Accident

ಮೈಸೂರಿನಲ್ಲಿ ನರೇಂದ್ರ ಮೋದಿ ಸಹೋದರನ ಕಾರು ಅಪಘಾತ- ಮೋದಿ ಅಣ್ಣ, ಮಗ ಹಾಗೂ ಸೊಸೆಗೆ ಗಾಯ

0

ಮೈಸೂರು- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ಮೋದಿ ಅವರ ಕಾರು ಅಪಘಾತವಾಗಿದೆ.

 

ಬೆಂಗಳೂರಿನಿಂದ ಬಂಡಿಪುರ ಅಭಯಾರಣ್ಯದ ವೀಕ್ಷಕಣೆಗೆ ಹೋಗುವಾಗ ಮೈಸೂರು ನಗರ ಸಮೀಪದ ಕಡಕೊಳ ಬಳಿ ಅಪಘಾತವಾಗಿದೆ

ಪ್ರಹ್ಲಾದ್ ಮೋದಿ ಅವರ ಮರ್ಸಿಡಿಸ್ ಬೆನ್ಜ್ ಕಾರು ವೇಗವಾಗಿ ಹೋಗುವಾಗ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮವಾಗಿ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಈ ಅಪಘಾತದಲ್ಲಿ ಪ್ರಹ್ಲಾದ್ ಮೋದಿ, ಮಗ ಹಾಗೂ ಸೊಸೆಗೆ ಗಾಯವಾಗಿದೆ.

ಮೂವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಪಘಾತಗೊಂಡ ಸ್ಥಳಕ್ಕೆ ಎಸ್ ಪಿ ಸೀಮಾ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಘಟನೆ ಕುರಿತಂತೆ ಮಾಹಿತಿ ಪಡೆದಿದ್ದಾರೆ. ಅಪಘಾತವಾದ ಕಾರನ್ನು ಪೋಲಿಸ್ ಸ್ಟೇಷನ್ ಗೆ ಕ್ರೇನ್ ಮೂಲಕ ಕೊಂಡೊ ಯ್ಯಲಾಗಿದೆ.

siteadmin

ಕ್ರಿಶ್ಚಿಯನ್ ಕಾನ್ವೆಂಟ್ ಗಳಲ್ಲಿ ಓದುವ ಮಕ್ಕಳು ತಂದೆ- ತಾಯಿಗಳನ್ನು ವೃದ್ಧಾಶ್ರಮಗಳಿಗೆ ಸೇರಿಸುತ್ತಾರೆ- ಹೀಗೆಳಿದವರು ಇವರೆ

Previous article

ಮೈಸೂರಿನಲ್ಲಿ ನರೇಂದ್ರ ಮೋದಿ ಅಣ್ಣನನ್ನು ಭೇಟಿ ಮಾಡಿದ ಸುತ್ತೂರು ಸ್ವಾಮೀಜಿ- ಶೀಘ್ರ ಗುಣಮುಖರಾಗುವಂತೆ ಹಾರೈಕೆ

Next article

You may also like

Comments

Leave a reply

Your email address will not be published. Required fields are marked *

More in Accident