್ರನ್ ಡ್ರೆಸ್ ನಲ್ಲಿ ಫೋಟೋ ಶೂಟ್ ಬಗ್ಗೆ ಸಮಂತಾಗೆ ತರಾಟೆ

Previous article

ಯುವತಿ ಕಿವಿಯೊಳಗೆ ಸೇರಿತ್ತು ಸಣ್ಣ ಹಾವು- ಕಿವಿಯಿಂದ ಹಾವನ್ನು ಹೊರ ತೆಗೆದ ಡಾಕ್ಟರ್ ಆಪರೇಷನ್ ರೋಮಾಂಚನ

Next article

You may also like

Comments

Comments are closed.

More in Business