Health Tips

ಕೆಮ್ಮಿನ ಸಿರಪ್ ಸೇವಿಸಿದ 3 ಮಕ್ಕಳು ಸಾವು- ಈ ಸಿರಪ್ ತುಂಬಾ ಡೇಂಜರಸ್- ಇದು ಯಾವ ಕಂಪನಿ ಸಿರಪ್ ಗೊತ್ತಾ…?

0

ಕೆಮ್ಮಿನ ಸಿರಪ್ ಸೇವಿಸಿದ ಮೂವರು ಮಕ್ಕಳು ಸಾವನ್ನಪ್ಪಿದ್ರೆ, 13 ಮಕ್ಕಳ ಪರಿಸ್ಥಿತಿ ಗಂಭೀರವಾಗಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಅಸ್ವಸ್ಥ ಮಕ್ಕಳನ್ನು ನವದೆಹಲಿಯ ಕಲಾವತಿ ಸರನ್ ಚಿಲ್ಡ್ರನ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ಕೆಮ್ಮಿನ ಸಿರಪ್ ವಿಷಪೂರಿತವಾಗಿದ್ದು, ಇದನ್ನು ಸೇವಿಸಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಕೆಮ್ಮಿನ ಈ ಸಿರಪ್ ನೀಡದಂತೆ ಕೇಂದ್ರ ಆರೋಗ್ಯ ಸಚಿವಾಲಯದ ಆರೋಗ್ಯ ಸೇವೆಗಳ ಮಹಾ ನಿರ್ದೇಶಕರು ಎಲ್ಲಾ ಡೆಸ್ಪೆನ್ಸರಿಗಳು ಹಾಗೂ ಆಸ್ಪತ್ರೆಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದೆ.

5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಈ ಸಿರಪ್ ನೀಡದಂತೆ ಸೂಚನೆ ನೀಡಿದ್ದರೂ ಅದನ್ನು ನೀಡಲಾಗುತ್ತಿದೆ. ಈ ಔಷಧದಿಂದ ಬಹಳಷ್ಟು ದುಸ್ಪರಿಣಾಮಗಳಾಗುತ್ತಿದೆ. ಕೆಮ್ಮಿನ ಈ ಸಿರಪ್ ಬಳಸಿದ ಮಗುವಿನಲ್ಲಿ ದೃಷ್ಠಿ ಮಾಸುವುದು, ನಿದ್ರೆ ಇಲ್ಲದೆ ಅಳುವುದು ಸೇರಿದಂತೆ ಹಲವು ರೀತಿಯ ಸೈಡ್ ಎಫೆಕ್ಟ್ ಗಳಾಗುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.

ಈ ಓಮೇಗಾ ಫಾರ್ಮಾಸಿಟಿಕಲ್ ಎಂಬ ಕಂಪನಿಯ ಈ ಸಿರಪ್ ಮಲ್ಟಿ ನ್ಯಾಷನಲ್ ಕಂಪನಿಯು ತಯಾರಿಸಲಿದ್ದು, ಇದನ್ನು ಕೂಡಲೇ ಹಿಂಪಡಬೇಕೆಂದು ಡಿಜಿಹೆಚ್ ಎಸ್ ಸೂಚನೆ ನೀಡಿದೆ.

ಮಕ್ಕಳಿಗೆ ಕೆಮ್ಮಿನ ಸಿರಪ್ ನೀಡುವಾಗ ಇದನ್ನು ಗಮನಿಸುವುದು ಅನಿವಾರ್ಯವಾಗಿದೆ. ಓಮೇಗಾ ಫಾರ್ಮಾಸಿಟಿಕಲ್ ಕಂಪನಿಯ ಈ ಸಿರಪ್ ಕೊಡಬಾರದೆಂದು ಡಿಹೆಚ್ ಎಚ್ ಎಸ್ ಕೂಡ ತಿಳಿಸಿದೆ. 

 

siteadmin

ಒಟ್ಟಿಗೆ ಕಂಡ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ- ಇವರ ಮಾತು ನಂಬಬಹುದೆ…?

Previous article

ಮುಂಬೈ ಷೇರು ಪೇಟೆ ತಲ್ಲಣ- ಒಂದೇ ದಿನ 9 ಲಕ್ಷ ಕೋಟಿ ಲಾಸ್- ಇವು ನಷ್ಟ ಹೊಂದಿದ ಕಂಪನಿಗಳು

Next article

You may also like

Comments

Comments are closed.

More in Health Tips