Mysore Story

ಸಿದ್ದರಾಮಯ್ಯ ಪರಮಾಪ್ತನ ವಿರುದ್ಧ ಸಿಡಿದೆದ್ದ ಬ್ರಾಹ್ಮಣರು- ಬೃಹತ್ ಪ್ರತಿಭಟನೆಗೆ ನಿರ್ಧಾರ

0

ಮೈಸೂರು- ಸಾಂಸ್ಕೃತಿಕ ನಗರಿಯಲ್ಲಿ ಟಿಪ್ಪು ಪ್ರತಿಮೆ, ಗುಂಬಜ್ ರೀತಿ ಬಸ್ ನಿಲ್ದಾಣ. ವಿವಾದದ ಬೆನ್ನಲ್ಲೇ ಬ್ರಾಹ್ಮಣ ಸಮುದಾಯವನ್ನು ಅವಹೇಳನ ಮಾಡಿದ ವಿವಾದ ಕಾವು ಪಡೆದಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಪರಮಾಪ್ತ ಪ. ಮಲ್ಲೇಶ್ ವಿರುದ್ದ ರೊಚ್ಚಿಗೆದ್ದ ಬ್ರಾಹ್ಮಣ ಸಮುದಾಯ ಬೀದಿಗಿಳಿದು ಹೋರಾಟಕ್ಕೆ ಅಣಿಯಾಗಿದ್ದಾರೆ.

ಮೈಸೂರಿನಲ್ಲಿ ‌ನಡೆದ
ಸಿದ್ದರಾಮಯ್ಯ -75. ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪ. ಮಲ್ಲೇಶ್ ಬ್ರಾಹ್ಮಣರನ್ನು ಅವಹೇಳನ ಮಾಡಿದ್ದರ ವಿರುದ್ಧ ಬ್ರಾಹ್ಮಣ ಸಮುದಾಯ ಸಿಡಿದೆದ್ದಿದೆ.
ಬ್ರಾಹ್ಮಣರು ಈ ದೇಶವನ್ನು ಹಾಳುತ್ತಾ ಬಂದಿದ್ದಾರೆ. ವೇದ,ಉಪನಿಷತ್ತುಗಳು ವ್ಯವಸ್ಥೆಯನ್ನು ಹಾಳು ಮಾಡುತ್ತಾ ಬಂದಿದೆ
ಈ ಬ್ರಾಹ್ಮಣರನ್ನು ಯಾರೂ ನಂಬಬೇಡಿ ಎಂದು ಪ. ಮಲ್ಲೇಶ್ ಕಟು ಟೀಕೆ ಮಾಡಿದ್ದರು.

ಪ. ಮಲ್ಲೇಶ್ ಮಾತನಾಡಿರುವ ವೀಡಿಯೋ ವೈರಲ್ ಆಗುತ್ತಿದ್ದಂತೆ ಸಿಟ್ಟಿಗೆದ್ದ ಬ್ರಾಹ್ಮಣ ಸಮುದಾಯ ಮುಡಾ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್ ಪನೇತೃತ್ವದಲ್ಲಿ ತುರ್ತು ಸಭೆ ನಡೆಸಿದ್ದಾರೆ. ಸೋಮವಾರ ಪ.ಮಲ್ಲೇಶ್ ವಿರುದ್ದ ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ.

ಮೈಸೂರಿನ ಶಂಕರಮಠದಿಂದ ಜಿಲ್ಲಾಧಿಕಾರಿ ಕಚೇರಿಗೆ ಬೃಹತ್ ಪ್ರತಿಭಟನಾ ಮೆರವಣಿಗೆಗೆ ನಿರ್ಧಾರ ಮಾಡಲಾಗಿದೆ. ಇಂದು ಪ. ಮಲ್ಲೇಶ್ ವಿರುದ್ದ ಪೊಲೀಸ್ ಠಾಣೆಗೂ ದೂರು ನೀಡಲಿರುವ ಬ್ರಾಹ್ಮಣ ಮುಖಂಡರು ಕ್ರಮಕ್ಕೆ ಆಗ್ರಹಿಸಿದ್ದಾರೆ.

siteadmin

ಮೈಸೂರು

Previous article

ವಿವಾದಿತ ಬಸ್ ನಿಲ್ದಾಣದ ಗುಂಬಜ್ ಗೆ ರಾತ್ರೋರಾತ್ರಿ ಕೆಂಪು ಬಣ್ಣ- ಗುಂಬಜ್ ಗೆ ಗೋಲ್ಡ್ ಕಲರ್ ಹೋಯ್ತು ರೆಡ್ ಕಲರ್ ಬಂತು

Next article

You may also like

Comments

Leave a reply

Your email address will not be published. Required fields are marked *

More in Mysore Story