Cricket

ಸ್ಟೇಡಿಯಂನಲ್ಲೆ ಲವ್ ಪ್ರಪೋಸ್ ಮಾಡಿದ್ದ ದೀಪಕ್ ಚಹರ್- ಕೈ ಹಿಡಿದವಳೊಡನೆ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ

0

ಐಪಿಎಲ್ ಕ್ರಿಕೆಟ್ ವೇಳೆ ಸ್ಟೇಡಿಯಂನಲ್ಲೆ ಗರ್ಲ್ ಫ್ರೆಂಡ್ ಗೆ ಪ್ರಪೋಸ್ ಮಾಡಿದ್ದ ಚೆನ್ನೈ ತಂಡದ ದೀಪಕ್ ಚಹರ್ ಅವರು ಬಹುಕಾಲದ ಗೆಳತಿ ಜಯಾ ಭಾರಧ್ವಾಜ್ ಜೊತೆ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

2021 ರ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಆಟವಾಡಿದ್ದ ದೀಪಕ್ ಚಹರ್ ಅವರನ್ನು 14 ಕೋಟಿ ರೂಪಾಯಿಗೆ ಚೆನ್ನೈ ತಂಡ ಖರೀದಿ ಮಾಡಿತ್ತು.

ದುಬೈ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದ ವೇಳೆ ದೀಪಕ್ ಚಹರ್ ಅವರು ಜಯಾಗೆ ಸ್ಟೇಡಿಯಂನಲ್ಲೆ ಲವ್ ಪ್ರಪೋಸ್ ಮಾಡಿದ್ದರು.

ಆದರೆ ಈಗ ದೀಪಕ್ ಅವರು ಉತ್ತರ ಪ್ರದೇಶದ ಆಗ್ರಾದಲ್ಲಿ ಇಂದು ಜಯಾ ಜೊತೆ ಅದ್ದೂರಿಯಾಗಿ ಮದುವೆಯಾಗಿದ್ದಾರೆ. ತಾನು ಇಷ್ಟಪಟ್ಟ ಗೆಳತಿಯ ಜೊತೆಗೆ ಸಪ್ತಪದಿ ತುಳಿದಿದ್ದಾರೆ.

ಚಹರ್‌ ಈ ತನಕ ಆಡಿರುವ 63 ಐಪಿಎಲ್‌ ಪಂದ್ಯಗಳಿಂದ 29.19ರ ಸರಾಸರಿಯಲ್ಲಿ 59 ವಿಕೆಟ್​ ಕಬಳಿಸಿದ್ದಾರೆ.

2019ರ ಐಪಿಎಲ್‌ ಟೂರ್ನಿಯಲ್ಲಿ ದೀಪಕ್‌ 17 ಪಂದ್ಯಗಳಿಂದ 22 ವಿಕೆಟ್​, 2021ರ ಟೂರ್ನಿಯಲ್ಲಿ 15 ಪಂದ್ಯಗಳಿಂದ 14 ವಿಕೆಟ್​ ಪಡೆದುಕೊಂಡಿದ್ದರು.

ಟೀಂ ಇಂಡಿಯಾ ಪರ 7 ಏಕದಿನ ಪಂದ್ಯ ಹಾಗೂ 20 ಟಿ-20 ಪಂದ್ಯಗಳನ್ನಾಡಿರುವ ದೀಪಕ್​ ಕ್ರಮವಾಗಿ 10 ಹಾಗೂ 26 ವಿ

siteadmin

ವಿದ್ಯಾರ್ಥಿನಿಗೆ ಹಾಸ್ಟೆಲ್ ವಾರ್ಡನ್ ‘ಲವ್ ದೋಖಾ’- ಮದುವೆ ಆಗುವುದಾಗಿ ನಂಬಿಸಿ ಮೋಸ- ಪತಂಗಕ್ಕೆ ಬೇಡ ಬೆಂಕಿ ಸಂಗ

Previous article

ಆರ್ ಎಸ್ಎಸ್ ಕಂಡರೆ ನನಗೆ ಭಯ- ಸಿದ್ದರಾಮಯ್ಯ… ಸಿದ್ದು ಸುತ್ತ ಉಗ್ರರೆ ತುಂಬಿದ್ದಾರೆ- ಟಗರು ಟಾಂಗ್ ಗೆ ಸಿ.ಟಿ.ರವಿ ಡಿಚ್ಚಿ

Next article

You may also like

Comments

Comments are closed.

More in Cricket