Cricket

ಐಪಿಎಲ್ ಮೆಗಾ ಹರಾಜಿನಲ್ಲಿ ದಾಖಲೆ ಬರೆದ ಶ್ರೇಯರ್ ಅಯ್ಯರ್- 600 ಆಟಗಾರರಲ್ಲಿ 380 ಭಾರತೀಯರೆ ಆಗಿದ್ದಾರೆ

0

ಬೆಂಗಳೂರು- ಐಪಿಎಲ್ ಅರ್ಥಾತ್ ಇಂಡಿಯನ್ ಪ್ರೀಮಿಯರ್ ಲೀಗ್ ನ 2022 ಮೆಗಾ ಹರಾಜು ಇಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆಯಿತು.

2018 ರ  ನಂತರ ಇದೇ ಮೊದಲ ಬಾರಿಗೆ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ನಡೆಯುತ್ತಿದೆ. 600 ಆಟಗಾರರು ಹರಾಜು ಪ್ರಕ್ರಿಯೆಯಲ್ಲಿದ್ದಾರೆ. ಇವರಲ್ಲಿ 380 ಭಾರತೀಯ ಆಟಗಾರರಾಗಿದ್ದರೆ, 220 ವಿದೇಶಿ ಆಟಗಾರರಿದ್ದಾರೆ.

ಕೋಲ್ಕತ್ತಾ ನೈಟ್ ರೈಡರ್ಸ್ ಲೀಡರ್ ಶಿಪ್ ಹುಟುಕಾಟದಲ್ಲಿತ್ತು. ಈ ವೇಳೆ ಶ್ರೇಯಸ್ ಅಯ್ಯರ್ ಕೋಲ್ಕತ್ತಾ ನೈಟ್ ರೈಡರ್ಸ್ ಸ್ಥಾನ ತುಂಬಿದ್ದು, 12,5 ಕೋಟಿ ರೂಪಾಯಿಗೆ ಖರೀದಿ ಮಾಡಿದೆ.

ಅದೇ ರೀತಿ ಟೀಂ ಇಂಡಿಯಾದ ಮತ್ತೊಬ್ಬ ಭರವಸೆಯ ಆಟಗಾರನಾಗಿರುವ ಶಿಖರ್ ಧವನ್ ಅವರನ್ನು ಪಂಜಾಬ್ ಕಿಂಗ್ಸ್ 8.25 ಕೋಟಿ ರೂಪಾಯಿಗೆ ಖರೀದಿ ಮಾಡಿದೆ. ಕಳೆದ ಬಾರಿ ಶಿಖರ್ ದವನ್ 5.20 ಕೋಟಿಗೆ ಖರೀದಿಯಾಗಿದ್ದರು. ಆದರೆ ಈ ಬಾರಿ ಶಿಖರ್ ತಮ್ಮ ಮೌಲ್ಯ ಹೆಚ್ಚಿಸಿಕೊಂಡಿದ್ದಾರೆ. ಇವರ ಜೊತೆಗೆ ಇದೇ ಪಂಜಾಬ್ ಕಿಂಗ್ಸ್ ಕಗಿಸೊ ರಬಾಡಾ ಅವರನ್ನು 9.25 ಕೋಟಿಗೆ ಹರಾಜಿನಲ್ಲಿ ಖರೀದಿ ಮಾಡಿದೆ.

ಕೊಲ್ಕತ್ತಾ ನೈಟ್ ರೈಡರ್ಸ್ ಕಳೆದ ಬಾರಿ ಪ್ಯಾಟ್ ಕಮಿನ್ಸ್ ಅವರನ್ನು 15.50 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು. ಆದರೆ ಹರಾಜಿನಲ್ಲೆ ಈ ಬಾರಿ 7.25 ಕೋಟಿ ರೂಪಾಯಿಗೆ ಖರೀದಿಸಿದೆ.

ಕನ್ನಡಿಗ ದೇವದತ್ ಪಡಿಕ್ಕಲ್ ಅವರನ್ನು ರಾಜಸ್ಥಾನ್ ರಾಯಲ್ಸ್ ತಂಡ 7.75 ಕೋಟಿಗೆ ಖರೀದಿ ಮಾಡಿದೆ. ವೆಸ್ಟ್ ಇಂಡೀಸ್ ನ ಆಲ್ ರೌಂಡರ್ ಜೇಸನ್ ಹೋಲ್ಡರ್ 8.75 ಕೋಟಿಗೆ ಲಖನೌ ಸೂಪರ್ ಜೈಂಟ್ಸ್ ಖರೀದಿಸಿದೆ.

8  ಕೋಟಿ ರೂಪಾಯಿಗೆ ನಿತೀಶ್ ರಾಣಾ ಖರೀದಿಯಾದರೆ, ಡ್ವೇನ್ ಬ್ರಾವೋ 4.4 ಕೋಟಿಗೆ ಕೆಕೆಆರ್ ಖರೀದಿಸಿದೆ.

ಆಸ್ಟೇಲಿಯಾದ ಡೇವಿಡ್ ವಾರ್ನರ್ 6.25 ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೇರ್ಪಡೆಯಾದರೆ,

 

siteadmin

ವಿದೇಶದಲ್ಲಿ ವ್ಯಾಸಂಗಕ್ಕೆ ಒಪ್ಪದ ತಂದೆ- ತಾಯಿ ಜೊತೆ ಸೇರಿ ಮಗನಿಂದ ತಂದೆ ಕೊಲೆಗೆ ಸ್ಕೆಚ್- ಮುಂದೇನಾಯ್ತು…!

Previous article

ಆರತಕ್ಷತೆಯಲ್ಲೆ ಕುಸಿದು ಬಿದ್ದ ವಧು- ಮದುವೆಯಾಗಿ ಗಂಡನ ಮನೆ ಸೇರ ಬೇಕಾದವಳು ಸ್ಮಶಾನ ಸೇರಿದಳು

Next article

You may also like

Comments

Comments are closed.

More in Cricket