Gold Rate

OMG- ರಷ್ಯಾ V/s ಉಕ್ರೇನ್ ವಾರ್ ಎಫೆಕ್ಟ್- ಚಿನ್ನ, ಬೆಳ್ಳಿ ಬೆಲೆ ಮತ್ತೆ ಏರಿಕೆ – ತೈಲವನ್ನು ಬಿಡದ ಬೆಲೆ ಎಂಬ ಬಕಾಸುರ

0

ನವದೆಹಲಿ- ಉಕ್ರೇನ್ ಮೇಲೆ ರಷ್ಯಾ ಸಾರಿರುವ ರಣ ಭೀಕರ ಯುದ್ಧ ಭಾರತದ ಆರ್ಥಿಕತೆ ಮೇಲೆ ದೊಡ್ಡ ಹೊಡೆತವಾಗಿದೆ. ಭಾರತದ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆ ಗಗನಕ್ಕೇರುತ್ತಲೆ ಇದೆ.

ಪ್ರತಿ 10 ಗ್ರಾಂ ಚಿನ್ನದ ಬೆಲೆ 328 ರೂಪಾಯಿ ಹೆಚ್ಚಳಾಗಿದೆ. ಈ ಮೂಲಕ ಚಿನ್ನದ ಬೆಲೆ 10 ಗ್ರಾಂಗೆ 54,552 ರೂಪಾಯಿಗೆ ಬಂದು ನಿಂತಿದೆ.

ಇದಿಷ್ಟೆ ಅಲ್ಲದೆ ಬೆಳ್ಳಿ ಬೆಲೆಯಲ್ಲಿ ಕೂಡ ಹೆಚ್ಚಳವಾಗಿದೆ. ಬೆಳ್ಳಿ ಬೆಲೆ ಕೆ.ಜಿ.ಗೆ 965 ರೂಪಾಯಿ ಏರಿಕೆಯಾಗಿದ್ದು, ಇಂದು 74,350 ರೂಪಾಯಿಗೆ ಬಂದು ನಿಂತಿದೆ.

ಇನ್ನು ಬೆಲೆ ಹೆಚ್ಚಳ ತೈಲವನ್ನು ಬಿಟ್ಟಿಲ್ಲ. ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್ ಗೆ ಶೇಕಡಾ 1.88 ರಷ್ಟು ಹೆಚ್ಚಳವಾಗಿದ್ದು, 177 ರೂಪಾಯಿ ಏರಿಕೆಯಾಗಿದೆ. ಭಾರತದ ಕರೆನ್ಸಿಯಲ್ಲಿ ಹೇಳುವುದಾದರೆ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 9,615 ರೂಪಾಯಿಯಾಗಿದೆ.

 

siteadmin

ಮೈಸೂರಿನ ನಂಜನಗೂಡಿನಲ್ಲಿ ಶಿಕ್ಷಕಿ ಅನುಮಾನಾಸ್ಪದ ಸಾವು- ಘಟನೆಯ ಸುತ್ತ ಅನುಮಾನದ ಹುತ್ತ

Previous article

Good News- ಮೈಸೂರಿನ ಪಿರಿಯಾಪಟ್ಟಣ ಬಳಿಯ ‘ಗೋಲ್ಡನ್ ಟೆಂಪಲ್’ 700 ದಿನದ ನಂತರ ಓಪನ್

Next article

You may also like

Comments

Comments are closed.

More in Gold Rate