Health Tips

ಅಪ್ಪು ಸಾವಿನಿಂದ ಬೆಚ್ಚಿಬಿದ್ದ ಮೈಸೂರು, ಬೆಂಗಳೂರು ಜನರು- ಜಯದೇವ ಹೃದ್ರೋಗ ಆಸ್ಪತ್ರೆಗೆ ದೌಡು- ತಪಾಸಣೆಗೆ ಮುಗಿಬಿದ್ದರು

0

ಮೈಸೂರು/ಬೆಂಗಳೂರು- ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಾರ್ಡಿಯಾಕ್ ಅರೆಸ್ಟ್ ನಿಂದ ಮೃತಪಟ್ಟ ಆಘಾತದಿಂದ ಬೆಚ್ಚಿ ಬಿದ್ದಿರುವ ಮೈಸೂರು ಹಾಗೂ ಬೆಂಗಳೂರಿನ ನೂರಾರು ಜನರು ಈಗ ಜಯದೇವ ಹೃದ್ರೋಗ ಆಸ್ಪತ್ರೆಗೆ ತಪಾಸಣೆಗೆಂದು ಹೆಚ್ಚಾಗಿ ಬರುತ್ತಿದ್ದಾರೆ.

ಮೈಸೂರಿನ ಕೆಆರ್ ಎಸ್ ರಸ್ತೆಯಲ್ಲಿರುವ ಜಯದೇವ ಹೃದ್ರೋಗ ಆಸ್ಪತ್ರೆ ಹಾಗೂ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ತಪಾಸಣೆಗೆಂದು ಉದ್ದನೆ ಸಾಲು ಇಂದು ಕಂಡು ಬಂದಿದೆ.

ಮೈಸೂರು ಹಾಗೂ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ಕಳೆದ ಎರಡು ದಿನದ ಅವಧಿಯಲ್ಲಿ ತಪಾಸಣೆಗೆ ಬರುವರ ಸಂಖ್ಯೆ ಶೇಕಡಾ 25 ಕ್ಕಿಂತ ಹೆಚ್ಚಾಗಿದೆ. ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ 105 ಹೃದ್ರೋಗ ತಜ್ಞರಿದ್ದಾರೆ. ಪ್ರತಿದಿನ 1,200 ಹೊರ ರೋಗಿಗಳು ಬರುತ್ತಿದ್ದರು. ಆದರೆ ಈಗ 1,500 ರೋಗಿಗಳು ಬರುತ್ತಿದ್ದಾರೆ ಎಂದು ಆಸ್ಪತ್ರೆಯ ನಿರ್ದೇಶಕರೂ ಆದ ಖ್ಯಾತ ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್ ಹೇಳಿದ್ದಾರೆ.

ಅತಿಯಾದ ಜಿಮ್ ವರ್ಕೌಟ್ ನಿಂದ ಪುನೀತ್ ರಾಜ್ ಕುಮಾರ್ ಗೆ ಕಾರ್ಡಿಯಾಕ್ ಅರೆಸ್ಟ್ ಆಗಿದೆ ಎಂಬ ಚರ್ಚೆಯ ಹಿನ್ನೆಲೆ ಬಹಳಷ್ಟು ಜನರು ಈಗ ಜಿಮ್ ನಿಂದ ವಿಮುಕ ರಾಗುತ್ತಿದ್ದಾರೆ ಎನ್ನಲಾಗಿದೆ.

siteadmin

ಪುನೀತ್ ನೇತ್ರದಾನದಿಂದ ಇಬ್ಬರಲ್ಲ ನಾಲ್ವರ ಬಾಳಿಗೆ ಬೆಳಕು- ಅಪ್ಪು ಅಭಿಮಾನಿ ಆತ್ಮಹತ್ಯೆ- ಪುನೀತ್ ನಂತೆ ನೇತ್ರದಾನ ಮಾಡುವಂತೆ ಡೆತ್ ನೋಟ್

Previous article

ಜವರಾಯನ ಮನೆ ಸೇರಿದ ಇಬ್ಬರು ಸುಂದರಿಯರು- ಸಾವಿನಲ್ಲೂ ಒಂದಾದ ಸ್ನೇಹಿತರು- ಹೇ, ವಿಧಿಯೇ ನಿನಗೆ ಕರುಣ ಇಲ್ಲವೇ…?

Next article

You may also like

Comments

Comments are closed.

More in Health Tips