Health

ಅತಿಯಾದ ‘ವರ್ಕೌಟ್’ ಅಪ್ಪು ಸಾವಿಗೆ ಕಾರಣವಾಯಿತೆ…?- ಮಿತಿ ಮೀರಿದ ವ್ಯಾಯಾಮ ಸಾವಿನ ದವಡೆಗೆ ದೂಡುತ್ತೆ…!

0
puneet

ಬೆಂಗಳೂರು- ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಅತಿಯಾಗಿ ಜಿಮ್ ವರ್ಕೌಟ್ ಮಾಡಿದ ಕಾರಣ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ. ಅತಿಯಾದ ವ್ಯಾಯಾಮ ಪುನೀತ್ ನನ್ನು ಸಾವಿನ ಮನೆಗೆ ಕರೆದೋಯಿತು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ.

ಹಾಗಾದ್ರೆ ವ್ಯಾಯಾಮ ಮಾಡುವುದರಿಂದ ಸಾಧಕ-ಭಾದಕಗಳೇನು ಎಂಬ ಬಗ್ಗೆ ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ ಬನ್ನಿ.

ಜಿಮ್ ಮಾಡುವುದರಿಂದ ತೂಕ ಕಂಟ್ರೋಲ್ ಮಾಡಬಹುದು. ರಕ್ತದಲ್ಲಿನ ಸಕ್ಕರೆ ಹಾಗೂ ಇನ್ಸುಲಿನ್ ಮಟ್ಟ ನಿರ್ವಹಿಸಲು ದೇಹಕ್ಕೆ ಸಹಾಯ ಆಗುತ್ತೆ. ಇಷ್ಟೆ ಅಲ್ಲದೆ ವರ್ಕೌಟ್ ಮಾಡುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆ ದೂರ ಮಾಡಬಹುದು ಎಂಬುವುದು ವೈದ್ಯರ ವಾದ.
ಸಿಹಿ ತುಂಬಾ ತಿಂದರೆ ಕಹಿಯಾಗುತ್ತದೆ ಎಂಬ ಮಾತಿನಂತೆ ಅತಿಯಾದ ವರ್ಕೌಟ್ ದೇಹಕ್ಕೆ ಮೃತ್ಯುವಾಗುತ್ತದೆ ಎಂಬ ವಾದವಿದೆ.

ಪ್ರತಿದಿನ ಒಂದೂವರೆ ಗಂಟೆಗಳ ಕಾಲ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳಬೇಕು. ಜೊತೆಗೆ ಸಮತೋಲನದ ಆಹಾರ ಸ್ವೀಕಾರ ಮಾಡಬೇಕು. ಇದರಿಂದ ಹೃದಯದ ಸ್ನಾಯುಗಳನ್ನು ಬಲಪಡಿಸಿ, ಹೃದಯದ ರಕ್ತನಾಳದ ರೋಗಗಳನ್ನು ದೂರ ಮಾಡಬಹುದು ಎಂಬುವುದು ವೈದ್ಯರ ಅಭಿಪ್ರಾಯ.
ಆದರೆ ಅತಿಯಾದ ಜಿಮ್ ವರ್ಕೌಟ್ ಮಾಡಿದರೆ ದೇಹದಂಡನೆ ಉಂಟಾಗಿ ಹೃದಯದ ಸರಣಿ ಸಮಸ್ಯೆಗಳು ಎದುರಾಗುತ್ತದೆ. ಇದರಿಂದ ಅಸ್ವಸ್ಥತೆ ಉಂಟಾಗಿ ಸಾವು ಎದುರಾಗುತ್ತದೆ.

ಇನ್ನು ಯು ಎಸ್. ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ನ್ಯಾಯಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಕೇರ್ ಅಧ್ಯಯನದ ಪ್ರಕರಣ ಅತಿಯಾದ ವರ್ಕೌಟ್ ಮಾಡುವುದರಿಂದ ಹೃದಯ ಸ್ತಂಭನ ಅಥವಾ ಹಠಾತ್ ಹೃದಯಾಘಾತವಾಗಿ ಸಾವು ಬರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಈ ಕಾರಣದಿಂದ ತುಂಬಾ ಸಣ್ಣಗಾಗಬೇಕು, ಸ್ಲಿಮ್ ಆಗಬೇಕು, ಈ ಮೂಲಕ ಸುಂದರವಾಗಿ ಕಾಣಬೇಕು ಎಂಬ ಭ್ರಮೆಯನ್ನು ಬಿಟ್ಟು ವಾಸ್ತವದಲ್ಲಿ ಬದುಕಬೇಕು. ಸಮತೋಲನದ ವ್ಯಾಯಾಮ ಹಾಗೂ ಆಹಾರ ಸೇವನೆಯಿಂದ ಸ್ವಾಸ್ಥ್ಯ ಆರೋಗ್ಯ ಕಾಪಾಡಿಕೊಳ್ಳಬಹುದು.

siteadmin

ಉಸಿರು ಚೆಲ್ಲುವ ಮುನ್ನ ಪುನೀತ್ ಪರಿಸ್ಥಿತಿ ಬಗ್ಗೆ ಡಾ.ರಮಣ ವಿವರಣೆ- ಹಾರ್ಟ್ ಅಟ್ಯಾಕ್ ಆಗಿರಲಿಲ್ಲ ಕಾರ್ಡಿಯಾಕ್ ಅರೆಸ್ಟ್ ಆಗಿತ್ತು

Previous article

ಹೃದಯಾಘಾತ ದಿಢೀರ್ ಆಗುವುದಿಲ್ಲ!!- ಹಾರ್ಟ್ ಅಟ್ಯಾಕ್ ಲಕ್ಷಣಗಳೇನು…?- ‘ಗೋಲ್ಡನ್ ಅವರ್’ ಯಾವುದು…?

Next article

You may also like

Comments

Comments are closed.

More in Health