Crime Alert

ಮೈಸೂರಿನ ಸೆಂಟ್ರಲ್ ಇಂಟೆಲಿಜೆನ್ಸ್ ರಿಟೈರ್ಡ್ ಆಫೀಸರ್ ಹತ್ಯೆಯ ಪಾತಕಿ ಅರೆಸ್ಟ್- ಮತ್ತೊಬ್ಬ ಎಸ್ಕೇಪ್

0

ಮೈಸೂರು- ಸಾಂಸ್ಕೃತಿಕ ನಗರಿ ಮೈಸೂರು ಜನರನ್ನು ಬೆಚ್ಚಿಬೀಳಿಸಿದ ಸೆಂಟ್ರಲ್ ಇಂಟೆಲಿಜೆನ್ಸ್ ಬ್ಯೂರೊದ ರಿಟೈರ್ಡ್ ಆಫೀಸರ್ ಕುಲಕರ್ಣಿ ಅವರ ಚಾಣಾಕ್ಷತನದ ಕೊಲೆ ರಹಸ್ಯ ಭೇದಿಸುವಲ್ಲಿ ಮೈಸೂರು ಪೋಲಿಸರು ಯಶಸ್ವಿ ಯಾಗಿದ್ದಾರೆ. ಹಿಟ್ ಅಂಡ್ ರನ್ ನಂತೆ ಬಿಂಬಿಸಿ ಕೊಲೆ ಮಾಡಿದ ಇಬ್ಬರು ಪಾತಕಿಗಳಲ್ಲಿ ಒಬ್ಬನಿಗೆ ಪೋಲಿಸರು ಕೋಳ ತೊಡಿಸಿದ್ದಾರೆ. ಈ ಕೊಲೆ ಕೇಸ್ ನಲ್ಲಿ ಹಲವು ರೀತಿಯ ಅನುಮಾನ ಹುಟ್ಟಿಕೊಂಡರೂ ಪಕ್ಕದ ಮನೆಯವರೆ ಕೊಲೆ ಮಾಡಿದ್ದಾರೆ.

ಕೊಲೆಗಾರರು ಎಂತಹ ಚಾಣಾಕ್ಷತನದಿಂದ ಕೊಲೆ ಮಾಡಿದರೂ ಪೋಲಿಸರಿಗೆ ಒಂದು ಸಣ್ಣ ಸುಳಿವು ಸಿಕ್ಕರೂ ಅದರ ಜಾಡು ಹಿಡಿದು ಪಾತಕಿಗಳನ್ನು ಬೆನ್ನತ್ತುತ್ತಾರೆ. ಆಕ್ಸಿಡೆಂಟ್ ಮಾಡಿ ಕೊಲೆ ಮಾಡಿದ ಪಾತಕಿಗಳ ಹತ್ಯೆ ಕೃತ್ಯವನ್ನು ಮೈಸೂರು ಪೋಲಿಸರು ಬಯಲಿಗೆಳೆದಿದ್ದಾರೆ. ನವೆಂಬರ್ 4 ರ ಶುಕ್ರವಾರ ಸಂಜೆ ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿ ಆವರಣದಲ್ಲಿ ಅಪರಿಚಿತ ವಾಹನದಿಂದ ಡಿಕ್ಕಿ ಹೊಡೆಸಿ ಕೇಂದ್ರ ಗುಪ್ತಚರ ದಳದ (Intelligence Bureau-IB) ನಿವೃತ್ತ ಅಧಿಕಾರಿ ಯೋರ್ವರನ್ನು ಹತ್ಯೆಗೈಯ್ಯಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಜಯಲಕ್ಷ್ಮಿಪುರಂ ಠಾಣೆ ಪೊಲೀಸರು ಒಬ್ಬ ಕೊಲೆಗಾರನನ್ನು  ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಮತ್ತೊಬ್ಬ ಪಾತಕಿ ಎಸ್ಕೇಪ್ ಆಗಿದ್ದಾನೆ.

ಕೇಂದ್ರ ಗುಪ್ತಚರ ದಳದ ನಿವೃತ್ತ ಅಧಿಕಾರಿ ಆರ್.ಎನ್.ಕುಲಕರ್ಣಿ ಕೊಲೆ ಕುರಿತಂತೆ ವಿಶೇಷ ತಂಡ ತನಿಖೆ ನಡೆಸುತ್ತಿತ್ತು. ತನಿಖೆ ವೇಳೆ ಕುಲಕರ್ಣಿಯವರ ಪಕ್ಕದ ಮನೆಯ ಮಾದಪ್ಪ ಮತ್ತು ಆರ್.ಎನ್.ಕುಲಕರ್ಣಿ ನಡುವೆ ಮನೆ ಕಟ್ಟುವ ವಿಚಾರವಾಗಿ ಗಲಾಟೆಯಾಗಿತ್ತು.
ಈ ಸಂಬಂಧ ವಿಶೇಷ ತಂಡ ತನಿಖೆ ಮುಂದುವರಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಒಬ್ಬನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಾದಪ್ಪನ ಪುತ್ರ ಮನು(30) ಮತ್ತು ಮತ್ತೋರ್ವ ಮೈಸೂರು ನಿವಾಸಿ ಅರುಣ್ ಗೌಡ ಬಂಧಿತ ಆರೋಪಿಗಳಾಗಿದ್ದಾನೆ.

