Mysore Story

ಮೈಸೂರು ಜನರಿಗೆ ಕೋಟ್ಯಾಂತರ ರೂಪಾಯಿ ಪಂಗನಾಮ- ಖತರ್ನಾಕ್ ವಂಚಕ ಕೊನೆಗೂ ಸೆರೆ- ರಾಜಸ್ಥಾನದಲ್ಲಿ ಖೆಡ್ಡಾಗೆ ಕೆಡವಿದ ಖಾಕಿ

0

ಮೈಸೂರು- ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನೂರಾರು ಜನರಿಗೆ ಕೋಟ್ಯಾಂತರ ರೂಪಾಯಿ ಪಂಗನಾಮ ಹಾಕಿ ಎಸ್ಕೇಪ್ ಆಗಿದ್ದ ನೇಮಿಚಂದ್ ರಾಮ್ ಅಲಿಯಾಸ್ ನಿಮರಾಮ್ ಸರ್ವಿ ರಾಮ್ ಪೋಲಿಸರಿಗೆ ಸೆರೆ ಸಿಕ್ಕಿದ್ದಾನೆ.

ಮೈಸೂರಿನ ವಿವೇಕಾನಂದ ನಗರ ಸರ್ಕಲ್ ಬಳಿಯ ಮಾರುತಿ ಜ್ಯುವೆಲರ್ಸ್ ಮಾಲೀಕನಾದ ನೇಮಿಚಂದ್ ರಾಮ್ ಕೋಟಿ ಕೋಟಿ ಪಂಗನಾಮ ಹಾಕಿದ್ದನು. ಬಹಳಷ್ಟು ಜನರು ಇವನ ಬಳಿ ಚಿನ್ನದ ಒಡವೆಗಳನ್ನು ಗಿರವಿ ಇಟ್ಟಿದ್ದರು. ಮತ್ರೆ ಇನ್ನಷ್ಟು ಜನರು ತಿಂಗಳ ಲಕ್ಕಿ ಡಿಪ್ ಲಾಟರಿ ಚೀಟಿ ಹಾಕಿದ್ದರು. ಇದೇ ರೀತಿಯ ಹಲವು ವ್ಯವಹಾರದಿಂದ ಕೋಟ್ಯಂತರ ರೂಪಾಯಿ ಉಂಡೆ ನಾಮ ಹಾಕಿ ಕಳೆದ ಒಂದೂವರೆ ತಿಂಗಳ ಹಿಂದೆ ಎಸ್ಕೇಪ್ ಆಗಿದ್ದನು.

ಮೈಸೂರಿನಿಂದ ಬೆಂಗಳೂರಿಗೆ ಹೋಗಿ ಅಲ್ಲಿಂದ ರಾಜಸ್ಥಾನಕ್ಕೆ ಹೋಗಿ ತಲೆ ಮರೆಸಿಕೊಂಡಿದ್ದನು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಮೈಸೂರಿನ ಕುವೆಂಪು ನಗರ ಪೋಲಿಸರು ರಾಜಸ್ಥಾನಕ್ಕೆ ತೆರಳಿ ಬೆನ್ನತ್ತಿ ಹಿಡಿದು ಈಗ ಮೈಸೂರಿಗೆ ಕರೆ ತಂದಿದ್ದಾರೆ. ಇವನ ಬಳಿ ಒಡವೆ ಗಿರವಿ ಇಟ್ಟವರು ಹಾಗೂ ಚೀಟಿ ಹಾಕಿದವರು ಈಗ ಪೋಲಿಸ್ ಸ್ಟೇಷನ್ ಗೆ ಹೋಗಿ ಕ್ಲೈಮ್ ಮಾಡುತ್ತಿದ್ದಾರೆ. ಪೋಲಿಸರು ಇವನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

siteadmin

ಮೈಸೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ “ಇಲಿ ಫ್ರೈ” ತಿಂಡಿ- ಕ್ಯಾಂಟೀನ್ ವಿರುದ್ಧ ವಿದ್ಯಾರ್ಥಿಗಳ ಕಿಡಿ

Previous article

ಮೈಸೂರಿಗೆ ಹೊಸ ವರ್ಷಕ್ಕೆ ಬಂಪರ್ ಕೊಡುಗೆ- ಜನವರಿ 1 ರಿಂದ ಜಿಯೋ ಟ್ರೂ 5 ಜಿ ಸೇವೆ ಆರಂಭ

Next article

You may also like

Comments

Leave a reply

Your email address will not be published. Required fields are marked *

More in Mysore Story