Crime Alert

ವಿದ್ಯಾರ್ಥಿ ಕಟ್ಟಡದ ಮೇಲಿಂದ ಜಿಗಿದ ವಿಡಿಯೋ ವೈರಲ್

0

ಮಣಿಪಾಲ- ವಿದ್ಯಾರ್ಥಿಯೊಬ್ಬ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ವಿಡಿಯೋ ವೈರಲ್..!
ಉಡುಪಿ : ಪರೀಕ್ಷೆ ಭಯದಿಂದ ವಿದ್ಯಾರ್ಥಿಯೊರ್ವ ಕಾಲೇಜಿನ 6 ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ಕೆಲವು ದಿನಗಳ ಹಿಂದೆ ಮಣಿಪಾಲದಲ್ಲಿ ನಡೆದಿತ್ತು.

ಈ ಪ್ರಕರಣ ಸಂಬಂಧಿಸಿದಂತೆ ಕಟ್ಟಡದಿಂದ ಜಿಗಿಯುವ ವಿಡಿಯೋ ಇದೀಗ ವೈರಲ್ ಆಗಿದೆ.
ಮಣಿಪಾಲದ ವಿವಿಯ ಅಲೈಡ್ ಹೆಲ್ತ್ ವಿಭಾಗದ ದ್ವಿತೀಯ ಬಿಎಸ್ಸಿ ವಿದ್ಯಾರ್ಥಿ ಬಿಹಾರ ಮೂಲದ ಸತ್ಯಂ ಕಳೆದ ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದನು. ಪರೀಕ್ಷೆ ಭಯದಿಂದ ಆತ್ಮಹತ್ಯೆ ಎನ್ನುವ ಅನುಮಾನ ವ್ಯಕ್ತವಾಗಿತ್ತು.
ಮೊಬೈಲ್​ನಲ್ಲಿ ಸೆರೆಯಾದ ದೃಶ್ಯದಂತೆ ಸತ್ಯಂ ಕಟ್ಟಡದಿಂದ ಇತರೆ ವಿದ್ಯಾರ್ಥಿಗಳು ನೋಡ ನೋಡುತ್ತಲೇ ಜಿಗಿದಿದ್ದಾನೆ. ಮಣಿಪಾಲ‌ ವಿಶ್ವವಿದ್ಯಾಲಯದ 6 ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

siteadmin

ಅಪಾರ್ಟ್ ಮೆಂಟ್ ಗೆ ಬಂದ ಯುವಕನ ಮೇಲೆ ಹಲ್ಲೆ

Previous article

ಜೈ‌ ಶ್ರೀರಾಮ್ ಘೋಷಣೆ- ಬಿಜೆಪಿಗೆ ವೇದಿಕೆ ಮೇಲೆ ಕಾಂಗ್ರೆಸ್ ಠಕರ್

Next article

You may also like

Comments

Leave a reply

Your email address will not be published. Required fields are marked *

More in Crime Alert