Lucky Job

ನಿರುದ್ಯೋಗಿಗಳಿಗೆ ಬಂಪರ್ ‘ಜಾಬ್’ ಆಫರ್- ಟಿಸಿಎಸ್ ಮತ್ತು ಇನ್ಫೋಸಿಸ್ ನಿಂದ ಹೊಸ ನೇಮಕಾತಿಗೆ ಗ್ರೀನ್ ಸಿಗ್ನಲ್

0

ಬೆಂಗಳೂರು- ಕೊರೊನಾದಿಂದ ಇಡೀ ಆರ್ಥಿಕ ವ್ಯವಸ್ಥೆಯೇ ಜರ್ಜರಿತವಾಗಿದೆ. ಆದರೆ ದೇಶದ ಪ್ರತಿಷ್ಠಿತ ಟಿಸಿಎಸ್ ಮತ್ತು ಇನ್ಫೋಸಿಸ್ ಕಂಪನಿಯು ಲಾಭ ಗಳಿಸಿದೆ. ಈ ನಿಟ್ಟಿನಲ್ಲಿ ಈ ಎರಡು ಕಂಪನಿಗಳು 66,000 ಮಂದಿ ನೇಮಕಾತಿ ಮಾಡಿಕೊಳ್ಳುವುದಾಗಿ ತಿಳಿಸಿದೆ.
ಈ ಬಾರಿಯ ಹಣಕಾಸು ವರ್ಷದಲ್ಲಿ ಅಂದರೆ 2021-22 ರ ಅವಧಿಯಲ್ಲಿ ಹೊಸದಾಗಿ 26,000 ಮಂದಿಯನ್ನು ನೇಮಕಾತಿ ಮಾಡಿಕೊಳ್ಳುವುದಾಗಿ ಇನ್ಪೋಸಿಸ್ ತಿಳಿಸಿದೆ. ಇವರಲ್ಲಿ 24,000 ದೇಶಿಯರು ಹಾಗೂ 2,000 ವಿದೇಶಿಗರನ್ನು ನೇಮಕಾತಿ ಮಾಡಿಕೊಳ್ಳುವುದಾಗಿ ಇನ್ಫೋಸಿಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಕುಮಾರ್ ರಾವ್ ತಿಳಿಸಿದ್ದಾರೆ. ಈ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶವಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಟಿಸಿಎಸ್ ಕೂಡ ನೇಮಕಾತಿ ಮಾಡಿಕೊಳ್ಳವುದಾಗಿ ತಿಳಿಸಿದೆ. ಆದರೆ ಎಷ್ಟು ಸಂಖ್ಯೆಯ ಉದ್ಯೋಗವಕಾಶ ಸಿಗಲಿದೆ ಎಂದು ಸ್ಪಷನೆ ನೀಡಿಲ್ಲ. ಉದ್ಯೋಗದ ಬೇಡಿಕೆಗೆ ಆನುಗುಣವಾಗಿ ನೇಮಕಾತಿ ಮಾಡಿಕೊಳ್ಳಲಾಗುವುದು. ಆದರೆ ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚು ಉದ್ಯೋಗವಕಾಶ ನೀಡಲಾಗುವುದು ಎಂದು ಟಿಸಿಎಸ್ ಮುಖ್ಯ ಮಾನವ ಸಂಪನ್ಮೂಲಧಿಕಾರಿ ಮಿಲಿಂದ್ ಲಕ್ಕಡ್ ತಿಳಿಸಿದ್ದಾರೆ.

siteadmin

ದಲಿತರಿಗೆ ಕ್ಷೌರ ಮಾಡಲ್ಲ ಎಂಬ ಹಟಕ್ಕೆ ಬಿದ್ದ ಹೇರ್ ಸೆಲ್ಯೂನ್ಸ್- ಇದಕ್ಕೆ ಮೈಸೂರಿನ ಇಬ್ಬರು ಯುವಕರು ಏನ್ಮಾಡಿದ್ರು ಗೊತ್ತಾ…?

Previous article

2 ಶರ್ಟ್ ಕದ್ದಿದ್ದಕ್ಕೆ ಕೋರ್ಟ್ ಕೊಟ್ಟ ಶಿಕ್ಷೆ 20 ವರ್ಷ- ಜೈಲು ಕಂಬಿ ಎಣಿಸಿ ಹೊರ ಬಂದವನು ಈಗ ಅನಾಥ, ಒಬ್ಬಂಟಿ

Next article

You may also like

Comments

Leave a reply

Your email address will not be published. Required fields are marked *

More in Lucky Job