AccidentNational

ಎಂತಹ ವಿಚಿತ್ರ ನೋಡಿ- ಅದೇ ಕೋರಮಂಡಲ್ ಎಕ್ಸ್‌ಪ್ರೆಸ್‌, ಅದೇ ಒಡಿಶಾದಲ್ಲಿ, ಅದೇ ಶುಕ್ರವಾರದಂದು

0

ಭುವನೇಶ್ವರ್- ಕೆಲವು ಘಟಕಗಳು ಕಾಕತಾಳೀಯ ಎಂಬಂತೆ ನಡೆದು ಹೋಗುತ್ತೆ. ಹೀಗೂ ಆಗುತ್ತಾ ಅನ್ನೊ ಕುತೂಹಲ ಕಾಡುತ್ತೆ. ಒಡಿಶಾದ ಬಾಲಸೋರ್ ಬಳಿ ರೈಲು ಅಪಘಾತದ ಪ್ರಕರಣ ಇದಕ್ಕೆ ಸ್ಪಷ್ಟ ನಿದರ್ಶನ.

2009 ರ ಒಡಿಶಾದ ಜಾಮ್ ನಗರದ ಬಳಿ ಕೋರಮಂಡಲ್ ಎಕ್ಸ್‌ಪ್ರೆಸ್‌ ರೈಲು ಅಪಘಾತಕ್ಕೀಡಾಗಿತ್ತು. ಇದೇ ರೀತಿ ಹಳಿ ಬದಲಾಯಿಸುವಾಗ ಹಳಿ ತಪ್ಪಿ 16 ಜನರು ಮೃತಪಟ್ಟಿದ್ದರು. ಶುಕ್ರವಾರದಂದು ಆ ಘಟನೆ ‌ನಡೆದಿತ್ತು.

ಈಗ ಇದೇ ಕೋರಮಂಡಲ್ ಎಕ್ಸ್‌ಪ್ರೆಸ್‌ ರೈಲು, ಅದೇ ಶುಕ್ರವಾರದಂದು, ಅದೇ ಒಡಿಶಾದಲ್ಲಿ ಅಪಘಾತವಾಗಿದೆ. ಸುಮಾರು 500 ಜನರು ಮೃತಪಟ್ಟಿದ್ದು, ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಗಾಯಗಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಗಾಯಗೊಂಡವರಿಗೆ ರಕ್ತ ನೀಡಲು ಯುವಕರು ಸಾಲುಗಟ್ಟಿ ನಿಂತು ಮಾನವೀಯತೆ ಮೆರೆದಿದ್ದಾರೆ.

ಇನ್ನು ಘಟನಾ ಸ್ಥಳಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿ ನೀಡಿ ಅಪಘಾತದ ಬಗ್ಗೆ ಮಾಹಿತಿ ಪಡೆದಿದ್ದಾರೆ.

siteadmin

ಎಮ್ಮೆ ಕೋಣಗಳನ್ನು ಕಡಿಯುವುದಾದರೆ ಹಸುಗಳನ್ನು ಏಕೆ ಕಡಿಯಬಾರದು ?- ವೆಂಕಟೇಶ್

Previous article

ಒಡಿಶಾ ರೈಲು ದುರಂತಕ್ಕೆ “ಕವಚ್” ಇಲ್ಲದಿರುವುದೆ ಕಾರಣ- “ಕವಚ್” ಎಂದರೇನು…?

Next article

You may also like

Comments

Leave a reply

Your email address will not be published. Required fields are marked *

More in Accident