Sports

ಸಾನಿಯಾ ಮಿರ್ಜಾ ಬಾಳಲ್ಲಿ “ಸುಂಟರ ಗಾಳಿ”- ನಟಿ ಜೊತೆಗಿನ ಪತಿಯ ಅಫೆರ್ ನಿಂದ ಕಂಗೆಟ್ಟ ಮೂಗುತಿ ಸುಂದರಿ

0

ಡಿಜಿಟಲ್ ಡೆಸ್ಕ್- ಮೂಗುತಿ ಸುಂದರಿ, ಭಾರತದ ಖ್ಯಾತ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನದ ಕ್ರಿಕೆಟ್ ಆಟಗಾರ ಶೋಯೆಬ್ ಮಲಿಕ್ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ.

ಸಾನಿಯಾ ಮಿರ್ಜಾ ಹಾಗೂ ಶೋಯೆಬ್‌ ಮಲಿಕ್ ದಾಂಪತ್ಯ ಜೀವನದಲ್ಲಿ ಸುಂಟರಗಾಳಿ ಎದ್ದಿದೆ ಎನ್ನುವಾಗಲೆ, ಸಾನಿಯಾ ಮಿರ್ಜಾ ಇನ್ಸ್ತಗ್ರಮ್ ನಲ್ಲಿ ಹಾಕಿದ್ದ ಪೋಸ್ಟ್ ಇದನ್ನು ಪುಷ್ಠಿಕರಿಸಿದೆ. “ಒಡೆದ ಹೃದಯಗಳು ಎಲ್ಲಿಗೆ ಹೋಗುತ್ತವೆ, ಅಲ್ಲಾನನ್ನು ಹುಡುಕಲು” ಎಂಬ ಸಾನಿಯಾ ಮಿರ್ಜಾ ಹಾಕಿರುವ ಪೋಸ್ಟ್ ಶೋಯೆಬ್‌ ಮಲಿಕ್ ಜೊತೆ ಡಿಫ್ ರೆನ್ಸ್ ಇದೆ ಎಂಬುವುದನ್ನು ಸಾಬೀತು ಮಾಡಿದೆ. ಈ ಬೆಳವಣಿಗೆಗೆ ಪಾಕಿಸ್ತಾನದ ಮೀಡಿಯಾಗಳು ಇನ್ನಿಲ್ಲದಂತೆ ರೆಕ್ಕ ಪುಕ್ಕ ಕಟ್ಟಿ ವರ್ಣಿಸುತ್ತಿವೆ.

ಸಾನಿಯಾ ಮಿರ್ಜಾ ಮತ್ತು ಶೋಯೆಬ್‌ ಮಲಿಕ್ 2010 ರಲ್ಲಿ ಮದುವೆ ಆಗಿದ್ದು, ಈಗ ಈ ದಂಪತಿಗೆ ಇಜಾನ್ ಮಿರ್ಜಾ ಎಂಬ ಮಗನಿದ್ದಾನೆ. ಆದರೆ ಈಗ ಸಾನಿಯಾ ಮಿರ್ಜಾ ಹಾಗೂ ಶೋಯೆಬ್‌ ಮಲಿಕ್ ಸಂಬಂಧ ಹಳಸಿದೆ.

ಈ ಮಧ್ಯೆ ಶೋಯೆಬ್‌ ಮಲಿಕ್ ನಟಿ ಆಯೇಶಾ ಒಮರ್ ಜೊತೆ ಸ್ವಿಮ್ಮಿಂಗ್ ಪೂಲ್ ಬಳಿ ಇದ್ದ ಹಾಟ್ ಫೋಟೋ ವೈರಲ್ ಆಗಿತ್ತು. ಅಂದರೆ ಶೋಯೆಬ್‌ ಮಲಿಕ್ ಗೆ ಬೇರೆ ಯುವತಿ ಜೊತೆ ಅಕ್ರಮ ಸಂಬಂಧ ಇರುವುದು ಸ್ಪಷ್ಟವಾಗಿದೆ.

ಇತ್ತೀಚೆಗೆ ದುಬೈನಲ್ಲಿ ಮಗ ಇಜಾಜ್ ಮಿರ್ಜಾನ ಬರ್ತ್ ಡೇ ಸೆಲೆಬ್ರೆಟ್ ಮಾಡಿದ್ರು. ಆ ಫೋಟೋಗಳನ್ನು ಶೋಯೆಬ್‌ ಮಲಿಕ್ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿದ್ರು. ಆದರೆ ಸಾನಿಯಾ ಮಿರ್ಜಾ ಮಾತ್ರ ಆ ಯಾವುದೇ ಪೋಟೋಗಳನ್ನು ಪೋಸ್ಟ್ ಮಾಡ ಸಂತಸ ಹಂಚಿಕೊಳ್ಳದೆ ಮೌನವಾದರು. ಈ ಎಲ್ಲಾ ಬೆಳವಣಿಗೆಗಳು ಸಾನಿಯಾ ಮಿರ್ಜಾ ಹಾಗೂ ಶೋಯೆಬ್‌ ಮಲಿಕ್ ದಂಪತಿ ನಡುವಿನ ವಿರಸವನ್ನು ತೋರಿಸುತ್ತಿದೆ.

siteadmin

ಮುಗ್ದ ಮಹಿಳೆಯರೆ ಇವನ ಟಾರ್ಗೆಟ್ ಆಗಿತ್ತು- ಮೈಸೂರು ಮೂಲದ ಖತರ್ನಾಕ್ ವಂಚಕ ಈಗ ಪೋಲಿಸರ ಅತಿಥಿ

Previous article

ಮೈಸೂರಿನ ಸೆಂಟ್ರಲ್ ಇಂಟೆಲಿಜೆನ್ಸ್ ರಿಟೈರ್ಡ್ ಆಫೀಸರ್ ಹತ್ಯೆಯ ಪಾತಕಿ ಅರೆಸ್ಟ್- ಮತ್ತೊಬ್ಬ ಎಸ್ಕೇಪ್

Next article

You may also like

Comments

Leave a reply

Your email address will not be published. Required fields are marked *

More in Sports