Politics

ಕೆಪಿಸಿಸಿ ಅಧ್ಯಕ್ಷ ಡಿ‌‌.ಕೆ.ಶಿವಕುಮಾರ್ ಗೆ ಇಡಿ ‘ಡ್ರಿಲ್’- ಅಕ್ರಮ ಆಸ್ತಿ‌ ಸಂಬಂಧ ಪ್ರಶ್ನೆಗಳ ಸುರಿಮಳೆ

0
pjimage

ನವದೆಹಲಿ- ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಇಡಿ ಅರ್ಥಾತ್ ಜಾರಿ ನಿರ್ದೇಶನಾಲ ಡ್ರಿಲ್ ಮಾಡುತ್ತಿದೆ.

ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದ ಇಡಿ ಡಿ‌ಕೆ.ಶಿವಕುಮಾರ್ ಅವರನ್ನು ಅರೆಸ್ಟ್ ಮಾಡಿತ್ತು. ಜೈಲಿಗೆ ಹೋಗಿದ್ದ ಶಿವಕುಮಾರ್ ಜಾಮೀನಿನ ಮೇಲೆ ಜೈಲಿನಿಂದ ರಿಲೀಸ್ ಆಗಿದ್ದರು.

ಆದರೆ ಈಗ ಇಡಿ ಹೆಚ್ಚುವರಿ ಎಫ್ಐಆರ್ ಗಳನ್ನು ದಾಖಲಿಸಿದೆ. ಈ ಹಿನ್ನೆಲೆ ಡಿ.ಕೆ.ಶಿವಕುಮಾರ್ ಅವರಿಗೆ ಇಡಿ ನೋಟಿಸ್ ನೀಡಿತ್ತು.

ಈ ಕಾರಣದಿಂದ ಡಿ.ಕೆ.ಶಿವಕುಮಾರ್ ಇಂದು ದೆಹಲಿಯ ಜಾರಿ ನಿರ್ದೇಶನಾಲಯದ ಕಛೇರಿಯಲ್ಲಿ ಇಡಿ ಅಧಿಕಾರಿಗಳ ವಿಚಾರಣೆಗೆ ಹಾಜರಾಗಿದ್ದರು.

ಇಂದು ಬೆಳಿಗ್ಗೆ ಇಡಿ ಅಧಿಕಾರಿಗಳ ಮುಂದೆ ಹಾಜರಾದ ಡಿ‌ಕೆ.ಶಿವಕುಮಾರ್ ಅವರಿಗೆ ಅಧಿಕಾರಿಗಳು ಅಕ್ರಮ ಆಸ್ತಿ ಸಂಪಾದನೆ ಕುರಿತಂತೆ ಪ್ರಶ್ನೆಗಳ ಸುರಿಮಳೆಗೈಯುತ್ತಿದ್ದಾರೆ.

ಸುಮಾರು ಮೂರು ಗಂಟೆಗಳ ಕಾಲ ವಿಚಾರಣೆ ಮಾಡಿ ಮಧ್ಯಾಹ್ನ ಊಟಕ್ಕೆಂದು ಬಿಟ್ಟರು.

ಈ ವೇಳೆ ಹೊರಗೆ ಬಂದ ಡಿ.ಕೆ‌.ಶಿವಕುಮಾರ್ ಬಳಲಿದಂತೆ ಕಂಡು ಬಂದರು. ಕೆಲವರಿಗೆ ಫೋನ್ ಕೂಡ ಮಾಡಿದರು.
ಊಟ ಮುಗಿಸಿ ಮತ್ತೆ ಶಿವಕುಮಾರ್ ಇಡಿ ಮುಂದೆ ಹಾಜರಾಗಿದರು. ಈ ವೇಳೆ ಡಿಕೆಶಿಗೆ ಆರೋಗ್ಯ ಕೈಕೊಟ್ಟಿತು. ಅಲ್ಲೆ ಇದ್ದ ವೈದ್ಯರು ನೆರವಿಗೆ ಬಂದರು

ಡಿಕೆಶಿ ಸಹೋದರ ಸಂಸದ ಡಿ.ಕೆ.ಸುರೇಶ್ ಈ ವೇಳೆ ಜೊತೆಯಲ್ಲಿದ್ದರು.

ಒಂದು ಮೂಲದ ಪ್ರಕಾರ ಇಡಿ ವಿಚಾರಣೆ ನಾಳೆ ಕೂಡ ಮುಂದುವರೆಯುವ ಸಾಧ್ಯತೆ ಇದೆ.

siteadmin

ಎಫ್ ಡಿಎ ಪರೀಕ್ಷೆ ಹಗರಣ- ಮೈಸೂರಿನ ಟ್ರಾಫಿಕ್ ಪಿಎಸ್ಐ ಅಶ್ವಿನಿ ಸಸ್ಪೆಂಡ್- ಪೋಲಿಸ್ ಆಯುಕ್ತರ ಆದೇಶ

Previous article

‘ಕಿಸ್’ ಸಿನಿಮಾ ಹೀರೋಹಿನ್ ಶ್ರೀಲೀಲಾ ತುಂಬಾನೆ ಕಾಸ್ಟ್ಲಿ- ವೆಚ್ಚ ಭರಿಸುತ್ತಿರುವ ಪ್ರೊಡ್ಯೂಸರ್ ಸುಸ್ತೊ ಸುಸ್ತು

Next article

You may also like

Comments

Comments are closed.

More in Politics