Sports

ಟೆನಿಸ್ ವೃತ್ತಿ ಬದುಕಿಗೆ ಸಾನಿಯಾ ಮಿರ್ಜಾ ವಿದಾಯ- ಮೂಗುತಿ ಸುಂದರಿ ಮುಂದಿನ ನಡೆ ತೀವ್ರ ಕುತೂಹಲ

0
download (2)

ಮೇಲ್ಬೋರ್ನ್- ಭಾರತದ ಕೀರ್ತಿ ಪತಾಕೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗಿದ ಭಾರತದ ಖ್ಯಾತ ಮಹಿಳಾ ಟೆನಿಸ್ ತಾರೆ ಮೂಗುತಿ ಸುಂದರಿ ಸಾನಿಯಾ ಮಿರ್ಜಾ ಅವರು ತಮ್ಮ ಟೆನಿಸ್ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ.

ಸಾನಿಯಾ ಮಿರ್ಜಾ ಅವರು 2010 ರಲ್ಲಿ ಪಾಕಿಸ್ತಾನದ ಕಿಕ್ರೆಟ್ ಆಟಗಾರ ಶೋಯೆಬ್ ಮಲ್ಲಿಕ್ ಅವರೊಡನೆ ಪ್ರೇಮ ವಿವಾಹವಾಗಿದ್ದರು. ಈ ದಂಪತಿಗೆ ಒಬ್ಬ ಮಗ ಕೂಡ ಇದ್ದಾನೆ.

ಆಸ್ಟ್ರೇಲಿಯಾ ಓಪನ್ ಡಬಲ್ಸ್ ನಲ್ಲಿ ಮೊದಲ ಸುತ್ತಿನಲ್ಲಿ ಹೊರಬಂದ ಬಳಿಕ ಸಾನಿಯಾ ಮಿರ್ಜಾ ಈ ತೀರ್ಮಾನ ಪ್ರಕಟಿಸಿದರು.

ಉಕ್ರೇನ್ ಜೊತೆಗಾರ್ತಿ ನಡಿಯಾ ಕಿಚೆನೊಕ್ ಜೊತೆಯಾಗಿ ಆಸ್ಟ್ರೇಲಿಯಾ ಓಪನ್ ನ ಮಹಿಳಾ ಡಬಲ್ಸ್ ನಲ್ಲಿ ಸಾನಿಯಾ ಮಿರ್ಜಾ ಕಣಕ್ಕಿಳಿದ್ದರು.

ಆದರೆ 4-6, 6-7 ರ ಅಂತರದಲ್ಲಿ ತಮಾರಾ ಜಿಡಾನ್ಸೆಕ್ ಮತ್ತು ಕಾಜಾ ಜುವಾನ್ ವಿರುದ್ಧ ಸೋನಿಯಾ ಮಿರ್ಜಾ ಸೋಲು ಕಂಡಿದ್ದರು.

ಹೀಗೆ ಸರಣಿಯಲ್ಲಿ ಸೋಲು ಕಾಣುತ್ತಿರುವ ಕಾರಣದಿಂದಲೋ ಏನೊ ಸಾನಿಯಾ ಮಿರ್ಜಾ ಟೆನಿಸ್ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದ್ದಾರೆ.

ಮೂಲತಃ ಹೈದರಾಬಾದ್ ನವರಾದ ಸಾನಿಯಾ ಮಿರ್ಜಾ ಪತಿಯೊಂದಿಗೆ ಪಾಕಿಸ್ತಾನದ ಕರಾಚಿಯಲ್ಲಿದ್ದರು. ಆದರೆ ಟೆನಿಸ್ ಗಾಗಿ ಹಾಗಾಗೆ ಭಾರತಕ್ಕೆ ಬರುತ್ತಿದ್ದರು. ಈಗ ಮುಂದೆ ಎಲ್ಲಿ ನೆಲೆಸುತ್ತಾರೆ ಎಂಬುವುದು ಕುತೂಹಲಕ್ಕೆಡೆ ಮಾಡಿದೆ. 

siteadmin

KMF ನ 460 ಹುದ್ದೆಗಳಿಗೆ ಭರ್ತಿ- ಮಾರ್ಚ್ ತಿಂಗಳ ಅಂತ್ಯದೊಳಗೆ ನೇಮಕಾತಿ ಪ್ರಕ್ರಿಯೆ ಪೂರ್ಣ- ಇಲ್ಲಿದೆ ಡಿಟೈಲ್ಸ್

Previous article

ಮುಲಾಯಂ ಸಿಂಗ್ ಯಾದವ್ ಕುಟುಂಬ ಇಬ್ಭಾಗ- ಮಾವನಿಗೆ ಸೊಸೆಯೆ ವಿಲನ್- ಬಿಜೆಪಿ ಸೇರಿದ ಅಪರ್ಣಾ

Next article

You may also like

Comments

Comments are closed.

More in Sports