Health Tips

ಬೆಳ್ಳುಳ್ಳಿ ಹೆಚ್ಚು ಸೇವಿಸಿ, ಹೃದಯ ಬೇನೆಯಿಂದ ಮುಕ್ತರಾಗಿ- ಬೆಳ್ಳುಳ್ಳಿಯ ಬಹುಪಯೋಗದ ಬಗ್ಗೆ ಉಪಯುಕ್ತ ಮಾಹಿತಿ

0

ಹಿತ್ತಲ ಗಿಡ ಮದ್ದಲ್ಲ ಎಂಬ ಗಾಧೆ ಮಾತು ಅಕ್ಷರಶಃ ಸತ್ಯ. ನಮ್ಮ ಹಿಂದಿನ ಪೀಳಿಗೆ ಮನೆಯಲ್ಲೆ ಸಿಗುವ ಆಹಾರ ಪದಾರ್ಥ ಸೇವನೆ, ಪಥ್ಯ ಅನುಕರಣೆಯಿಂದ ಸ್ವಾಸ್ಥ್ಯ ಆರೋಗ್ಯ ಕಾಪಾಡಿಕೊಳ್ಳುತ್ತಿದ್ದರು. ಆದರೆ ಅದರ ಮಹತ್ವ ತಿಳಿಯದ ನಮ್ಮ ಈಗಿನ ಪೀಳಿಗೆ ಇಂಗ್ಲಿಷ್ ಮೆಡಿಸನ್ ಗೆ ಮಾರು ಹೋಗಿದೆ. ಇಂಗ್ಲಿಷ್ ಮೆಡಿಸನ್ ನಲ್ಲಿ ನೋವು ಸೇರಿದಂತೆ ಹಲವು ರೋಗಗಳು ಶೀಘ್ರ ಗುಣಮುಖವಾಗಬಹುದು. ಆದರೆ ಅದರಿಂದ ಆಗುವ ಸೈಡ್ ಎಫೆಕ್ಟ್ ಅರಿವು ಅವರಿಗೆ ಇರುವುದಿಲ್ಲ.
ಅಂದ ಹಾಗೆ ಬೆಳ್ಳುಳ್ಳಿ ಸೇವನೆ ಹೃದಯ ರೋಗಕ್ಕೆ ರಾಮಬಾಣ. ‘ಆರೋಗ್ಯವೇ ಭಾಗ್ಯ’ದಲ್ಲಿ ಬೆಳ್ಳುಳ್ಳಿ ಸೇವನೆಯಿಂದ ಆಗುವ ಉಪಯೋಗದ ಬಗ್ಗೆ ವಿವರವಾಗಿ ತಿಳಿಸುತ್ತೇವೆ. ಕೋಲೆಸ್ಟ್ರಾಲ್ ಎಂಬ ಹೆಚ್ಚು ಕೊಬ್ಬಿನ ಅಂಶವುಳ್ಳ ವಸ್ತು ರಕ್ತನಾಳದಲ್ಲಿ ಸೇರುವುದರಿಂದ ಆಗುವ ‘ಆರ್ಟೇರಿಯೋಸ್ಕ್ಲೆ ರೇಸಸ್’ ನಿಂದ ಹೃದಯ ಬೇನೆ ಉಂಟಾಗುತ್ತದೆ. ಇದೊಂದು ಪ್ರಯೋಗದ ಫಲವಾಗಿ ಸ್ಥಿರಪಟ್ಟ ಸಂಗತಿಯಾಗಿರುತ್ತದೆ. ಬೆಳ್ಳುಳ್ಳಿ ಈ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡುತ್ತದೆ.
ಈ ಪ್ರಯೋಗಗಳನ್ನು ಕೈಗೊಂಡ ಸಂಶೋಧಕರು, ಮೊಲಗಳಿಗೆ ಹೆಚ್ಚಿನ ಪ್ರಮಾಣದ ಕೊಲೆಸ್ಟ್ರಾಲ್ ಅಂಶವುಳ್ಳ ಆಹಾರ ಪದಾರ್ಥಗಳನ್ನು 16 ವಾರಗಳ ಕಾಲ ತಿನ್ನಿಸಿದ್ದರು. ಅದರ ಪರಿಣಾಮವಾಗಿ ಆ ಪ್ರಾಣಿಯ ಮುಖ್ಯ ರಕ್ತನಾಳವಾದ ಮಹಾ ಅಪಧಮನಿಯಲ್ಲಿ ಕೊಲೆಸ್ಟ್ರಾಲ್ ಶೇಖರಣೆಯಾಯಿತು. ಆ ನಂತರ ಆ ಪ್ರಾಣಿಗಳಿಗೆ ಬೆಳ್ಳುಳ್ಳಿಯನ್ನು ತಿನ್ನಿಸಿದಾಗ ಕೊಬ್ಬಿನ ಅಂಶ ಕರಗಿ ಕೊಲೆಸ್ಟ್ರಾಲ್ ಕಡಿಮೆ ಆಯಿತು.
ಹೀಗೆ ಹಲವು ರೀತಿಯ ಮನೆ ಮದ್ದಿನ ಮೂಲಕ ನಾವು ಸ್ವಾಸ್ಥ್ಯ ಆರೋಗ್ಯ ಕಾಪಾಡಿಕೊಳ್ಳಬಹುದು. ಇದರ ಪರಿಣಾಮ ವೈದ್ಯರಿಂದ ದೂರ ಕೂಡ ಇರಬಹುದು. ಜೊತೆಗೆ ಸೈಡ್ ಎಫೆಕ್ಟ್ ನಿಂದ ಮುಕ್ತವಾಗಬಹುದು.

siteadmin

ಸಿಡಿ ಲೇಡಿಯ 5 ವಿಡಿಯೋ ರಿಲೀಸ್- ನನಗೆ ಭಯವಿದೆ, ನಾನು ಜಡ್ಜ್ ಮುಂದೆ ಹೇಳಿಕೆ ನೀಡುವೆ- SIT ಬಗ್ಗೆ ನಂಬಿಕೆ ಇಲ್ಲ

Previous article

SIT ಗೆ ಕಾಣದ ‘ಅವಳ ನೆರಳು’- ಚಳ್ಳೆ ಹಣ್ಣು ತಿನ್ನಿಸಿ ಚಾಣಾಕ್ಷತನ ಮೆರೆಯುತ್ತಿರುವ ‘ಸಿಡಿ ಲೇಡಿ’- ಆಕೆ ರೆಸಾರ್ಟ್ ನಲ್ಲಿರುವ ಸಾಧ್ಯತೆ

Next article

You may also like

Comments

Leave a reply

Your email address will not be published. Required fields are marked *

More in Health Tips