Mysore Story

ಹೊಸ ವರ್ಷಕ್ಕೆ ಮೈಸೂರಿನ ಯೋಗ ನರಸಿಂಹಸ್ವಾಮಿ ದೇವಸ್ಥಾನದಲ್ಲಿ 2 ಲಕ್ಷ ಲಾಡು ತಯಾರಿ- ವಿಡಿಯೋ ನೋಡಿ

0

ಮೈಸೂರು– ಸ್ವಲ್ಪ ಮಟ್ಟಿಗೆ ಕೊರೊನಾ ಭಯವಿದ್ದರೂ ಸಾಂಸ್ಕ್ರತಿಕ ನಗರಿ ಮೈಸೂರಿನ ಜನರು ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಳ್ಳುತ್ತಿದ್ದಾರೆ. ಮೈಸೂರಿನ ವಿಜಯನಗರದ ಯೋಗಾನರ ಸಿಂಹಸ್ವಾಮಿ ದೇವಾಲಯದಲ್ಲಿ ಜನವರಿ 1 ರ ಹೊಸ ವರ್ಷದಂದು ಬರೋ ಬರಿ ಎರಡು ಲಕ್ಷಕ್ಕೂ ಹೆಚ್ಚು ಲಾಡುಗಳನ್ನು ವಿತರಿಸಲಾಗುತ್ತಿದೆ. ಧನರ್ಮಾಸದಲ್ಲಿ ಕಡ್ಲೆ ಬೇಳೆ ಹಾಗೂ ಹೆಸರು ಬೇಳೆಯಿಂದ ತಯಾರಿಸಿದ ಆಹಾರ ಸ್ವೀಕರಿಸಿದ್ರೆ ಸತ್ವ ಗುಣ ಪ್ರಚೂರಗೊಂಡು, ದೇಹದ ಕಾಂತಿ ಹೊಳಪಾಗುತ್ತದೆ ಎಂಬ ವೈಜ್ಞಾನಿಕ ಕಾರಣದಿಂದ ದೇವರ ಸನ್ನಿಧಿಯಲ್ಲಿ ಅಂದು ಪ್ರಸಾದದ ಲಾಡುಗಳನ್ನು ಭಕ್ತರಿಗೆ ವಿತರಿಸಲಾಗುತ್ತಿದೆ.

ಕೊರೊನಾ ಭೀತಯ ಕಾರಣ ಕಳೆದ ಎರಡು ವರ್ಷದ ಅವಧಿಯಲ್ಲಿ ಹೊಸ ವರ್ಷಾಚರಣೆಯನ್ನು ಸಾಂಕೇತಿಕವಾಗಿ ಆಚರಿಸಲಾಯಿತು. ಆದರೆ ಈ ವರ್ಷವೂ ಕೊರೊನಾ ಭೀತಿ ಇದ್ದರೂ ಅಷ್ಟಾಗಿ ಪರಿಣಾಮ ಬೀರದ ಕಾರಣ ಹೊಸ ವರ್ಷಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಸಾಂಸ್ಕ್ರತಿಕ ನಗರಿ ಮೈಸೂರಿನ ವಿಜಯನಗರದ ಯೋಗಾ ನರಸಿಂಹಸ್ವಾಮಿ ದೇವಾಲಯದಲ್ಲಿ ಜನವರಿ 1 ರ ಹೊಸ ವರ್ಷದಂದು ದೇವರ ದರ್ಶನ ಪಡೆಯುವರಿಗೆ ಪ್ರಸಾದ ನೀಡಲು ಬರೋ ಬರಿ ಎರಡು ಲಕ್ಷಕ್ಕೂ ಹೆಚ್ಚು ಲಾಡುಗಳನ್ನು ತಯಾರಿಸಲಾಗುತ್ತಿದೆ. ಕಳೆದ ಒಂದು ವಾರದಿಂದ ಹತ್ತಾರು ಬಾಣಸಿಗರು ಶ್ರಮವಹಿಸಿ ಲಾಡು ತಯಾರಿಸುತ್ತಿದ್ದಾರೆ.

ಧನುರ್ಮಾಸದಂದು ಹೆಸರು ಬೇಳೆ ಹಾಗೂ ಕಡ್ಲೆ ಬೇಳೆಯಿಂದ ತಯಾರಿಸಿದ ಆಹಾರ ಸ್ವೀಕರಿಸಿದರೆ ಸ್ವಾಸ್ಥ್ಯ ಆರೋಗ್ಯ ಕಾಪಾಡಬಹುದು. ಜೊತೆಗೆ ಸತ್ವ ಗುಣ ಪ್ರಚೂರಗೊಂಡು, ದೇಹದ ಕಾಂತಿ ಹೊಳಪಾಗುತ್ತದೆ ಎಂಬ ವೈಜ್ಞಾನಿಕ ಕಾರಣವಿದೆ. ಈ ನಿಟ್ಟಿನಲ್ಲಿ ದೇವರ ಸನ್ನಿಧಿಯಲ್ಲಿ ಕಡ್ಲೆ ಬೇಳೆಯಿಂದ ತಯಾರಿಸಿದ ರುಚಿಯಾದ ಲಾಡುವನ್ನು ಅಂದು ಭಕ್ತರಿಗೆ ವಿತರಿಸಲಾಗುತ್ತದೆ.

ಜನವರಿ 1 ರ ಹೊಸ ವರ್ಷದಂದು ಉಗ್ರ ನರಸಿಂಹ ಸ್ವಾಮಿಗೆ ವಿಶೇಷ ಪೂಜೆಗಳು ನೆರವೇರಿಸಿ ಭಕ್ತರಿಗೆ ಲಾಡುಗಳನ್ನು ವಿತರಿಸಲಾಗುತ್ತದೆ. ಈ ಮೂಲಕ ದೈವಿಕ ಭಾವನೆಯಿಂದ ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಳ್ಳಲಾಗುತ್ತಿದೆ.

siteadmin

ಮೈಸೂರಿಗೆ ಹೊಸ ವರ್ಷಕ್ಕೆ ಬಂಪರ್ ಕೊಡುಗೆ- ಜನವರಿ 1 ರಿಂದ ಜಿಯೋ ಟ್ರೂ 5 ಜಿ ಸೇವೆ ಆರಂಭ

Previous article

ನರೇಂದ್ರ ಮೋದಿ ಹೆತ್ತಮ್ಮ ಇನ್ನಿಲ್ಲ- ಆದರ್ಶ ತಾಯಿಗೆ ಆದರ್ಶ ಮಗನಾದ ಮೋದಿ- ನಮೋ ಕಣ್ಣಂಚಲ್ಲಿ ಕಂಬನಿ

Next article

You may also like

Comments

Leave a reply

Your email address will not be published. Required fields are marked *

More in Mysore Story