Health Tips

ಅಪ್ಪು ನಿಧನದಿಂದ ಪಾಠ ಕಲಿತ ಕರ್ನಾಟಕ ಮತ್ತು ಕೇರಳ ಸರ್ಕಾರ- ಇನ್ನು ಮುಂದೆ ಜಿಮ್ ಗಳಲ್ಲಿ ಬೇಕಾಬಿಟ್ಟಿ ವರ್ಕೌಟ್ ಮಾಡುವಂತಿಲ್ಲ

0

ಬೆಂಗಳೂರು- ಅತಿಯಾದ ಜಿಮ್ ವರ್ಕೌಟ್ ಮಾಡಿ ಪುನೀತ್ ರಾಜ್ ಕುಮಾರ್ ನಿಧನರಾಗಿದ್ದಾರೆ ಎಂಬ ಚರ್ಚೆಯಿಂದ ಕರ್ನಾಟಕ ಮತ್ತು ಕೇರಳ ಸರ್ಕಾರ ಪಾಠ ಕಲಿತಿದೆ. ಜಿಮ್ ಗಳಲ್ಲಿ ವರ್ಕೌಟ್ ಮಾಡುವ ಕುರಿತಂತೆ ಈಗಾಗಲೇ ಕೇರಳ ಸರ್ಕಾರ ಎಇಡಿ ಅಂದರೆ ಆಟೋಮೇಟೆಡ್ ಎಕ್ಸ್ಟರ್ನಲ್ ಟಿಫಿಬ್ರಿಲೇಟರ್ ಗಳನ್ನು ಬಳಕೆಗೆ ಸಿದ್ಧವಾಗಿಟ್ಟುಕೊಳ್ಳುವ ಅವಶ್ಯಕತೆಯನ್ನು ಎತ್ತಿ ಹಿಡಿದಿದೆ.

ಇದೇ ವಿಚಾರವಾಗಿ ಇಂದು ಪ್ರತಿಕ್ರಿಯೆ ನೀಡಿದ ಕರ್ನಾಟಕದ ಆರೋಗ್ಯ ಸಚಿವ ಡಾ.ಸುಧಾಕರ್ ಅವರು, ಜಿಮ್ ಗಳಲ್ಲಿ ವರ್ಕೌಟ್ ಮಾಡುವ ಕುರಿತಂತೆ ಹೃದಯ ತಜ್ಞರ ವರದಿ ಕೇಳಲಾಗಿದೆ. ವರದಿ ಬಂದ ನಂತರ ಸಾಧಕ ಬಾಧಕ ಕುರಿತಂತೆ ಚರ್ಚಿಸಿ ಮುಂದಿನ ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಕೇರಳದಲ್ಲಿ ಎಇಡಿ ಅಳವಡಿಸುವ ಕುರಿತಂತೆ ಕ್ರೀಡಾ ಸಚಿವ ವಿ.ಅಬ್ದುರೆಹಮಾನ್ ಜೊತೆ ಚರ್ಚೆ ಮಾಡುವುದಾಗಿ ಸಾರಿಗೆ ಸಚಿವ ಆಂಟೋನಿ ರಾಜು ತಿಳಿಸಿದ್ದಾರೆ.

siteadmin

ಹೆಸರು ಬದಲಿಸಿದ್ರೂ ವಿಧಿ ಬದಲಾಯಿಸಲು ಸಾಧ್ಯವಾಗಲಿಲ್ಲ- ಅರ್ಧ ಆಯಸ್ಸಿನಲ್ಲೆ ಚಿರ ನಿದ್ರೆಗೆ ಜಾರಿದ ಅಪ್ಪು

Previous article

‘ಮಿಷನ್ ಕೊಲಂಬಸ್’ ಸಿನಿಮಾದಲ್ಲಿ ಡಿಫರೆಂಟ್ ಲುಕ್ ಗೆ ಅಪ್ಪು ಫಿದಾ- ಕಥೆ ಇದೆ ಆದರೆ ಈಗ ಕಥಾ ನಾಯಕನೆ ಇಲ್ಲ

Next article

You may also like

Comments

Comments are closed.

More in Health Tips