Lucky Job

ಕೇಂದ್ರ ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್ ನಲ್ಲಿ ಕೆಲಸ ಖಾಲಿ ಇದೆ- ಅರ್ಜಿ ಸಲ್ಲಿಸಿ, ಗೌರ್ನಮೆಂಟ್ ಕೆಲಸ ನಿಮ್ಮದಾಗಿಸಿಕೊಳ್ಳಿ

0

ಬೆಂಗಳೂರು- ಕೇಂದ್ರ ಸರ್ಕಾರ ಸ್ವಾಮ್ಯದ ಕೆನರಾ ಬ್ಯಾಂಕ್ ನಲ್ಲಿ ಜೂನಿಯರ್ ಆಫೀಸರ್ಸ್ ಹುದ್ದೆಗೆ ನೇಮಕಾತಿ ಮಾಡಿಕೊಳ್ಳುತ್ತಿದೆ. ಈ ಸಂಬಂಧ ಕೆನರಾ ಬ್ಯಾಂಕ್ ಅರ್ಜಿ ಆಹ್ವಾನಿಸಿದೆ.
ಒಟ್ಟು 5 ಜೂನಿಯರ್ ಆಫೀಸರ್ಸ್ ಹುದ್ದೆಗಳಿದ್ದು, ಜುಲೈ 31, 2021 ಕಡೆಯ ದಿನಾಂಕವಾಗಿದೆ. ಆಯ್ಕೆಯಾದ ಅಭ್ಯರ್ಥಿ ಭಾರತ ದೇಶದ ಯಾವುದೇ ಜಾಗದಲ್ಲಿ ಕೆಲಸ ಮಾಡಲು ಸಿದ್ಧನಿರಬೇಕು. ಆಯ್ಕೆಯಾದ ಅಭ್ಯರ್ಥಿಗೆ ಆರಂಭದಲ್ಲಿ 19.500 ವೇತನವಿರುತ್ತದೆ.
ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಬೇಕು. ಕನಿಷ್ಠ 21 ವರ್ಷ, ಗರಿಷ್ಠ 30 ವರ್ಷದ ವಯೋಮಿತಿಯವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವವರು ಡಿಡಿ ರೂಪದಲ್ಲಿ 250 ಶುಲ್ಕ ಪಾವತಿ ಮಾಡಬೇಕು. ಜೊತೆಗೆ ದೃಢೀಕರಿಸಿದ ದಾಖಲಾತಿಗಳೊಂದಿಗೆ ರಿಜಿಸ್ಟರ್ ಪೋಸ್ಟ್ ಅಥವಾ ಸ್ಪೀಡ್ ಪೋಸ್ಟ್ ನಲ್ಲಿ ಅರ್ಜಿ ಕಳುಹಿಸಬೇಕು.
ಅರ್ಜಿ ಸಲ್ಲಿಸುವವರು

The Executive Vice President
Canbank Factors Limited
No 67/1, Kanakapura Main Road
Basavanagudi, Near Lalbagh West Gate
BANGALORE- 560005
ಹೆಚ್ಚಿನ ಮಾಹಿತಿಗಾಗಿ www.Canarabank.com ಸಂಪರ್ಕಿಸಿ

siteadmin

ಕರ್ನಾಟಕದಲ್ಲಿ ಈ ದಿನದ ಚಿನ್ನ, ಬೆಳ್ಳಿ ಧಾರಣೆ- ಬೆಳ್ಳಿ ಬೆಲೆ 400 ರೂಪಾಯಿ ಇಳಿಕೆ

Previous article

ಕಲ್ಯಾಣ ಮಂಟಪಕ್ಕೆ ಹೋಗಲು ಬಾನೆಟ್ ಮೇಲೆ ಕುಳಿತು ವಧು ಮೆರವಣಿಗೆ- ದಂಡ ವಿಧಿಸಿದರು ಪೊಲೀಸರು ವಧುವಿಗೆ

Next article

You may also like

Comments

Leave a reply

Your email address will not be published. Required fields are marked *

More in Lucky Job