Cricket

ಐಪಿಎಲ್ ಪ್ರಸಾರ ಹಕ್ಕಿನಿಂದ ಬಿಸಿಸಿಐಗೆ ಬಂದ ಕೋಟಿ ಕೋಟಿ ಹಣವೆಷ್ಟು ಗೊತ್ತಾ- ಮಾಜಿ ಕ್ರಿಕೆಟರ್ ಹಾಗೂ ಅಂಪೈರ್ ಗಳಿಗೆ ಬಂಪರ್ ಕೊಡುಗೆ

0

ಮುಂಬೈ- ಬಿಸಿಸಿಐ ಅರ್ಥಾತ್ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಐಪಿಎಲ್ ನಿಂದ ಹಣದ ತೈಲಿ ಹರಿದು ಬರುತ್ತಿದೆ. ಇದೇ ಖುಷಿಯಲ್ಲಿ ಮಾಜಿ ಕ್ರಿಕೆಟಿಗರು ಹಾಗೂ ಅಂಪೈರ್ ಗಳಿಗೆ ಬಿಸಿಸಿಐ ಬಂಪರ್ ಗಿಫ್ಟ್ ಕೊಟ್ಟಿದೆ.

2023 ರಿಂದ 2027 ರ ತನಕ ಒಟ್ಟು 410 ಮ್ಯಾಚ್ ಗಳ ಪ್ರಸಾರದ ಹಕ್ಕನ್ನು ಬಿಸಿಸಿಐ 44,075 ಕೋಟಿ ರೂಪಾಯಿಗೆ ಮಾರಾಟ ಮಾಡಿದೆ. ಇಷ್ಟೊಂದು ಪ್ರಮಾಣದ ಹಣ ಬಂದ ಸಂತಸದಲ್ಲಿ ಬಿಸಿಸಿಐ ಮಾಜಿ ಕ್ರಿಕೆಟಿಗರ ಪಿಂಚಣಿ ಹೆಚ್ಚಿಸಿದೆ. ಅಂಪೈರ್ ಗಳಿಗೆ ಕೂಡ ಬಂಪರ್ ಕೊಡುಗೆ ನೀಡಿದೆ. ಇದರಿಂದ 900 ಸಿಬ್ಬಂದಿಗಳು ಇದರ ಲಾಭ ಪಡೆಯಲಿದ್ದಾರೆ. ಈ ವಿಚಾರವನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಟ್ವಿಟರ್ ಮೂಲಕ ತಿಳಿಸಿದ್ದಾರೆ.

ಟೆಸ್ಟ್ ತಂಡದ ಮಾಜಿ ಆಟಗಾರರು ಈ ತನಕ ಪಡೆಯುತ್ತಿದ್ದ 37,500 ರೂಪಾಯಿ ಪೆನ್ಷನ್ ನ್ನು ಈಗ 60,000 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಹಾಗಾಯೆ 50,000 ರೂಪಾಯಿ ಪಡೆಯುತ್ತಿದ್ದವರು ಇನ್ನು ಮುಂದೆ 70,000 ರೂಪಾಯಿ ಪಡೆಯಲಿದ್ದಾರೆ.

ಪ್ರಥಮ ದರ್ಜೆ ಪಂದ್ಯವನ್ನಾಡಿದ ಮಾಜಿ ಆಟಗಾರರು 15,000 ರೂಪಾಯಿಯಿಂದ 30,000 ರೂಪಾಯಿ ಪಡೆಯಲಿದ್ದಾರೆ.

ಮಹಿಳಾ ಕ್ರಿಕೆಟ್ ಆಟಗಾರರು ಪಡೆಯುತ್ತಿದ್ದ ಪಿಂಚಣಿಯನ್ನು 30,000 ರೂಪಾಯಿಯಿಂದ 52,500 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ.

siteadmin

“ಈ ಹೆಂಡತಿ ಏಳೇಳು ಜನ್ಮವಿರಲಿ, ಏಳು ಸೆಕೆಂಡ್ ಕೂಡ ಬೇಡ”- ಅರಳಿ ಮರ ಸುತ್ತಿ ಪೂಜೆ ಸಲ್ಲಿಸಿದ ಪತ್ನಿಯಿಂದ ಬೇಸತ್ತ ಪುರುಷರು

Previous article

9 ತಿಂಗಳ ಮಗುವಿಗೆ ನೇಣು ಬಿಗಿದು ತಾನೂ ಆತ್ಮಹತ್ಯೆಗೆ ಶರಣಾದ ತಾಯಿ- ಈಕೆ ರೋಸಿ ಹೋಗಲು ಇದು ಕಾರಣವಂತೆ

Next article

You may also like

Comments

Comments are closed.

More in Cricket