HealthNational

ಕೊರೊನಾ ಹೋಯ್ತು ‘ಮಂಕಿಪಾಕ್ಸ್’ ಬಂತು- ಭಾರತದ ಏರ್ ಪೋರ್ಟ್ ಹಾಗೂ ಬಂದರುಗಳಲ್ಲಿ ಹೈಅಲರ್ಟ್- ಧರ್ಮಲ್ ಸ್ಕ್ರೀನಿಂಗ್

0

ಡಿಜಿಟಲ್ ಡೆಸ್ಕ್- ಕೊರೊನಾ ನಂತರ ಮಂಕಿಪಾಕ್ಸ್ ಈಗ ಇಡೀ ವಿಶ್ವವನ್ನು ಕಾಡುತ್ತಿದೆ. ರೋಗ ಲಕ್ಷಣವಿರುವ ದೇಶದಿಂದ ಬಂದ ವಿಮಾನ ಹಾಗೂ ಬಂದರು ಪ್ರಯಾಣಿಕರನ್ನು ಥರ್ಮಲ್ ಸ್ಕ್ರಿನಿಂಗ್ ಗೆ ಒಳಪಡಿಸುವಂತೆ ಭಾರತ ಸರ್ಕಾರದ ಆರೋಗ್ಯ ಸಚಿವಾಲಯ ಆದೇಶ ನೀಡಿದೆ.

ಏರ್ ಪೋರ್ಟ್ ಹಾಗೂ ಬಂದರುಗಳಲ್ಲಿ ಕಣ್ಗಾವಲು ಹೆಚ್ಚಿಸಲಾಗಿದೆ. ಮಂಕಿಪಾಕ್ಸ್ ರೋಗ ಗುಣ ಲಕ್ಷಣ ಇರುವ ರೋಗಿಗಳನ್ನು ಪ್ರತ್ಯೇಕಿಸುವಂತೆ ಇದೇ ವೇಳೆ ಸೂಚನೆ ನೀಡಲಾಗಿದೆ.

ಕಳೆದ 21 ದಿನದ ಅವದಿಯಲ್ಲಿ ಮಂಕಿಪಾಕ್ಸ್ ಪೀಡಿತ ದೇಶಗಳಿಂದ ಬಂದಿರುವರನ್ನು ಥರ್ಮಲ್ ಸ್ಕ್ರೀನಿಂಗ್ ಗೆ ಒಳಪಡಿಸುವಂತೆ ಕೂಡ ಸೂಚಿಸಲಾಗಿದೆ. ಒಂದು ವೇಳೆ ಮಂಕಿಪಾಕ್ಸ್ ಗುಣಲಕ್ಷಣವಿರುವ ವ್ಯಕ್ತಿಗಳು ಕಂಡು ಬಂದರೆ ರಕ್ತ ಸೇರಿದಂತೆ ಇತರೆ ಮಾದರಿಗಳನ್ನು ಮಹಾರಾಷ್ಟ್ರದ ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯ ಬಿಎಸ್ಎಲ್ 4 ಸೌಲಭ್ಯಕ್ಕೆ ಕಳುಹಿಸುವಂತೆ ಹೇಳಲಾಗಿದೆ.

ಮಂಕಿಪಾಕ್ಸ್ ಪೀಡಿತರು ಜ್ವರ, ದುದ್ದುಗಳು ಹಾಗೂ ಊದಿಕೊಂಡ ದುಗ್ಥರಸ ಗ್ರಂಥಿಗಳು ಕಾಣಿಸಿಕೊಳ್ಳುತ್ತದೆ. ರೋಗ ಲಕ್ಷಣ ಎರಡರಿಂದ ಮೂರು ವಾರಗಳ ತನಕ ಇರುತ್ತದೆ. ಸಾವಿನ ಅನುಪಾತ ಶೇಕಡಾ 3 ರಿಂದ 6 ರ ಅಸುಪಾಸಿನಲ್ಲಿ ಇರುತ್ತದೆ ಎಂದು ಡಬ್ಲ್ಯೂಹೆಚ್ ಒ ಹೇಳಿದೆ.

ಉಸಿರಾಟದ ಹನಿಗಳು, ಕಲುಷಿತ ವಸ್ತುಗಳು, ಗಾಯ ಹಾಗೂ ದೇಹದ ದ್ರವಗಳ ಇರುವರೊಡನೆ ನಿಕಟ ಸಂಪರ್ಕ ಹೊಂದಿದ್ದರೆ ಮಂಕಿಪಾಕ್ಸ್ ವೈರಸ್ ಒಬ್ಬರಿಂದ ಮತ್ತೊಬ್ಬರಿಗೆ ಹರಡಲಿದೆ.

siteadmin

ಕೊರೊನಾ ಹೋಯ್ತು ಮಂಕಿಪಾಕ್ಸ್ ಬಂತು- ಭಾರತದ ಏರ್ ಪೋರ್ಟ್ ಹಾಗೂ ಬಂದರುಗಳಲ್ಲಿ ಹೈಅಲರ್ಟ್- ಧರ್ಮಲ್ ಸ್ಕ್ರೀನಿಂಗ್

Previous article

ನವ ದಂಪತಿಗಳು ಆತ್ಮಹತ್ಯೆಗೆ ಶರಣು- ಕಾರಿಗೆ ಪೆಟ್ರೋಲ್ ಸುರಿದು ಒಳಗೆ ಕುಳಿತವರು ಸ್ವಹತ್ಯೆ

Next article

You may also like

Comments

Comments are closed.

More in Health