SportsTop News

IPL ಕ್ರಿಕೆಟ್ ಆರಂಭಕ್ಕೆ ಕ್ಷಣಗಣನೆ- ಬೆಂಗಳೂರಿನ ರಾಯಲ್ ಚಾಲೆಂಜರ್ಸ್ ಮತ್ತು ಮುಂಬೈ ಇಂಡಿಯನ್ಸ್ ಮುಖಾಮುಖಿ- ದಾಖಲೆ ಬರೆಯಲು ಕೊಹ್ಲಿ ರೆಡಿ

0

ಕ್ರಿಕೆಟ್ ಪ್ರೇಮಿಗಳ ನಿದ್ದೆಗೆಡಿಸುವ ಐಪಿಎಲ್ ಕ್ರಿಕೆಟ್ ಸರಣಿಗೆ ಕ್ಷಣಗಣನೆ ಆರಂಭವಾಗಿದೆ. ಮೊದಲ ಪಂದ್ಯ ನಾಳೆ ಅಂದರೆ ಏಪ್ರಿಲ್ 9 ರಂದು ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ. ನಾಳೆ ರಾತ್ರಿ 7 ಗಂಟೆ 30 ಗಂಟೆಗೆ ಆರಂಭವಾಗುವ ಐಪಿಎಲ್ ಕ್ರಿಕೆಟ್ ನ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಬೆಂಗಳೂರಿನ ರಾಯಲ್ ಚಾಲೆಂಜರ್ಸ್ ಮುಖಾಮುಖಿಯಾಗಲಿದೆ.
ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಬೆಂಗಳೂರಿನ ರಾಯಲ್ ಚಾಲೆಂಜರ್ಸ್ ತಂಡವನ್ನು ಮುನ್ನಡೆಸಿದರೆ, ರೋಹಿತ್ ಶರ್ಮ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.
ಈ ಬಾರಿಯಾದರೂ ನಮ್ಮ ಬೆಂಗಳೂರಿನ ರಾಯಲ್ ಚಾರೆಂಜರ್ಸ್ ಕಪ್ ಗೆಲ್ಲಲಿದೆಯೇ ಎಂದು ಕಾದು ನೋಡಬೇಕಿದೆ.
ಈ ತನಕ ನಡೆದಿರುವ 13 ಖುತುಗಳಲ್ಲಿಯೂ ವಿರಾಟ್ ಕೊಹ್ಲಿ ಬೆಂಗಳೂರಿನ ರಾಯಲ್ ಚಾರೆಂಜರ್ಸ್ ತಂಡದ ಒಡಲಲ್ಲಿಯೇ ಆಡುತ್ತಿದ್ದಾರೆ.
ಒಂದೇ ಖುತುವಿನಲ್ಲಿ 900 ರನ್ ಗಳಿಸಿರುವ ವಿರಾಟ್ ಕೊಹ್ಲಿ, 2016 ರಂದು ನಡೆದಿರುವ ಪಂದ್ಯದಲ್ಲಿ ಬರೋಬರಿ 927 ರನ್ ಬಾರಿಸಿದ್ದರು. ಸದ್ಯ ವಿರಾಟ್ ಕೊಹ್ಲಿ 5878 ರನ್ ಗಳಿಸಿದ್ದಾರೆ. ಇನ್ನು ಕೇವಲ 192 ರನ್ ಬಾಸಿದ್ರೆ ವಿರಾಟ್ ಕೊಹ್ಲಿ ಆರು ಸಾವಿರ ರನ್ ಗಳಿಸಿ ಖ್ಯಾತ ಹೊಂದುತ್ತಾರೆ.
ಐಪಿಎಲ್ ಕ್ರಿಟೆಕ್ ನಲ್ಲಿ ಕ್ರಿಸ್ ಗೇಲ್ 6 ಶತಕ ಸಿಡಿಸಿದರೆ,  ವಿರಾಟ್ ಕೊಹ್ಲಿ 5 ಶತಕ ಬಾರಿಸಿದ್ದಾರೆ. ಈ ಬಾರಿಯ ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿ ಆರು ಶತಕ ಬಾರಿಸಿ ಕ್ರಿಸ್ ಗೇಲ್ಗ್ರೇ ದಾಖಲೆ ಮುರಿಯುತ್ತಾರಾ ಅಂತ ಕಾದು ನೋಡಬೇಕಿದೆ.

ಒಟ್ಟಾರೆ 14 ಖುತವಿನ ಐಪಿಎಲ್ ಕ್ರಿಕೆಟ್ ಪಂದ್ಯನೋಡಲು ಕ್ರಿಕೆಟ್ ಪ್ರೇಮಿಗಳು ಕಾಯುತ್ತಾ ಕುಳಿತ್ತಿದ್ದಾರೆ. ಈ ಮೂಲಕ ಐಪಿಎಲ್ ಕ್ರಿಕೆಟ್ ಪ್ರೇಮಿಗಳ ಸಂತಸವನ್ನು ಇಮ್ಮಡಿಗೊಳಿಸಿದೆ. 

 

 

 

 

siteadmin

ಬೆಂಗಳೂರಿನಲ್ಲಿ ರಣ ಕೇಕೆ ಹಾಕುತ್ತಿರುವ ಕೊರೊನಾ- ಕಂಟ್ರೋಲ್ ಮಾಡಲು ಹೆಣಗಾಡುತ್ತಿರುವ ಸರ್ಕಾರ- ಇವತ್ತು ಸತ್ತರ ಸಂಖ್ಯೆ ಕೇಳಿದ್ರೆ ಶಾಕ್ ಆಗ್ತೀರಾ

Previous article

ಬಿಗ್ ಬಾಸ್ ಖ್ಯಾತಿಯ ಚೈತ್ರ ಕೊಟೂರ್ ಆತ್ಮಹತ್ಯೆಗೆ ಯತ್ನ- ಪತಿಗಾಗಿ ಚೈತ್ರ ಹಂಬಲ- ಇತ್ತ ತಿರುಗಿ ನೋಡದ ನಾಗಾರ್ಜುನ್

Next article

You may also like

Comments

Leave a reply

Your email address will not be published. Required fields are marked *

More in Sports