BusinessNational

ಲಾಕ್ ಡೌನ್ ಸಮಯದ ಸಾಲ ಮರು ಪಾವತಿ- ಬ್ಯಾಂಕ್ ವಿಧಿಸಿದ ಚಕ್ರ ಬಡ್ಡಿ ಮತ್ತು ದಂಡ ಬಗ್ಗೆ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ

0

ನವದೆಹಲಿ- ಕೊರೊನಾ ಲಾಕ್ ಡೌನ್ ವೇಳೆ ಬ್ಯಾಂಕ್ ಗಳ ಸಾಲ ಮರು ಪಾವತಿ ಕುರಿತಂತೆ ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ. ಈ ಮೂಲಕ ಗ್ರಾಹಕರಿಂದ ಚಕ್ರ ಬಡ್ಡಿ ವಸೂಲಿ ಮಾಡುವ ಬ್ಯಾಂಕ್ ಗಳ ಹಣದಾಯಿತನಕ್ಕೆ ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ.
ಲಾಕ್ ಡೌನ್ ಸಮಯದ ಆರು ತಿಂಗಳು ಸಾಲ ಮರು ಪಾವತಿಗೆ ವಿನಾಯಿತಿ ನೀಡುವಂತೆ ಕೇಂದ್ರ ಸರ್ಕಾರ ಬ್ಯಾಂಕ್ ಗಳಿಗೆ ಸೂಚಿಸಿತ್ತು. ಆದರೆ ಬ್ಯಾಂಕ್ ಗಳು ಸಾಲ ಮರು ಪಾವತಿ ವಿನಾಯಿತಿ ಏನೊ ನೀಡಿತು. ಆದರೆ ಸಾಲದ ಮೇಲೆ ಬಡ್ಡಿ ಮೇಲಿನ ಬಡ್ಡಿ ಚಕ್ರ ಬಡ್ಡಿ ವಿಧಿಸಿತು. ಇದಕ್ಕೆ ಸುಪ್ರೀಂ ಕೋರ್ಟ್ ಇಂದು ತಡೆಯೊಡ್ಡಿದೆ. ಆರು ತಿಂಗಳ ಸಾಲ ವಿನಾಯಿತಿ ವೇಳೆ ಯಾವುದೇ ರೀತಿಯ ದಂಡ ಅಥವಾ ಸುಸ್ತಿ ಬಡ್ಡಿ ವಿಧಿಸಬಾರದು ಎಂದು ಕೋರ್ಟ್ ಕಟ್ಟು ನಿಟ್ಟಿನ ಸೂಚನೆ ನೀಡಿದೆ.
ಆದರೆ ಹಣಕಾಸಿನ ಪ್ಯಾಕೇಜ್ ಅಥವಾ ಪರಿಹಾರ ಘೋಷಿಸಬೇಕು ಎಂದು ಸರ್ಕಾರ ಇಲ್ಲವೆ ಆರ್ ಬಿಐಗೆ ಸೂಚನೆ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯದ ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್, ಎಂಆರ್ ಶಾ ಮತ್ತು ಸಂಜೀವ್ ಖನ್ನಾ ನೇತೃತ್ವದ ನ್ಯಾಯಪೀಠ, ಸಾಲದ ಮರು ಪಾವತಿ ಕುರಿತಂತೆ ಹೀಗೆ ಹೇಳಿದೆ. ಒಂದು ವೇಳೆ ಚಕ್ರ ಬಡ್ಡಿ ಅಥವಾ ದಂಡ ವಿಧಿಸಿದ್ದರೆ ಆ ಹಣವನ್ನು ಮುಂದಿನ ಸಾಲದ ಮರು ಪಾವತಿಗೆ ಸರಿ ಹೊಂದಿಸಿಕೊಳ್ಳಬೇಕು ಎಂದು ಸೂಚಿಸಿದೆ.

siteadmin

ಕರ್ನಾಟಕದಲ್ಲಿ ಕೊರೊನಾ ಅಟ್ಟಹಾಸ- ಬೆಂಗಳೂರಿನಲ್ಲಿ ಅತಿ‌ ಹೆಚ್ಚು ಸೋಂಕಿತರು- ಸಿಲಿಕಾನ್ ಸಿಟಿ ಕೊರೊನಾದ ‘ಹಾಟ್ ಸ್ಪಾಟ್’

Previous article

ವಿಧಾನಸಭೆಯಲ್ಲಿ ಬಾರೀ ಗದ್ದಲದ ಹೈಲೈಟ್ಸ್- ಜಾರಕಿಹೊಳಿ ಮೇಲೆ ರೇಪ್ ಕೇಸ್ ಹಾಕಿ- ಸಂತ್ರಸ್ತ ಯುವತಿಗೆ ರಕ್ಷಣೆ ಕೊಡಿ

Next article

You may also like

Comments

Leave a reply

Your email address will not be published. Required fields are marked *

More in Business