Lucky Job

ಲಕ್ಕಿ ಜಾಬ್- ಒಎನ್ ಜಿಸಿಯಲ್ಲಿ 871 ಹುದ್ದೆಗೆ ಅರ್ಜಿ ಆಹ್ವಾನ- ಕೈ ತುಂಬ ಸಂಬಳ- ಇಂದಿನಿಂದ ಅರ್ಜಿ ಸಲ್ಲಿಕೆಗೆ ಅವಕಾಶ

0

ಒಎನ್ ಜಿಸಿ(ONGC) ಅರ್ಥಾತ್ ತೈಲ ಮತ್ತು ನೈಸರ್ಗಿಕ ಅನಿಲ ನಿಗಮವು 871 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

ಎಇಇ ಹಾಗೂ ಪ್ರೋಗ್ರಾಮಿಂಗ್ ಆಫೀಸರ್ ಹುದ್ದೆಗಳಾಗಿದ್ದು, ಅಖಿಲ ಭಾರತ ಮಟ್ಟದಲ್ಲಿ ನೇಮಕಾತಿ ನಡೆಯಲಿದೆ. ಅರ್ಹ ಪದವೀಧರರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಆದರೆ ಬಿಇ ಮತ್ತು ಸ್ನಾತಕೋತ್ತರ ಪದವಿ ಪಡೆದವರಿಗೆ ಮಾತ್ರ ಈ ಹುದ್ದೆಗಳಿಗೆ ಅವಕಾಶವಿದೆ.

ವೇತನ 60,000 ರೂಪಾಯಿಯಿಂದ 18,00,000 ರೂಪಾಯಿವರಿಗೆ ನಿಗಧಿ ಮಾಡಲಾಗಿದೆ.

ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಹಾಗೂ ವಿಕಲೇಚೇತನರಿಗೆ ಮೀಸಲಾತಿ ಇದ್ದು, ಅರ್ಜಿ ಶುಲ್ಕದಲ್ಲಿ ವಿನಾಯಿತಿ ಇರಲಿದೆ.

ಮೆರಿಟ್ ಪಟ್ಟಿ, ಗೇಟ್-2022 ಅಂಕಗಳು ಹಾಗೂ ಸಂದರ್ಶನದ ಮಾನದಂಡವಿರುತ್ತದೆ.

ಆಸಕ್ತರು ಇಂದಿನಿಂದ ಅಂದರೆ ಸೆಪ್ಟಂಬರ್ 22 ರಿಂದ ಅರ್ಜಿ ಸಲ್ಲಿಸಬಹುದಾಗಿದ್ದು, ಅಕ್ಟೋಬರ್ 12 ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕವಾಗಿದೆ.

ಈ ಸಂಬಂಧ ಅಧಿಕೃತ ವೆಬ್ ಸೈಟ್ ongcindia.com ಕ್ಲಿಕ್ ಮಾಡಿ ಹೆಚ್ಚಿನ ಮಾಹಿತಿ ಪಡೆಯಿರಿ.

siteadmin

RSS ಮುಖ್ಯಸ್ಥ ಮೋಹನ್ ಭಾಗವತ್ ಹಾಗೂ ಮುಸ್ಲಿಂ ಧರ್ಮ ಗುರುಗಳ ‘ಸೀಕ್ರೇಟ್ ಮೀಟಿಂಗ್’- ಮಸೀದಿಯಲ್ಲಿ ನಡೆದ ಸಭೆ

Previous article

ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು ದೇವಾಲಯದಲ್ಲಿ ಶರ್ಟ್, ಬನಿಯನ್ ತೆಗೆಯಲು ಆಕ್ಷೇಪಿಸಿ ಸರ್ಕಾರಕ್ಕೆ ದೂರು- ಇದರಿಂದ ಚರ್ಮರೋಗ ಬರುತ್ತದೆಯಂತೆ

Next article

You may also like

Comments

Comments are closed.

More in Lucky Job