Sports

ಮೊಹಮ್ಮದ್ ಶಮಿ ಪರ ವಿರಾಟ್ ಕೊಹ್ಲಿ ವಕಾಲತ್ತು- ಕೊಹ್ಲಿಯ 9 ತಿಂಗಳ ಮಗು ಮೇಲೆ ಅತ್ಯಾಚಾರದ ಬೆದರಿಕೆ- ಮಹಿಳಾ ಆಯೋಗದಿಂದ ನೋಟಿಸ್

0
kholi

ಮುಂಬೈ- ದುಬೈನಲ್ಲಿ ನಡೆದ ವಿಶ್ವಕಪ್ ಟಿ 20 ಪಂದ್ಯದಲ್ಲಿ ಭಾರತ ಸೋಲಲು ಮೊಹಮ್ಮದ್ ಶಮಿ ಕಾರಣ ಎಂದು ಟೀಕಿಸಿದವರಿಗೆ ಮಾತಿನ ಏಟು ಕೊಟ್ಟ ವಿರಾಟ್ ಕೊಹ್ಲಿ ವಿರುದ್ಧ ಕೆಲವು ಕಿಡಿಗೇಡಿಗಳು ಸಿಟ್ಟಿಗೆದ್ದಿದ್ದಾರೆ. ವೀರಾಟ್ ಕೊಹ್ಲಿ ಅವರ 9 ತಿಂಗಳ ಮಗುವಿನ ಮೇಲೆ ಅತ್ಯಾಚಾರ ಮಾಡುವ ಬೆದರಿಕೆಗಳು ಬರುತ್ತಿದೆ.

ವಿಕೃತ ಮನಸ್ಸಿನ ವ್ಯಕ್ತಿಗಳ ಈ ನಡತೆಯನ್ನು ಖಂಡಿಸಿರುವ ದೆಹಲಿ ರಾಜ್ಯ ಮಹಿಳಾ ಆಯೋಗ ಪೋಲಿಸರಿಗೆ ನೋಟಿಸ್ ಜಾರಿ ಮಾಡಿದೆ.

ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಭಾರತ ಸೋಲಲು ಮೊಹಮ್ಮದ್ ಶಮಿ ಕಾರಣ ಎಂದು ಕೆಲವರು ಕೋಮು ದಾಳಿ ನಡೆಸಿದ್ದರು. ಆದರೆ ಕೆಲವರ ಈ ಭಾವನೆಯನ್ನು ವೀರೇಂದ್ರ ಸೆಹ್ವಾಗ್, ಸಚಿನ್ ತಂಡೋಲ್ಕರ್, ಹರ್ಬಜನ್ ಸಿಂಗ್ ಅವರು ತೀವ್ರವಾಗಿ ಖಂಡಿಸಿದರು.

ವಿರಾಟ್ ಕೊಹ್ಲಿ ಕೂಡ ಕಿಡಿಗೇಡಿಗಳು ಹೇಳಿಕೆಯನ್ನು ಕಟು ಶಬ್ಧಗಳಲ್ಲಿ ಟೀಕಿಸಿದ್ರು. ಕೋಮು ದಾಳಿ ನಡೆಸುವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ವೀರಾಟ್ ಕೊಹ್ಲಿ ಅವರು, ಧರ್ಮವನ್ನು ಗುರಿಯಾಗಿಸಿಕೊಂಡು ಆಕ್ರಮಣ ಮಾಡುವುದು ಸರಿಯಲ್ಲ ಎಂದು ಹೇಳಿದ್ದರು.

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಯು ಬೇರೊಂದು ಧರ್ಮದ ವ್ಯಕ್ತಿಯ ಪರ ವಹಿಸಿಕೊಂಡಿದ್ದಾನೆ ಎಂದು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೀರಾಟ್ ಕೊಹ್ಲಿ ವಿರುದ್ಧ ಸಿಡಿದೆದ್ದ ಈ ವಿಕೃತ ಮನಸ್ಸಿನ ಜನರು, ಕೊಹ್ಲಿಯ 9 ತಿಂಗಳ ಮಗಳನ್ನು ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

ಇದನ್ನು ಸೈಬರ್ ಪೋಲಿಸರು ಗಂಭೀರವಾಗಿ ಪರಿಗಣಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ಯಾರು ಇಂತಹ ಕಮೆಂಟ್ ಮಾಡಿದ್ದಾರೊ ಅವರ ಬೆನ್ನತ್ತಿದ್ದಾರೆ.

siteadmin

ಅಪ್ಪುವಿನ ಕೊನೆಯ ಸೆಲ್ಫಿ ಫೋಟೋ ಇದು- ಪುನೀತ್ ಬಗ್ಗೆ ಅಶ್ಲೀಲ ಪೋಸ್ಟ್ ಮಾಡಿದವನು ಅರೆಸ್ಟ್- ಅಪ್ಪು ಕುಟುಂಬಕ್ಕೆ ನಾಗಾರ್ಜುನ ಸಾಂತ್ವನ

Previous article

ಅಪ್ಪು ಸಮಾಧಿ ಸ್ಥಳ ವೀಕ್ಷಣೆಗೆ ಅಭಿಮಾನಿಗಳಿಗೆ ಮುಕ್ತ- ಪುನೀತ್ ಕಂಚಿನ ಪ್ರತಿಮೆಗೆ ಡಿಮ್ಯಾಂಡ್- ಅಪ್ಪುಗೆ ಶ್ರದ್ಧಾಂಜಲಿ ಸಭೆ

Next article

You may also like

Comments

Comments are closed.

More in Sports