ಅರುಣ್ ಗೌಡ ಹಾಗೂ ಮನು ಸ್ನೇಹಿತನಾಗಿದ್ದು, ಆತ ಆರ್.ಎನ್ ಕುಲಕರ್ಣಿ ವಾಯುವಿಹಾರಕ್ಕೆ ಬರುತ್ತಿದ್ದ ಸ್ಥಳಗಳನ್ನು ದ್ವಿಚಕ್ರವಾಹನದಲ್ಲಿ ಕರೆತಂದು ತೋರಿಸಿದ್ದನು. ಇಬ್ಬರೂ ಸೇರಿ ಕೊಲೆಗೆ ಸ್ಕೆಚ್ ಹಾಕಿದ್ದರು. ಮನು ತನ್ನ ತಂದೆ ಮಾದಪ್ಪನಿಗೂ ವಿಚಾರ ತಿಳಿಸದೇ ಆರ್.ಎನ್.ಕುಲರ್ಣಿಯವರ ಹತ್ಯೆಗೆ ಮುಂದಾಗಿದ್ದರು.

ಸಿಸಿಟಿವಿಯ ದೃಶ್ಯಗಳನ್ನು ತಪಾಸಣೆ ನಡೆಸಿದ ಪೊಲೀಸರಿಗೆ ದ್ವಿಚಕ್ರವಾಹನದಲ್ಲಿ ವ್ಯಕ್ತಿಯೋರ್ವ ಬಂದು ಸ್ಥಳ ತೋರಿಸಿರುವ ಕುರಿತು ಅನುಮಾನಗಳು ಹುಟ್ಟಿಕೊಂಡು ಠಾಣೆಗೆ ಕರೆಸಿ ತೀವ್ರ ವಿಚಾರಣೆಗೊಳಪಡಿಸಲಾಗಿ ಹತ್ಯೆ ಮಾಡಿರುವುದನ್ನು ಬಾಯ್ಬಿಟ್ಟಿದ್ದಾನೆ. ಇನ್ನೂ ಕೂಡ ಪ್ರಕರಣ ಸಂಬಂಧ ತೀವ್ರ ವಿಚಾರಣೆ ನಡೆಯುತ್ತಿದೆ.

ಕೇಂದ್ರ ಗುಪ್ತಚರ ಇಲಾಖೆ (Intelligence Bureau-IB) ನಿವೃತ್ತ ಅಧಿಕಾರಿ ಆರ್.ಎಸ್.ಕುಲಕರ್ಣಿ (83) ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮೈಸೂರಿನ ಮಾನಸಗಂಗೋತ್ರಿ ವಿಶ್ವವಿದ್ಯಾಲಯದ ಕ್ಯಾಂಪಸ್‌ ನಲ್ಲಿ ನವೆಂಬರ್ 4ರಂದು ಸಂಜೆ ನಡೆದಿತ್ತು. ಅವರು ಕ್ಯಾಂಪಸ್ ನ ಕಂಪ್ಯೂಟರ್ ಸೈನ್ಸ್ ವಿಭಾಗದ ಪಕ್ಕದ ರಸ್ತೆಯಲ್ಲಿ ವಾಯುವಿಹಾರ ನಡೆಸುತ್ತಿದ್ದರು. ಈ ವೇಳೆ ಕಾರು ಡಿಕ್ಕಿಯಾಗಿದೆ. ಇದರಿಂದ ಗಾಯಗೊಂಡಿದ್ದ ಆರ್.ಎಸ್.ಕುಲಕರ್ಣಿ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಕುಲಕರ್ಣಿ ಕುಟುಂಬಸ್ಥರು ಇದೊಂದು ಕೊಲೆ ಎಂದು ಆರೋಪ ಮಾಡಿದ್ದರು. ಜಯಲಕ್ಷ್ಮೀ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕಾರು ಅಪಘಾತ ಮಾಡಿದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ನಿವೃತ್ತ ಅಧಿಕಾರಿ ಪಕ್ಕಕ್ಕೆ ಹೋದರೂ ಡಿಕ್ಕಿ ಹೊಡೆದಿರುವುದು ಸೆರೆಯಾಗಿತ್ತು. ಅಪಘಾತಕ್ಕೆ ನಂಬರ್ ಪ್ಲೇಟ್ ಇಲ್ಲದ ಕಾರು ಬಳಸಿದ್ದು, ಯೋಜಿತ ಕೊಲೆ ಎಂದು ಶಂಕೆ ವ್ಯಕ್ತವಾಗಿತ್ತು. ಪೊಲೀಸರು ಇದನ್ನು ಕೊಲೆ ಪ್ರಕರಣ ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು. ಇದೀಗ ಪ್ರಕರಣ ಸಂಬಂಧ ಒಬ್ಬನನ್ನು ಬಂಧಿಸಿರುವ ಪೋಲಿಸರು ಮತ್ತೊಬ್ಬನ ಪತ್ತೆ ಬಲೆ ಬೀಸಿದ್ದಾರೆ.

siteadmin

ಸಾನಿಯಾ ಮಿರ್ಜಾ ಬಾಳಲ್ಲಿ “ಸುಂಟರ ಗಾಳಿ”- ನಟಿ ಜೊತೆಗಿನ ಪತಿಯ ಅಫೆರ್ ನಿಂದ ಕಂಗೆಟ್ಟ ಮೂಗುತಿ ಸುಂದರಿ

Previous article

79 ವರ್ಷದ ತಾತನನ್ನು “ಹನಿಟ್ರ್ಯಾಪ್” ಖೆಡ್ಡಾಗೆ ಬೀಳಿಸಿದ ಕಿಲಾಡಿ ಲೇಡಿ- ಭಯಗೊಂಡ ತಾತ ಏನು ಮಾಡಿದ ಗೊತ್ತಾ…?

Next article

You may also like

Comments

Leave a reply

Your email address will not be published. Required fields are marked *

More in Crime Alert