filmy breaking

ರಾ…ರಾ…ರಕ್ಕಮ್ಮ ಕೊಟ್ಟಳು ‘ಶಾಕಿಂಗ್’ ಉತ್ತರ- ಅದನ್ನು ಕೇಳುತ್ತಿದ್ರೆ ಇಡಿ ಅಧಿಕಾರಿಗಳಿಗೆ ಬಾರೀ ಕಾತರ

0
Jacqueline-fernandez

ಫಿಲ್ಮಿ ಡೆಸ್ಕ್- ಬಾಲಿವುಡ್ ಮಾತ್ರವಲ್ಲದೆ ಸ್ಯಾಂಡಲ್ ವುಡ್ ನಲ್ಲಿ ಕೂಡ ರಾ….ರಾ.‌‌…ರಕ್ಕಮ್ಮ ಅಂತ ಫೇಮಸ್ ಆಗಿರುವ ಜಾಕ್ವೆಲಿನ್ ಫರ್ನಾಂಡೀಸ್ ಇಡಿ ಅರ್ಥಾತ್‌ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿಚಾರಣೆ ವೇಳೆ ಸ್ಪೋಟಕ ಹೇಳಿಕೆ ನೀಡಿದ್ದಾಳೆ.

ಜಾಕ್ವೆಲಿನ್ ಫರ್ನಾಂಡೀಸ್ ಅವರು ಸೆಪ್ಟೆಂಬರ್ 14 ರಂದು ಇಡಿ ಮುಂದೆ ವಿಚಾರಣೆಗೆ ಹಾಜರಾಗಿದ್ದರು.

ಬೆಂಗಳೂರು ಮೂಲದ ಸುಕೇಶ್ ಚಂದ್ರಶೇಖರ್ ಲವ್ ಬಲೆಗೆ ಬಿದ್ದ ಜಾಕ್ವೆಲಿನ್ ಫರ್ನಾಂಡೀಸ್ ಆತ ನೀಡುತ್ತಿದ್ದ ಗಿಫ್ಟ್ ಗೆ ಫಿದಾ ಅಗಿದ್ದಳು. ಸುಕೇಶ್ ಚಂದ್ರಶೇಖರ್ ನೀಡುತ್ತಿದ್ದ ದುಬಾರಿ ಬೆಲೆಯ ಉಡುಗೊರೆಗೆ ಮಾರುಹೋದ ಜಾಕ್ವೆಲಿನ್ ಫರ್ನಾಂಡೀಸ್ ಆತನನ್ನೆ ಮದುವೆ ಆಗಲು ನಿರ್ಧಾರ ಮಾಡಿದ್ದಳಂತೆ.

ಈ ವಿಚಾರವನ್ನು ಸ್ವತಃ ಜಾಕ್ವೆಲಿನ್ ಫರ್ನಾಂಡೀಸ್ ಅವರು ಇಡಿ ಅಧಿಕಾರಿಗಳಿಗೆ ಹೇಳಿದ್ದಾಳೆ.

ಇದನ್ನು ಇಡಿ ಅಧಿಕಾರಿಯೊಬ್ಬರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ಜಾಕ್ವೆಲಿನ್ ಫರ್ನಾಂಡೀಸ್ ಮಾತ್ರವಲ್ಲದೆ ನೋರಾ ಫತೇಹಿ ಕೂಡ ಸುಕೇಶ್ ಚಂದ್ರಶೇಖರ್ ಗೆ ಮಾರು ಹೋಗಿದ್ದಳು.

ಆದರೆ ಸುಕೇಶ್ ಬಗ್ಗೆ ಅನುಮಾನ ಬಂದ ತರುವಾಯ ನೋರಾ ಫತೇಹಿ ಸುಕೇಶ್ ನಿಂದ ಅಂತರ ಕಾಯ್ದುಕೊಂಡು ದೂರವಾದಳು.

ಆದರೆ ಜಾಕ್ವೆಲಿನ್ ಫರ್ನಾಂಡೀಸ್ ಮಾತ್ರ ಸುಕೇಶ್ ಜೊತೆ ಲವ್ ಮ್ಯಾಟರ್ ಮುಂದುವರೆಸಿದಳು.

ಸುಕೇಶ್ ಚಂದ್ರಶೇಖರ್
ಗಿಫ್ಟ್ ಗೆ ಮಾರುಹೋದ ಜಾಕ್ವೆಲಿನ್ ಫರ್ನಾಂಡೀಸ್ ಈಗ ಇಡಿಗೆ ತಗಲಾಕಿಕೊಂಡಿದ್ದಾಳೆ.

siteadmin

ಮೈಸೂರಿನ ಹೆಚ್.ಡಿ.ಕೋಟೆಯ ಗ್ರಾಮಕ್ಕೆ ನುಗ್ಗಿದ ಒಂಟಿ‌ ಸಲಗದ ರಂಪಾಟ- ಅನೆ ಓಡಿಸಲು ಕಲ್ಲು ತೂರಾಟ- ವಿಡಿಯೋ ನೋಡಿ

Previous article

ಎಫ್ ಡಿಎ ಪರೀಕ್ಷೆ ಹಗರಣ- ಮೈಸೂರಿನ ಟ್ರಾಫಿಕ್ ಪಿಎಸ್ಐ ಅಶ್ವಿನಿ ಸಸ್ಪೆಂಡ್- ಪೋಲಿಸ್ ಆಯುಕ್ತರ ಆದೇಶ

Next article

You may also like

Comments

Comments are closed.