Crime Alert

ಕುಡಿದ ಮತ್ತಿನಲ್ಲಿ ಪ್ರಸಾದ್ ಬಿದ್ದಪ್ಪನ ಪುತ್ರ ದಬ್ಬಾಳಿಕೆ- ಪೊಲೀಸರಿಗೆ ಅವಾಜ್

0

ಬೆಂಗಳೂರು- ಫ್ಯಾಶನ್ ಡಿಸೈನರ್ ಪ್ರಸಾದ್ ಬಿದ್ದಪ್ಪನ ಪುತ್ರ ಆಡಂ ಬಿದ್ದಪ್ಪ (Adam Bidapa) ಕುಡಿದ ಮತ್ತಿನಲ್ಲಿ ವೇಗವಾಗಿ ಕಾರು ಚಲಾಯಿಸಿದ್ದು, ಹಾರ್ನ್ ಮಾಡಿದ ವ್ಯಕ್ತಿಯ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ಬೆಂಗಳೂರಿನ ಯಲಹಂಕದಲ್ಲಿ (Yelahanka) ನಡೆದಿದೆ.

ಈ ವೇಳೆ ಸ್ಥಳಕ್ಕೆ ಬಂದ ಯಲಹಂಕ ಸಂಚಾರಿ ಪೊಲೀಸರ (Police) ಜೊತೆಗೂ ಆಡಂ ವಾಗ್ವಾದ ಮಾಡಿದ್ದಾನೆ. ಬಳಿಕ ಅವಿವಾ ಬಿದ್ದಪ್ಪಗೆ ಕರೆ ಮಾಡಿ ಪೊಲೀಸರೊಂದಿಗೆ ಮಾತಾಡುವಂತೆ ಹೇಳಿದ್ದಾನೆ. ಈ ವೇಳೆ ಪೊಲೀಸರು ನೀನು ಯಾರಿಗಾದರೂ ಕರೆ ಮಾಡು ಎಂದು ಹೇಳಿ ಆತನನ್ನು ವಶಕ್ಕೆ ಪಡೆದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀ ಪ್ರಸಾದ್, ಆಡಂ ಕುಡಿದ ಮತ್ತಿನಲ್ಲಿ ಪೊಲೀಸರು ಹಾಗೂ ವ್ಯಕ್ತಿಯೊಬ್ಬರ ಜೊತೆ ಗಲಾಟೆ ಮಾಡಿದ್ದಾನೆ. ನಾನು ಪ್ರಭಾವಿ ಆಗಿದ್ದೇನೆ ನನ್ನನ್ನೇ ಪ್ರಶ್ನೆ ಮಾಡುತ್ತೀರಾ ಎಂದು ಬೆದರಿಕೆ ಹಾಕಿದ್ದಾನೆ.

ಯಲಹಂಕ ಸಂಚಾರಿ ಪೊಲೀಸರು ಆತನ ಕಾರನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಮೆಡಿಕಲ್ ಟೆಸ್ಟ್ ಮಾಡಿಸಿ ಆತನನ್ನು ಬಿಟ್ಟು ಕಳುಹಿಸಿದ್ದಾರೆ. ಈ ವಿಚಾರವಾಗಿ ರಾಹುಲ್ ಎಂಬವರು ದೂರು ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಕುಡಿದು ವಾಹನ ಚಾಲನೆ ಮಾಡಿದ್ದರೂ ಪೋಲೀಸರು ಆತನನ್ನು ಬಿಟ್ಟು ಕಳುಹಿಸಿದ್ದಾರೆ.

siteadmin

ಹುಲಿ ಉಗುರು ಕೇಸ್ ನಿಂದ ರೊಚ್ಚಿಗೆದ್ದ ಜಗ್ಗೇಶ್- ತೆಗಳುವರು ಎಲ್ಲಾ ಕಾಲದಲ್ಲೂ ಇರುತ್ತಾರೆ

Previous article

ಆಸ್ಪತ್ರೆಯಲ್ಲಿ ಕಳುವಾಗಿದ್ದ 6 ದಿನದ ಮಗು ಕೆಲವೆ ಗಂಟೆಗಳಲ್ಲಿ ತಾಯಿ ಮಡಿಲಿಗೆ

Next article

You may also like

Comments

Leave a reply

Your email address will not be published. Required fields are marked *

More in Crime Alert