Cricket

ಬೆಂಗಳೂರಿನಲ್ಲಿ ನಡೆಯುತ್ತಿರುವ ಐಪಿಎಲ್ ಮೆಗಾ ಹರಾಜಿನಲ್ಲಿ ದರ್ಘಟನೆ- ಕುಸಿದು ಬಿದ್ದ ಹಗ್ ಎಡ್ಮಿರ್ಡ್ಸ್- ಕೆಲ ಕ್ಷಣ ದಿಗ್ಬ್ರಾಂತ

0

ಬೆಂಗಳೂರು- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಐಪಿಎಲ್ ಮೆಗಾ ಹರಾಜು ನಡೆಯುವ ವೇಳೆ ದುರ್ಘಟನೆಯೊಂದು ನಡೆದಿದೆ.

ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಇಂದು ಬೆಳಿಗ್ಗೆ ಆರಂಭವಾದ ಹರಾಜು ಪ್ರಕ್ರಿಯೆ ಕಾವೇರಿತ್ತು. ಹಣಕ್ಕೆ ಹಣ ಸೇರಿಸಿ ಹರಾಜು ಕೂಗುತ್ತಿದ್ದರು.

ಈ ವೇಳೆ ಕಾರ್ಯಕ್ರಮದ ನಿರೂಪಕ ಹಗ್ ಎಡ್ಮಿರ್ಡ್ಸ್ ದಿಢೀರ್ ಕುಸಿದು ಬಿದ್ದರು. ಅವರನ್ನು ಎಚ್ಚರ ಮಾಡುವ ಪ್ರಯತ್ನ ಮಾಡಲಾಯಿತ್ತಾದರೂ ಅವರು ಪ್ರಜ್ಞೆ ತಪ್ಪಿದ್ದರು.

ಕೂಡಲೇ ಅವರನ್ನು ಸನಿಹದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ಹಿನ್ನೆಲೆ ಕೆಲ ಕಾಲ ಹರಾಜು ಪ್ರಕ್ರಿಯೆ ಸ್ಥಗಿತವಾಗಿತ್ತು. 

ಹಗ್ ಎಡ್ಮಿಡ್ ಅವರಿಗೆ ಏನಾಗಿದೆ, ಕುಸಿದು ಬೀಳಲು ಕಾರಣವೇನು ಎಂಬಿವೆ ಹಲವು ಮಾಹಿತಿಗಳು ಇನ್ನು ತಿಳಿದು ಬಂದಿಲ್ಲ 

siteadmin

‘ಗೂಗಲ್ ಆಂಟಿ’ ನಂಬಿ ಪ್ರಾಣ ಕಳೆದುಕೊಂಡ ಮೂವರು ಮಹಿಳೆಯರು- ಮದುವೆಗೆ ಹೋಗುತ್ತಿದ್ದವರು ಮಸಣ ಸೇರಿದರು

Previous article

ವಿದೇಶದಲ್ಲಿ ವ್ಯಾಸಂಗಕ್ಕೆ ಒಪ್ಪದ ತಂದೆ- ತಾಯಿ ಜೊತೆ ಸೇರಿ ಮಗನಿಂದ ತಂದೆ ಕೊಲೆಗೆ ಸ್ಕೆಚ್- ಮುಂದೇನಾಯ್ತು…!

Next article

You may also like

Comments

Comments are closed.

More in Cricket