Mysore Story

ಮಹಿಷ ದಸರಾ ವಿರೋಧಿಸಿ ಅಕ್ಟೋಬರ್ 13ರಂದು “ಚಾಮುಂಡಿ ಬೆಟ್ಟ ಚಲೋ”

0

ಮೈಸೂರು- ಮಹಿಷ ದಸರಾ ಆಚರಣೆ ವಿರೋಧಿಸಿ ಬಿಜೆಪಿಯಿಂದ ಅಕ್ಟೋಬರ್ 13ರಂದು  ಚಾಮುಂಡಿ ಬೆಟ್ಟ ಚಲೋ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

ಮೈಸೂರು ಬಿಜೆಪಿ ಕಚೇರಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಂಸದ ಪ್ರತಾಪ್ ಸಿಂಹ, ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ನಾಲ್ಕು ಶತಮಾನಗಳಿಗೂ ಹೆಚ್ಚಿನ ಇತಿಹಾಸವಿದೆ. ಹೈದರಾಲಿ ಟಿಪ್ಪು ಆಳ್ವಿಕೆ ಹೊರತುಪಡಿಸಿ ಉಳಿದ ಕಾಲದಲ್ಲಿ ಚಾಚೂ ತಪ್ಪದೇ ದಸರಾ ನಡೆದುಕೊಂಡು ಬಂದಿದೆ.
ಆದರೆ ಕಳೆದ 2016 ರಿಂದ ಕೆಲವರು ಮಹಿಷ ದಸರಾ ಆಚರಣೆಗೆ ಮುಂದಾಗಿ ಅಪದ್ದವ ಹುಟ್ಟುಹಾಕಿದ್ದಾರೆ ಎಂದು ಕಿಡಿಕಾರಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಹಿಷ ದಸರಾ ಆಚರಣೆಗೆ ಅನುಮತಿ ನೀಡಲಿಲ್ಲ. ಇದೀಗ ಸಿದ್ದರಾಮಯ್ಯ ಸರ್ಕಾರ ಬಂದ ನಂತರ ಕೆಲವರು ಮಹಿಷ ದಸರಾ ಆಚರಣೆಗೆ ಮುಂದಾಗಿರೋದು ಸರಿಯಲ್ಲ. ಹಾಗಾಗಿ ಮಹಿಷ ದಸರಾ ಆಚರಣೆ ವಿರೋಧಿಸಿ ಅಕ್ಟೋಬರ್ 13 ರಂದು ಚಾಮುಂಡಿ ಬೆಟ್ಟ ಚಲೋ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಪ್ರತಾಪ್ ಸಿಂಹ ತಿಳಿಸಿದರು.

ಸುಮಾರು 5 ಸಾವಿರಕ್ಕೂ ಹೆಚ್ಚು ಮಂದಿ ಭಾಗಿಯಾಗಲಿದ್ದಾರೆಂದು. ಅಕ್ಟೋಬರ್ 13 ರಂದು ಬೆಳಿಗ್ಗೆ 8 ಗಂಟೆಗೆ ಚಲೋ ಚಾಮುಂಡಿ ಬೆಟ್ಟ ನಡೆಯುತ್ತದೆ. ಮಹಿಷಾ ದಸರಾವನ್ನು ತಡೆಯುವುದಷ್ಟೇ ನಮ್ಮ ಉದ್ದೇಶ.
ಈ ವಿಚಾರದಲ್ಲಿ ಸಂಘರ್ಷಕ್ಕೂ ನಾವು ಸಿದ್ದರಿದ್ದೇವೆ. ಮೈಸೂರು‌ ಜಿಲ್ಲೆಯ‌ 11 ಶಾಸಕರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಈ ಬಗ್ಗೆ ಧರ್ಮಾತೀತವಾಗಿ ಎಲ್ಲರಿಗೂ ಕರೆ ಕೊಡುತ್ತಿದ್ದೇವೆ ಎಂದು
ಸಂಸದ ಪ್ರತಾಪ್ ಸಿಂಹ ಹೇಳಿದರು.

 

siteadmin

ಇಂದಿನಿಂದ ರಾತ್ರಿ 8 ಗಂಟೆ ತನಕ ಸಬ್ ರಿಜಿಸ್ಟಾರ್ ಕಚೇರಿ ಓಪನ್

Previous article

ದೇವಸ್ಥಾನದಲ್ಲಿ ನಟಿ ಖುಷ್ಬೂ ಪಾದ ತೊಳೆದು ವಿಶಿಷ್ಟ ಪೂಜೆ

Next article

You may also like

Comments

Leave a reply

Your email address will not be published. Required fields are marked *

More in Mysore Story