Mysore Story

ಮೈಸೂರಿನಲ್ಲಿ ಮನ ಕಲಕುವ ಘಟನೆ- ಪತ್ನಿ ರುಂಡ ಕಡಿದ ಪತಿರಾಯ- ಎರಡು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ತಾಯಿ

0

ಮೈಸೂರು- ಮೈಸೂರಿನಲ್ಲಿ ಎರಡು ಮನಕಲಕುವ ಘಟನೆ ನಡೆದಿದೆ. ಒಂದು ಪ್ರಕರಣದಲ್ಲಿ ಪತಿ ಪತ್ನಿ ರುಂಡ ಕಡಿದು ಕೊಲೆ ಮಾಡಿದ್ರೆ, ಮತ್ತೊಂದು ಪ್ರಕರಣದಲ್ಲಿ ಎರಡು ಮಕ್ಕಳನ್ನು ಕೊಂದ ತಾಯಿ ತಾನು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಅನೈತಿಕ ಸಂಭಂಧ ಶಂಕೆ ಹಿನ್ನೆಲೆ ಪತ್ನಿಯ ರುಂಡ ಮುಂಡವನ್ನು ಪತಿರಾಯ ಬೇರೆ ಮಾಡಿದ್ದಾನೆ.

ಮೈಸೂರಿನ ವರುಣಾ ಪೊಲೀಸ್ ಠಾಣಾ ವ್ಯಾಪ್ತಿಯ ಚೆಟ್ಟನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಪುಟ್ಟಮ್ಮ(40) ಮೃತ ದುರ್ದೈವಿಯಾಗಿದ್ದಾಳೆ.

ಪತಿ ದೇವರಾಜ್ ಬಂಧನಕ್ಕೆ ವರುಣಾ ಪೊಲೀಸರು ಜಾಲ ಬೀಸಿದ್ದಾರೆ.

ಮೊದಲ ಹೆಂಡತಿಯನ್ನೂ ಸಹ ಕೊಲೆ ಮಾಡಲು ಯತ್ನಿಸಿ ಜೈಲು ವಾಸ ಅನುಭವಿಸಿದ್ದ ದೇವರಾಜ್ ಎರಡನೇ ಪತ್ನಿಯನ್ನ ಬಲಿ ತೆಗೆದುಕೊಂಡಿದ್ದಾನೆ.

ಮೊದಲ ಹೆಂಡತಿಯಿಂದ ದೂರವಾದ ದೇವರಾಜ್ 21 ವರ್ಷಗಳ ಹಿಂದೆ ಪುಟ್ಟಮ್ಮಳನ್ನ ಎರಡನೇ ವಿವಾಹವಾಗಿದ್ದನು.

ಎರಡನೇ ಮದುವೆ ಆದರೂ ಪುಟ್ಟಮ್ಮಳ ಶೀಲ ಶಂಕಿಸಿ ಆಗಾಗ ಜಗಳ ಮಾಡುತ್ತಿದ್ದನು.
20 ವರ್ಷದ ಮಗಳಿದ್ದರೂ ಪತ್ನಿ ಮೇಲೆ ಶಂಕೆ ವ್ಯಕ್ತಪಡಿಸುತ್ತಿದ್ದನು.

ಕಳೆದ ಒಂದು ತಿಂಗಳಿಂದ ಪುಟ್ಟಮ್ಮಳಿಗೆ ಪತಿ ಕಿರುಕುಳ ಹೆಚ್ಚಾಗಿತ್ತು. ಮಗಳು ಪವಿತ್ರ ಕಾಲೇಜಿಗೆ ಹೋಗಿದ್ದ ವೇಳೆ ಇದೇ ವಿಚಾರಕ್ಕೆ ಕ್ಯಾತೆ ತೆಗೆದ ದೇವರಾಜ್. ಪತ್ನಿಯನ್ನ ಭೀಕರವಾಗಿ ಕೊಂದಿದ್ದಾನೆ.

ರುಂಡ ಮುಂಡವನ್ನ ಬೇರೆ ಆಗುವಂತೆ ಭೀಕರವಾಗಿ ಕೊಲೆ ಮಾಡಿದ್ದಾನೆ.

ದೇವರಾಜ್ ವಿರುದ್ದ ಮಗಳು ಪವಿತ್ರ ದೂರು ನೀಡಿದ್ದಾಳೆ. ವರುಣಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದೇವರಾಜ್ ಬಂಧನಕ್ಕೆ ಬಲೆ ಬೀಸಿದ್ದಾರೆ.

ಕೌಟುಂಬಿಕ ಕಲಹದ ಹಿನ್ನೆಲೆ
ಇಬ್ಬರು ಮಕ್ಕಳನ್ನು ಕೊಂದ ತಾಯಿ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ತಿ.ನರಸೀಪುರ ತಾಲ್ಲೂಕಿನ ರಾಮೇಗೌಡನಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಸರೋಜ (32) ಆತ್ಮಹತ್ಯೆ ಗೆ ಶರಣಾಗಿರುವ ಗೃಹಿಣಿ. ಮಕ್ಕಳಾದ ಗೀತಾ(6),ಕುಸುಮ (4) ವರ್ಷದ ಮೃತ ಮಕ್ಕಳು.

ಕೆಲ ದಿನಗಳ ಹಿಂದೆ ಗಂಡನ ಮನೆಯಿಂದ ಸ್ವಗ್ರಾಮ ರಾಮೇಗೌಡನಪುರ ಸರೋಜ ಆಗಮಿಸಿದ್ದಳು.
ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣಿಗೆ ಇಂದು ಶರಣಾಗಿದ್ದಾಳೆ.

ನರಸೀಪುರ ತಾಲ್ಲೂಕಿನ ಮಾವಿನಹಳ್ಳಿ ಗ್ರಾಮದ ನಿಂಗರಾಜು ಎಂಬಾತನ ಜೊತೆ ಸರೋಜಾ ವಿವಾಹವಾಗಿದ್ದಳು.

ಗಂಡ ನಿಂಗರಾಜುಗೆ ಅಕ್ರಮ ಸಂಬಂಧ ಇರುವ ವಿಷಯಕ್ಕೆ ಪದೇ ಪದೇ ಗಲಾಟೆ ನಡೆಯುತ್ತಿತ್ತು.

ಈ ಹಿನ್ನೆಲೆ ತಾಯಿ ಮಕ್ಕಳನ್ನು ಕೊಂದು ತಾನು ಆತ್ಮಹತ್ಯೆಗೆ ಶರಣಾಗಿದ್ದಾಳೆ.

siteadmin

ಪರಿಷ್ಕೃತ ಪಠ್ಯ ಪುಸ್ತಕ ತಪ್ಪುಗಳು- ತಿದ್ದುಪಡಿಗೆ ಆಗ್ರಹಿಸಿ ನಡೆದ ಹೋರಾಟಕ್ಕೆ ಕೊನೆಗೂ ಮಣಿದ ಸರ್ಕಾರ- ಹೀಗೆ ಆದೇಶ ಮಾಡಿದೆ

Previous article

ವಿರಾಟ್ ಕೊಹ್ಲಿಗೆ ಲವ್ ಪ್ರಪೋಸ್- ಆದರೆ ಈಗ ಜೂನಿಯರ್ ತೆಂಡೋಲ್ಕರ್ ಜೊತೆ ಡೇಟಿಂಗ್- ಇವರಿಬ್ಬರ ‘ಲವ್ ಕಹಾನಿ’ ನೋಡಿ…!

Next article

You may also like

Comments

Comments are closed.

More in Mysore Story