Accident

ಮೈಸೂರು ಬೆಂಗಳೂರು ಎಕ್ಸ್ ಪ್ರೆಸ್ ಹೈವೆ ಆಗ್ತಿದೆಯಾ ಸಾವಿನ ವೇ- ಹೆದ್ದಾರಿಯಲ್ಲಿ ಮತ್ತೊಂದು ಭೀಕರ ಅಪಘಾತ

0

ಮೈಸೂರು- ಮೈಸೂರು ಬೆಂಗಳೂರು
ಎಕ್ಸ್ ಪ್ರೆಸ್ ಹೈವೆ ಆಗ್ತಿದೆಯ ಸಾವಿನ ವೇ ಎಂಬ ಪ್ರಶ್ನೆ ಎದುರಾಗಿದೆ.

ನೂತನ ಎಕ್ಸ್ ಪ್ರೆಸ್ ಹೈವೇನಲ್ಲಿ ಮತ್ತೊಂದು ಭೀಕರ ಅಪಘಾತವಾಗಿದೆ. ಎಕ್ಸ್ ಪ್ರೆಸ್ ವೇನ ಅವೈಜ್ಞಾನಿಕ ಕಾಮಗಾರಿಗೆ ಮತ್ತೊಂದು ಜೀವ ಬಲಿಯಾಗಿದೆ.

ಮೊನ್ನೆಯಷ್ಟೇ ಇದೇ ರಸ್ತೆಯಲ್ಲಿ ತಾಯಿ-ಮಗನ ಸಾವಾಗಿತ್ತು. ಇದೀಗ ಮತ್ತೊಂದು ಜೀವವನ್ನು ಎಕ್ಸ್ ಪ್ರೆಸ್ ಹೈವೇ ಬಲಿ ತೆಗೆದುಕೊಂಡಿದೆ.

ಇಂದಿನ ಘಟನೆಯಲ್ಲಿ ಯುವತಿ ಸ್ಥಳದಲ್ಲೇ ದುರ್ಮರಣ ಹೊಂದಿದ್ದಾಳೆ. ಬೈಕ್ ಸವಾರನ ಸ್ಥಿತಿ ಚಿಂತಾಜನಕವಾಗಿದೆ.

ತಮಿಳುನಾಡು ಮೂಲದ ಪ್ರಿಯಾಂಕ ರಾಜು(32) ಮೃತ ಮಹಿಳೆಯಾಗಿದ್ದಾಳೆ. ಈಕೆ ಹಾಸನದ ದಾಸನಕೊಪ್ಪಲು ನಿವಾಸಿಯಾಗಿದ್ದಾಳೆ. ಲಕ್ಷ್ಮೀನಾರಾಯಣಗೌಡ ಸ್ಥಿತಿ ಗಂಭೀರವಾಗಿದೆ.

ಇಬ್ಬರು ಬೆಂಗಳೂರಿನ TCS ಕಂಪನಿಯ ಸಹೋದ್ಯೋಗಿಗಳಾಗಿದ್ದಾರೆ. ಇಬ್ಬರು ಬೈಕಿನಲ್ಲಿ ಮೈಸೂರಿಗೆ ಪ್ರವಾಸಕ್ಕೆಂದು ಬಂದಿದ್ದರು.
ವಾಪಸ್ ಬೆಂಗಳೂರಿಗೆ ಹೋಗುವಾಗ ಈ ದುರ್ಘಟನೆ ನಡೆದಿದೆ.

ಮದ್ದೂರು ತಾಲೂಕಿನ ಗೆಜ್ಜಲಗೆರೆ ಬಳಿ ನಿಯಂತ್ರಣ ತಪ್ಪಿ ಅಪಘಾತವಾಗಿದೆ.
ಅಪಘಾತದ ರಭಸಕ್ಕೆ ಸವಾರನ ಕುತ್ತಿಗೆ ಸೀಳಿ, ಎಡಗೈ ಕಟ್ ಆಗಿದೆ.

ಕೋಮಾ ಸ್ಥಿತಿಯಲ್ಲಿರುವ ಬೈಕ್ ಸವಾರ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.
ಗಾಯಾಳು ಲಕ್ಷ್ಮೀನಾರಾಯಣ ಗೌಡಗೆ ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ‌ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನೆ ಮಾಡಲಾಗಿದೆ.

ಮೊನ್ನೆಯಷ್ಟೇ ಕೊಡಗು ಮೂಲದ ತಾಯಿ-ಮಗ ಮೃತಪಟ್ಟಿದ್ದರು. ಮದ್ದೂರು ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

siteadmin

124 ಕಾಂಗ್ರೆಸ್ ಪಟ್ಟಿಯಲ್ಲಿ ಲಿಂಗಾಯತರಿಗೆ “ಸಿಂಹಪಾಲು”- ಒಕ್ಕಲಿಗ, ಎಸ್ ಟಿ, ಮುಸ್ಲಿಂ ನೆಕ್ಟ್ಸ್

Previous article

ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟ- ಕಿಟಕಿ ಗಾಜುಗಳು “ಪೀಸ್ ಪೀಸ್”

Next article

You may also like

Comments

Leave a reply

Your email address will not be published. Required fields are marked *

More in Accident